ಸೂಪರ್‍ಮಚ್ಚಿಗಾಗಿ ಹೈದರಾಬಾದ್‍ಗೆ ತೆರಳಿದ ಡಿಂಪಲ್‍ಕ್ವೀನ್
ಸಿನಿಮಾ

ಸೂಪರ್‍ಮಚ್ಚಿಗಾಗಿ ಹೈದರಾಬಾದ್‍ಗೆ ತೆರಳಿದ ಡಿಂಪಲ್‍ಕ್ವೀನ್

June 26, 2020

ಕೊರೊನಾ ಭೀತಿಯ ನಡುವೆಯೂ ಡಿಂಪಲ್‍ಕ್ವೀನ್ ರಚಿತಾರಾಮ್ ತೆಲುಗು ಸಿನಿಮಾ ಚಿತ್ರೀಕರಣಕ್ಕೆಂದು ಹೈದರಾಬಾದಿಗೆ ತೆರಳಿz್ದÁರೆ. ಇತ್ತೀಚೆಗಷ್ಟೇ ಟಿವಿ ಸೀರಿಯಲ್, ಸಿನಿಮಾಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ್ದು, ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿವೆ. ಕೆಲ ಕಲಾವಿದರು ಶೂಟಿಂಗ್‍ಗೆ ತೆರಳುತ್ತಿz್ದÁರೆ. ಸುಮಾರು ಮೂರು ತಿಂಗಳ ಕಾಲ ಚಿತ್ರದ ಶೂಟಿಂಗ್ ಇಲ್ಲದೇ ಮನೆಯ¯್ಲÉೀ ಕುಳಿತಿದ್ದ ರಚಿತಾ ರಾಮ್, ಸರ್ಕಾರ ಅನುಮತಿ ನೀಡಿದ ಕೂಡಲೇ ಸೂಪರ್‍ಮಚ್ಚಿ ಸಿನಿಮಾದ ಚಿತ್ರೀಕರಣಕ್ಕೆ ತೆರಳಿz್ದÁರೆ. ಶೂಟಿಂಗ್ ಸೆಟ್‍ನ ಫೆÇೀಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ಮಾಡುತ್ತಿರುವ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ.

ಇದು ರಚಿತಾರಾಮ್ ಅಭಿನಯದ ಮೊದಲ ತೆಲುಗು ಸಿನಿಮಾವಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್‍ದೇವ್ ಈ ಚಿತ್ರದ ನಾಯಕನಾಗಿ ನಟಿಸುತ್ತಿz್ದÁರೆ. ಜೊತೆಗೆ ಈ ಸಿನಿಮಾಗೆ ಪುಲಿ ವಾಸು ಅವರು ಆ್ಯP್ಷÀನ್‍ಕಟ್ ಹೇಳುತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿz್ದÁರೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಲಾಕ್‍ಡೌನ್ ಆದ ನಂತರ ಶೂಟಿಂಗ್ ನಿಲ್ಲಿಸಿತ್ತು. ಈಗ ಮತ್ತೆ ಆರಂಭಿಸಿದೆ. ಸರ್ಕಾರದ ನಿಯಮಾವಳಿ ಪಾಲಿಸಿ, ಮಾಸ್ಕ್, ಸಾನಿಟೈಸರ್ ಮತ್ತು ಕಡಿಮೆ ಸಿಬ್ಬಂದಿಯ ನೆರವಿನಿಂದ ಶೂಟಿಂಗ್ ಆರಂಭಿಸಿz್ದÁರೆ. ರಶ್ಮಿಕಾ ಮಂದಣ್ಣ, ನಬಾ ನಟೇಶ್ ಇವರ ನಂತರ ರಚಿತಾ ಕೂಡ ಮೊದಲ ಬಾರಿಗೆ ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳಲಿz್ದÁರೆ. ಈ ಸಿನಿಮಾಗೆ ರಿಜ್ವಾನ್ ಅವರು ಬಂಡವಾಳ ಹೂಡಿz್ದÁರೆ.

ಈ ಚಿತ್ರದ ಜೊತೆಗೆ ರಚಿತಾರಾಮ್ ಅವರು ಕನ್ನಡದಲ್ಲೂ ಸಹ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿz್ದÁರೆ. ಕನ್ನಡದಲ್ಲಿ ರಚಿತಾರಾಮ್ ಏಕ್ ಲವ್ ಯಾ, 100, ಡಾಲಿ, ಏಪ್ರಿಲï, ಸೀರೆ, ಸಂಜು ಅಲಿಯಾಸ್ ಸಂಜಯ್ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿz್ದÁರೆ. ರಚಿತಾರಾಮ್ ಈ ಹಿಂದೆ ಶಿವಣ್ಣ ಅಭಿನಯದ ಆಯುಷ್ಮಾನ್‍ಭವ ಚಿತ್ರದಲ್ಲಿ ಮಾನಸಿಕ ಅಸ್ವಸ್ಥೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Translate »