ರೈತರಿಂದ ಜನರಿಗೆ: ಎಸ್‍ಎಂಪಿ ಫೌಂಡೇಷನ್ ಭಿನ್ನ ಪ್ರಯತ್ನ
ಮೈಸೂರು

ರೈತರಿಂದ ಜನರಿಗೆ: ಎಸ್‍ಎಂಪಿ ಫೌಂಡೇಷನ್ ಭಿನ್ನ ಪ್ರಯತ್ನ

April 9, 2020

ಮೈಸೂರು,ಏ.8(ವೈಡಿಎಸ್)-ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಿ ಖರೀದಿಸಿ ಗ್ರಾಹ ಕರಿಗೆ ಕೈಗೆಟಕುವ ದÀರದಲ್ಲಿ ಅಕ್ಕಿ, ತರಕಾರಿ ಪೂರೈಕೆಗೆ ಸಂಸ್ಥೆಯೊಂದು ಮುಂದಾ ಗಿದೆ. ರೈತರು ಬೆಳೆದ ಬೆಳೆ ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ರಸ್ತೆ, ಚರಂಡಿಗೆ ಸುರಿಯುತ್ತಿದ್ದರು. ಇದನ್ನು ಕಂಡ ಮೈಸೂರಿನ ಎಸ್‍ಎಂಪಿ ಫೌಂಡೇಷನ್, ಮಾರುಕಟ್ಟೆ ಬೆಲೆಗೆ ರೈತರಿಂದ ನೇರವಾಗಿ ಖರೀದಿಸಿ, ಗ್ರಾಹಕರಿಗೆ ಅನುಕೂಲವಾಗುವಂತೆ ಕೈಗೆಟಕುವ ದರದಲ್ಲಿ ವಿಶ್ವೇಶ್ವರ ನಗರದಲ್ಲಿರುವ ಫೌಂಡೇಷನ್ ಕಚೇರಿ ಆವರಣದಲ್ಲಿ ವಿತರಿಸುತ್ತಿದೆ.

ಬೆಂಡೆಕಾಯಿ, ಹೂಕೋಸು, ಎಲೆಕೋಸು, ತೊಂಡೇಕಾಯಿ, ಕ್ಯಾರೆಟ್, ಬೀಟ್ ರೂಟ್, ಹಸಿಮೆಣಸಿನಕಾಯಿ, ಮಂಗಳೂರು ಸೌತೆ, ಟೊಮ್ಯಾಟೊ, ಗೆಣಸು ಸೇರಿದಂತೆ 14 ಬಗೆಯ ತರಕಾರಿಗಳಿದ್ದು, ಯಾವುದೇ ತರಕಾರಿ ಖರೀದಿಸಿ ದರೂ ಕೆ.ಜಿಗೆ 10ರೂ. ಅಷ್ಟೆ. ಕೆಜಿ ಸೋನಾ ಮಸೂರಿ ಅಕ್ಕಿಗೆ 20 ರೂ., ತೆಂಗಿನಕಾಯಿ 1ಕ್ಕೆ 10 ರೂ., ತೊಗರಿಬೇಳೆ ಕೆಜಿ 80 ರೂ.ಗೆ ನೀಡಲಾಗು ತ್ತಿದೆ. ಕುಟುಂಬವೊಂದಕ್ಕೆ 4 ಕೆಜಿ ತರಕಾರಿ, 2 ಕೆಜಿ ಅಕ್ಕಿ ಮಾತ್ರ ನಿಗದಿ ಪಡಿಸಲಾಗಿದೆ. ಪ್ರತಿ ದಿನ ಬಂಡಿಪಾಳ್ಯದ ಆರ್‍ಎಂಸಿಯಿಂದ 13 ಆಪೇ ಆಟೋಗಳಲ್ಲಿ ತರಕಾರಿಗಳನ್ನು ತುಂಬಿಕೊಂಡು ಬಂದು ಬೆಳಿಗ್ಗೆ 8 ಗಂಟೆಯಿಂದ ಮಾರಾಟ ಆರಂಭಿಸಿ ದಾಸ್ತಾನು ಮುಗಿಯುವವರೆಗೂ ವಿತರಿಸಲಾಗುತ್ತಿದೆ.

 

Translate »