ಮೈಸೂರಿನ ಎಪಿಎಂಸಿಯ 3 ಕಡೆ `ಡಿಸ್‍ಇನ್ಫೆಕ್ಷನ್ ಟನಲ್’
ಮೈಸೂರು

ಮೈಸೂರಿನ ಎಪಿಎಂಸಿಯ 3 ಕಡೆ `ಡಿಸ್‍ಇನ್ಫೆಕ್ಷನ್ ಟನಲ್’

April 9, 2020

ಮೈಸೂರು, ಏ.8(ಎಂಕೆ)-ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಮೈಸೂರು-ನಂಜನಗೂಡು ರಸ್ತೆಯಲ್ಲಿ ರುವ ಎಪಿಎಂಸಿ ಮಾರುಕಟ್ಟೆಯ ಪ್ರತ್ಯೇಕ 3 ಸ್ಥಳಗಳಲ್ಲಿ ನಿರ್ಮಿಸಿರುವ `ಡಿಸ್‍ಇನ್ಫೆಕ್ಷನ್ ಟನಲ್’ (ವೈರಾಣು ನಾಶಕ ಸುರಂಗ) ಗಳಿಗೆ ಬುಧವಾರ ಚಾಲನೆ ನೀಡಲಾಯಿತು.

ಮೈಸೂರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಹೊಸಹುಂಡಿ ಗ್ರಾಮ ಪಂಚಾಯಿತಿ ಮತ್ತು ಎಪಿಎಂಸಿ ಸಹಯೋಗದಲ್ಲಿ ಮಾರುಕಟ್ಟೆಗೆ ಬರುವ ಮಳಿಗೆದಾರರು, ಕೂಲಿ ಕಾರ್ಮಿ ಕರು, ರೈತರ, ಗ್ರಾಹಕರ ಆರೋಗ್ಯ ರಕ್ಷಣೆಗಾಗಿ `ಡಿಸ್ ಇನ್ಫೆಕ್ಷನ್ ಟನಲ್’ಗಳನ್ನು ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾಗಿದೆ.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ತಾಪಂ ಇಓ ಕೃಷ್ಣಕುಮಾರ್, ಎಪಿಎಂಸಿ ಮಾರುಕಟ್ಟೆಗೆ ನಿತ್ಯ ಸಾವಿರಾರು ಜನರು ಭೇಟಿ ನೀಡು ತ್ತಿದ್ದು, ಕೊರೊನಾ ಸೋಂಕು ಹರಡದಂತೆ ತಡೆಯಲು ‘ಡಿಸ್ ಇನ್ಫೆಕ್ಷನ್ ಟನಲ್’ ನಿರ್ಮಿ ಸಲಾಗಿದೆ. ಮಾರುಕಟ್ಟೆಗೆ ಬರುವ ರೈತರು, ಮಳಿಗೆದಾರರು, ಕೂಲಿ ಕಾರ್ಮಿಕರು, ಗ್ರಾಹಕರು ಇದನ್ನು ಉಪಯೋಗಿಸಬೇಕು ಎಂದು ಮನವಿ ಮಾಡಿದರು.

ವಿವಿಧ ಹಂತಗಳಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ‘ಡಿಸ್‍ಇನ್ಫೆಕ್ಷನ್ ಟನಲ್’ ನಿರ್ಮಿಸಲಾಗಿದೆ. ಒಂದು ಬಾರಿ ಟನಲ್ ಒಳಗೆ ಪ್ರವೇಶ ಮಾಡಿದರೆ ಎರಡು ಗಂಟೆ ಅವಧಿ ಯಾವುದೇ ಸೋಂಕು ಹರಡ ದಂತೆ ಸೋಡಿಯಂ ಹೈಪ್ಲೋಕ್ಲೋರೈಡ್ ರಾಸಾಯನಿಕ ದ್ರಾವಣ ಸಿಂಪಡಿಸ ಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ತಹಸಿಲ್ದಾರ್ ರಕ್ಷಿತ್, ಹೊಸಹುಂಡಿ ಗ್ರಾಪಂ ಪಿಡಿಓ ಸತೀಶ್, ಎಪಿಎಂಸಿ ಮಾರು ಕಟ್ಟೆ ಉಪಾಧ್ಯಕ್ಷ ಜವರಪ್ಪ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »