ಕುಂಬಾರಕೊಪ್ಪಲಿನ ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಕುಂಬಾರಕೊಪ್ಪಲಿನ ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

June 12, 2020

ಮೈಸೂರು, ಜೂ.11(ಎಂಟಿವೈ)- ಲಾಕ್ ಡೌನ್ ವೇಳೆ ಸಂತ್ರಸ್ತರಾಗಿದ್ದ ಚಾಮರಾಜ ಕ್ಷೇತ್ರದ ಕುಂಬಾರಕೊಪ್ಪಲಿನ ಒಂದು ಸಾವಿರ ಬಡ ಕುಟುಂಬಗಳಿಗೆ ಪಾಲಿಕೆ ಮಾಜಿ ಸದಸ್ಯ ಶಿವಮಾದು ಅವರ ವತಿ ಯಿಂದ ನೀಡಲಾದ ದಿನಸಿ ಕಿಟ್ ವಿತರಿ ಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ವಾಸು ಚಾಲನೆ ನೀಡಿದರು.

ಕುಂಬಾರಕೊಪ್ಪಲಿನ ಮಹಾದೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಬಡಾ ವಣೆಯಲ್ಲಿನ ಒಂದು ಸಾವಿರ ಬಡಕುಟುಂಬ ಗಳಿಗೆ ಅಕ್ಕಿ, ಬೇಳೆ, ರಾಗಿಹಿಟ್ಟು ಸೇರಿದಂತೆ ಅಗತ್ಯ ವಸ್ತುಗಳುಳ್ಳ ಕಿಟ್ ವಿತರಿಸಿದರು.

ಬಳಿಕ ಮಾಜಿ ಶಾಸಕ ವಾಸು ಮಾತ ನಾಡಿ, ಮೈಸೂರಿನ ಕುಂಬಾರಕೊಪ್ಪಲಿಗೆ ತನ್ನದೇ ಆದ ಇತಿಹಾಸವಿದೆ. ದಿ.ಕೆಂಗೇ ಗೌಡರ ಕಾಲದಿಂದಲೂ ಕುಂಬಾರಕೊಪ್ಪಲು ಕಾಂಗ್ರೆಸ್‍ನ ಭದ್ರಕೋಟೆಯಂತಿದೆ. ಈ ಹಿಂದೆ ಜಯರಾಮ್, ಶಿವಮಾದು ಇನ್ನಿತರರು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ಕುಂಬಾರಕೊಪ್ಪಲಿನ ಅಭಿವೃದ್ಧಿ ಮಾಡಿಕೊಂಡು ಬಂದಿದ್ದಾರೆ. ಈಗಲೂ ಶಿವಮಾದು ಹಾಗೂ ಬಡಾ ವಣೆಯ ಪ್ರಮುಖರು ಬಡಕುಟುಂಬಗಳಿಗೆ ನೆರವು ನೀಡುವ ಶಕ್ತಿ ಹೊಂದಿದ್ದಾರೆ. ಎಲ್ಲಿಯೂ ಪ್ರಚಾರ ಬಯಸದೆ ಕಾರ್ಯ ಕ್ರಮ ನಡೆಸಿದ್ದೇವೆ. ಆದರೆ ಅದೇ ಅಪಾರ್ಥಕ್ಕೆ ಎಡೆಮಾಡಿ ಕೊಟ್ಟಿತು. ಈ ಹಿನ್ನೆಲೆಯಲ್ಲಿ ಪಡುವಾರಹಳ್ಳಿಯಲ್ಲಿ ಬಡವ ರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯ ಕ್ರಮಕ್ಕೆ ಸುತ್ತೂರು ಮಠ ಹಾಗೂ ಆದಿ ಚುಂಚನಗಿರಿ ಮಠದ ಶ್ರೀಗಳು ಆಗಮಿಸಿ, ದಿನಸಿ ಕಿಟ್ ವಿತರಿಸಿ ಆಶೀರ್ವದಿಸಿದರು.ಹಿತೈಷಿಗಳೇ ಕಿಟ್ ದುರುಪಯೋಗ ಆಗ ಬಾರದು ಎಂದು ನಮ್ಮ ಹೆಸರು ಸೇರಿಸಿ ದ್ದಾರೆ ಎಂದು ವಿವರಿಸಿದರು.

ಭೂಮಿ ಬೆಲೆ ಗಗನಕ್ಕೆ: ಜಯದೇವ, ಜಿಲ್ಲಾಸ್ಪತ್ರೆ, ಟ್ರಾಮ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪಂಚಕರ್ಮ ಆಸ್ಪತ್ರೆ, ಪಿಕೆ ಸ್ಯಾನಿಟೋರಿಯಂ ಸೇರಿದಂತೆ ವಿವಿಧ ದೊಡ್ಡ ಆಸ್ಪತ್ರೆಗಳು ಕುಂಬಾರ ಕೊಪ್ಪಲು ಸುತ್ತಮುತ್ತಲಲ್ಲೇ ಇರುವು ದರಿಂದ ಮುಂದಿನ 10 ವರ್ಷದ ಬಳಿಕ ಈ ಭಾಗದ ಭೂಮಿಗೆ ಚಿನ್ನದ ಬೆಲೆ ಬರುತ್ತದೆ. ಜಯಲಕ್ಷ್ಮೀಪುರಂ ಬಡಾ ವಣೆಗಿಂತಲೂ ಹೆಚ್ಚಿನ ಬೆಲೆ ಇಲ್ಲಿ ಸಿಗ ಲಿದೆ ಎಂದು ಭವಿಷ್ಯ ನುಡಿದರು.

ಕೆಪಿಸಿಸಿ ಉಸ್ತುವಾರಿ ಎಂ.ಸಿ.ಕುಮಾರ್, ಕಾಂಗ್ರೆಸ್ ನಗರ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಪುಷ್ಪಲತಾ ಜಗ ನ್ನಾಥ್, ನಗರ ಪಾಲಿಕೆ ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ಪಾಲಿಕೆ ಸದಸ್ಯೆ ಉಷಾ ಕುಮಾರ್, ಮಾಜಿ ಸದಸ್ಯರಾದ ಜಯರಾಮ್, ಎಂ.ರಮೇಶ್, ಲಲಿತಮ್ಮ ವಿಷಕಂಠೇ ಗೌಡ, ರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರ್ ಕುಮಾರ್, ವಾರ್ಡ್ ಅಧ್ಯಕ್ಷ ನಾಗರಾಜು, ಮುಖಂಡರಾದ ಅಂಗಡಿ ಚೆಲುವೇಗೌಡ, ಎಂಜಿ ಕೊಪ್ಪಲು ಕೃಷ್ಣ, ಕೃಷ್ಣಪ್ಪ, ಸುರೇಶ್, ಮಹೇಶ್, ನಾಗ ರಾಜು, ಮಹದೇವು, ಶಿವನಂಜೇಗೌಡ, ನಿಂಗರಾಜು ಲಿಂಗರಾಜು, ಮರಿಲಿಂಗು, ಸುದರ್ಶನ, ಮಂಚೇಗೌಡನಕೊಪ್ಪಲು ರವಿ ಸೇರಿದಂತೆ ಇನ್ನಿತರರಿದ್ದರು.

Translate »