ಮೈಸೂರು, ಜೂ.11-ಮೈಸೂರು ಮತ್ತು ಚಾಮರಾಜ ನಗರ ಅವಿಭಜಿತ ಜಿಲ್ಲೆಯ ನಾಯಕ ಜನಾಂಗದ ಪ್ರಭಾವಿ ಮುಖಂಡ, ಚಾಮ ರಾಜನಗರ ನಗರಸಭೆ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಅವರನ್ನು ವಿಧಾನ ಪರಿ ಷತ್ ಸದಸ್ಯರಾಗಿ ನೇಮಕ ಮಾಡಬೇಕೆಂದು ಮೈಸೂರು (ರಾಜ ಪರಿವಾರ) ನಾಯಕರ ಪಡೆ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ಟೆನ್ನಿಸ್ ಗೋಪಿ, ಇಲವಾಲ ಕೃಷ್ಣ ಮುಂತಾದವರು, ನಾಯಕ ಜನಾಂಗದ ಮುಖಂಡರಾದ ಎಂ.ರಾಮಚಂದ್ರ ಚಾಮರಾಜನಗರ ನಗರಸಭೆಯ ಅಧ್ಯಕ್ಷರಾಗಿ, ಚಾಮರಾಜನಗರ ನಗರಾ ಭಿವೃದ್ಧಿ ಪ್ರಾಧಿಕಾರ (ಚೂಡಾ) ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಲ್ಲಿದ್ದ ಅವರಿಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡುವ ಭರವಸೆಯೊಂದಿಗೆ ಬಿಜೆಪಿಗೆ ಕರೆತರ ಲಾಯಿತು. ಭರವಸೆಯಂತೆ ಟಿಕೆಟ್ ದೊರೆಯದಿದ್ದರೂ ಕೂಡ ರಾಮಚಂದ್ರ ಅವರು ಲೋಕಸಭಾ ಚುನಾವಣೆ ಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಾಯಕ ಜನಾಂಗದ ಮತಗಳನ್ನು ಕ್ರೋಢೀಕರಣ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗುವ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದಾರೆ. ಆದ್ದರಿಂದ ರಾಮಚಂದ್ರ ಅವರನ್ನು ವಿಧಾನ ಪರಿಷತ್‍ಗೆ ನೇಮಕ ಮಾಡುವ ಮೂಲಕ ನಾಯಕ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಪ್ರಕ ಟಣೆಯಲ್ಲಿ ಬಿಜೆಪಿ ವರಿಷ್ಠರಿಗೆ ಮನವಿ ಮಾಡಲಾಗಿದೆ.