`ಪ್ರಚಂಡ ಪುಟಾಣಿಗಳು’ ಚಿತ್ರಕ್ಕೆ ಮುಹೂರ್ತ
ಸಿನಿಮಾ

`ಪ್ರಚಂಡ ಪುಟಾಣಿಗಳು’ ಚಿತ್ರಕ್ಕೆ ಮುಹೂರ್ತ

June 26, 2020

ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭವಾಗಬೇಕಿದ್ದ “ಪ್ರಚಂಡ ಪುಟಾಣಿಗಳು” ಚಲನಚಿತ್ರವು ಕೊರೊನಾ ಸಮಸ್ಯೆಗಳಿಂದ ಚಿತ್ರೀಕರಣ ಮುಂದೂಡಿ ಕೊನೆಗೂ ಈಗ ಮುಹೂರ್ತವನ್ನು ಆಚರಿಸಿಕೊಂಡಿದೆ.

ಶ್ರೀಮತಿ ಡಿ. ಸುನಿತ ಹಾಗೂ ಎನ್.ರಘು ಅವರ ಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್‍ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಚಂಡ ಪುಟಾಣಿಗಳು ಚಲನಚಿತ್ರಕ್ಕೆ ಇದೇ ಸೋಮುವಾರ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಂಡಕೋಟ ಗ್ರಾಮದ ಶ್ರೀ ಸತ್ಯಮ್ಮದೇವಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು. ಜಿಲ್ಲಾ ಪಂಚಾಯತ್ ಸದಸ್ಯೆ ಸುನಂದಮ್ಮ ವೆಂಕಟೇಶ್ ಚಿತ್ರಕ್ಕೆ ಮೊದಲ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಮಾಜ ಸೇವಕರಾದ ಸಿದ್ದೇಪಲ್ಲಿ ಸುಬ್ಬಾರೆಡ್ಡಿಯವರು ಮೊದಲ ದೃಶ್ಯಕ್ಕೆ ಕ್ಯಾಮರಾ ಚಾಲನೆ ಮಾಡಿದರು..

ಉದ್ಯಮಿ ಶ್ರೀಕಾಂತ್, ಸಮಾಜಸೇವಕರಾದ ವೆಂಕಟೇಶಪ್ಪ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಾಸ್ಟರ್ ಧ್ರುವ, ಮಾಸ್ಟರ್ ಶ್ರೀಹಷರ್À, ಮಾಸ್ಟರ್ ಕೀರ್ತನ್, ಬೇಬಿ ಅಂಕಿತ, ಬೇಬಿ ಸುಪ್ರಿತಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಅವಿನಾಶ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ತಾರಾಗಣದಲ್ಲಿ ಕೋಲಾರ್ ಬಾಲು, ಡ್ಯಾನಿಡಾ ಕೃಷ್ಣಮೂರ್ತಿ, ನಿಡುವಳ್ಳಿ ರೇವಣ್ಣ, ತಾರೇಹಳ್ಳಿ ಹನುಮಂತಪ್ಪ, ಮದನ್ ಮಂಜು, ಶ್ರೀಕಾಂತ್ ಸಂದೀಪ್ ಬುಲೆಟ್ ರಘು, ಮೊದಲಾದವರು ನಟಿಸುತ್ತಿದ್ದಾರೆ. ರಾಜೀವ್ ಕೃಷ್ಣ ಕಥೆ -ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ವಿನಯ್ ಆಲೂರು ಸಂಕಲನ, ಕೋಲಾರ್ ಸುಮಂತ್ ಸ್ಥಿರಚಿತ್ರಣ, ಸುರೇಶ್ ಕಂಬಳಿ ಸಾಹಿತ್ಯ, ವಿನುಮನಸು ಸಂಗೀತ, ಸುನಿಲ್‍ಕುಮಾರ್ ನಿರ್ವಹಣೆ ಚಿತ್ರತಂಡಕ್ಕಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಚಿತ್ರತಂಡ ಕೋಲಾರ ಚಿಕ್ಕಬಳ್ಳಾಪುರ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸುತ್ತಿದೆ.

Translate »