ಮದಗಜನಿಗೆ ಶೂಟಿಂಗ್ ಪ್ರಾರಂಭ !
ಸಿನಿಮಾ

ಮದಗಜನಿಗೆ ಶೂಟಿಂಗ್ ಪ್ರಾರಂಭ !

June 26, 2020

ಈಗಾಗಲೇ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಅಲ್ಲದೆ ಬಾಲಿವುಡ್‍ನ ಅಮಿರ್‍ಖಾನ್ ಜೊತೆಗೂ ನಟಿಸಿರುವ ನಟ ವಿಜಯ್ ಸೇತುಪತಿ ಅವರು ಸದ್ಯದಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಹೌದು, ಮಹೇಶ್‍ಕುಮಾರ್ ನಿರ್ದೇಶನದ `ಮದಗಜ’ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕೆಲ ನಟರ ಜೊತೆ ಮಾತುಕತೆ ನಡೆಸಿರುವ ನಿರ್ದೇಶಕ ಮಹೇಶ್, ತೆಲುಗಿನ ವಿಜಯ್ ಸೇತುಪತಿ ಅಥವಾ ತೆಲುಗಿನ ಜಗಪತಿಬಾಬು ಇಬ್ಬರಲ್ಲಿ ಒಬ್ಬರು ನಮ್ಮ ಚಿತ್ರದಲ್ಲಿ ವಿಲನ್ ಆಗಿ ನಟಿಸೋದು ಖಚಿತವಾಗಿದೆ ಎಂದು ಹೇಳಿದ್ದಾರೆ.

ಇಬ್ಬರ ಜೊತೆಗೂ ಮಾತುಕತೆ ನಡೆಸಿz್ದÉೀವೆ. ಇಬ್ಬರಲ್ಲಿ ಒಬ್ಬರು ಮದಗಜದಲ್ಲಿ ನಟಿಸೋದು ಖಚಿತ. ಅವರು ಯಾರು ಅನ್ನೋದನ್ನು ಈಗಲೇ ಹೇಳಲು ಆಗುವುದಿಲ್ಲ. ಸಂಭಾವನೆ, ಕಾಲ್‍ಶೀಟ್ ಎಲ್ಲವೂ ಫೈನಲ್ ಆದಮೇಲೆ ಜುಲೈ 10ರೊಳಗೆ ಒಂದು ಟೀಸರ್ ರೆಡಿಮಾಡಿ ರಿಲೀಸ್ ಮಾಡುತ್ತೇವೆ. ಅಂದೇ ಆ ನಟ ಯಾರು ಅನ್ನೋದನ್ನು ಅಧಿಕೃತವಾಗಿ ಬಹಿರಂಗ ಮಾಡುತ್ತೇವೆ ಎಂದರು. ಈಗಾಗಲೇ ವಾರಣಾಸಿಯಲ್ಲಿ ಶೇ.30ರಷ್ಟು ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಇನ್ನು ಮೈಸೂರಿನಲ್ಲಿ ಜುಲೈ 13ರಿಂದ ಒಟ್ಟು 32 ದಿನಗಳ ಕಾಲ ಶೂಟಿಂಗ್ ನಡೆಂiÀಲಿದೆ. ಅಲ್ಲಿ ನಾಯಕ ಶ್ರೀಮುರಳಿ ಮತ್ತು ನಾಯಕಿ ಆಶಿಕಾ ರಂಗನಾಥ್ ಕಾಂಬಿನೇಷನ್‍ನ ಚಿತ್ರೀಕರಣ ನಡೆಯುತ್ತದೆ. ಶೂಟಿಂಗ್ ಮಾಡುವುದಕ್ಕೆ ಎಲ್ಲ ರೀತಿಯಿಂದಲೂ ವ್ಯವಸ್ಥೆ ಮಾಡಿಕೊಂಡಿದ್ದು, ಸರ್ಕಾರ ನೀಡಿರುವ ರೂಲ್ಸ್‍ಗಳನ್ನು ಪಾಲಿಸಲಿz್ದÉೀವೆ. ಮೊದಲಿಗಿಂತ ಈಗ ಕಡಿಮೆ ಜನರನ್ನು ಇಟ್ಟುಕೊಂಡು ಶೂಟಿಂಗ್ ಮಾಡುತ್ತಿದ್ದೇವೆ. ನಮ್ಮ ನಿರ್ಮಾಪಕರು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿz್ದÁರೆ ಎಂದು ನಿರ್ದೇಶಕ ಮಹೇಶ್ ಹೇಳಿದರು. ಅಂದಹಾಗೆ ನಟ ವಿಜಯ ಸೇತುಪತಿ ತಮಿಳಿನಲ್ಲಿ ಹೀರೋ ಪಾತ್ರಗಳಲ್ಲದೆ ವಿಲನ್ ಪಾತ್ರದಲ್ಲೂ ಕಾಣಿಸಿಕೊಂಡಿ ದ್ದಾರೆ. ಇನ್ನು ಜಗಪತಿಬಾಬು ಅವರು ಕನ್ನಡಕ್ಕೆ ಹೊಸಬರೇನಲ್ಲ. ಈಗಾಗಲೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ದ್ದಾರೆ. ಸುದೀಪ್ ಅಭಿನಯದ ಬಚ್ಚನ್ ಹಾಗೂ ನಿಖಿಲ್ ಕುಮಾರಸ್ವಾಮಿ ನಟನೆಯ ಜಾಗ್ವಾರ್ ಮತ್ತು ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲೂ ಸಹ ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀಮುರಳಿ ಜೊತೆ ಇದೇ ಮೊದಲ ಬಾರಿಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್‍ಗೌಡ ಬಂಡವಾಳ ಹೂಡಿದ್ದಾರೆ.

Translate »