ಮೈಸೂರು, ನ.10-ನಾರ್ತ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾದ ಹಳೇ ಬಡಾವಣೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಅಂದಾಜು 1 ಕೋಟಿ ರೂ. ಮೌಲ್ಯದÀ ನಿವೇಶನಗಳನ್ನು ಮಂಗಳವಾರ ಪ್ರಾಧಿಕಾರವು ತೆರವು ಗೊಳಿಸಿತು. ಎನ್.ಆರ್.ಮೊಹಲ್ಲಾ ಹಳೇ ಬಡಾವಣೆಯಲ್ಲಿ ನಿ.ಸಂಖ್ಯೆ-537/ಕೆ ಮತ್ತು 537/ಎಲ್, 30×40 ಅಳತೆಯ ನಿವೇಶನಗಳನ್ನು ಮೋಸಿನ್‍ತಾಜ್ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ಮೈಸೂರು ಮಹಾನಗರಪಾಲಿಕೆಯಿಂದ ಖಾತೆ ಮಾಡಿಸಿಕೊಂಡು ನಿವೇ ಶನದ ಸುತ್ತಾ ಗೋಡೆ ನಿರ್ಮಿಸಿಕೊಂಡಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಿರ್ದೇಶನದ ಮೇರೆಗೆ ಮಂಗಳವಾರ ನರಸಿಂಹ ರಾಜ ಪೆÇಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿಯ ಭದ್ರತೆಯೊಂದಿಗೆ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅಧಿಕಾರಿಗಳಾದ ಜಿ.ಮೋಹನ್, ಹೆಚ್.ಎನ್.ರವೀಂದ್ರಕುಮಾರ್, ಸರ್ವೇ ಯರ್‍ಗಳು ಹಾಗೂ ಸಂಬಂಧಪಟ್ಟ ಸಹಾಯಕ, ಕಿರಿಯ ಅಭಿಯಂತರರು ಹಾಜರಿದ್ದರು.
