ವಿವಿ ಧನ ಸಹಾಯ ಆಯೋಗದ ಪಟ್ಟಿಯಲ್ಲಿ ಜೆಎಸ್‍ಎಸ್ ವಿವಿಗೆ ಸ್ಥಾನ
ಮೈಸೂರು

ವಿವಿ ಧನ ಸಹಾಯ ಆಯೋಗದ ಪಟ್ಟಿಯಲ್ಲಿ ಜೆಎಸ್‍ಎಸ್ ವಿವಿಗೆ ಸ್ಥಾನ

June 12, 2020

ಮೈಸೂರು,ಜೂ.11-2008ರಲ್ಲಿ ಸ್ಥಾಪಿಸಲಾದ ಜಗ ದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾನಿಲಯವನ್ನು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋ ಗವು ಪರಿಗಣಿತ ವಿಶ್ವವಿದ್ಯಾನಿಲಯಗಳಡಿ ಯಲ್ಲಿನ ಸಂಸ್ಥೆಯಲ್ಲಿ ದರ್ಜೆ-2 ಎಂದು ವರ್ಗೀಕರಿಸಿದೆ. ಪ್ರಸ್ತುತ, ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತನ್ನ 5ನೇ ಆವೃತ್ತಿಯ 2020ನೇ ಸಾಲಿನ ರ್ಯಾಂಕಿಂಗ್ ಪಟ್ಟಿಯನ್ನು ಗುರುವಾರ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್, ದೆಹಲಿಯಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್, ಮೈಸೂರು, ತನ್ನ ಸ್ಥಾನವನ್ನು ಏರಿಸಿಕೊಂಡು ದೇಶದ ಒಟ್ಟು 1667 ವಿಶ್ವವಿದ್ಯಾನಿಲಯಗಳ ಪೈಕಿ 33ನೇ ಸ್ಥಾನ ಗಳಿಸಿದೆ. ಒಟ್ಟಾರೆಯಾಗಿ ಸತತ ಐದನೇ ಬಾರಿಗೆ ಜೆಎಸ್‍ಎಸ್ ಎಹೆಚ್‍ಎಆರ್ ದೇಶದ ಮೊದಲ ಅಗ್ರಗಣ್ಯ 50 ವಿವಿಗಳ ಪೈಕಿಯ ಸ್ಥಾನವನ್ನು ಉಳಿಸಿಕೊಂಡಿದೆ.

ಜೆಎಸ್‍ಎಸ್ ಎಹೆಚ್‍ಎಆರ್ ಇದರ ಅಂಗಸಂಸ್ಥೆ ಗಳಾದ ಜೆಎಸ್‍ಎಸ್ ದಂತ ವೈದ್ಯಕೀಯ ಮಹಾ ವಿದ್ಯಾಲಯವು 10ನೇ ಸ್ಥಾನವನ್ನು, ಮತ್ತು ಜೆಎಸ್‍ಎಸ್ ಕಾಲೇಜ್ ಆಫ್ ಫಾರ್ಮಸಿ ಊಟಿ ಇದು 9ನೇ ಸ್ಥಾನವನ್ನು ಗಳಿಸಿದ್ದರೆ, ಜೆಎಸ್‍ಎಸ್ ಕಾಲೇಜ್ ಆಫ್ ಮೈಸೂರು 10ನೇ ಸ್ಥಾನವನ್ನು ಗಳಿಸಿರುತ್ತದೆ. ಮತ್ತೊಂದು ಅಂಗಸಂಸ್ಥೆಯಾದ ಜೆಎಸ್‍ಎಸ್ ವೈದ್ಯಕೀಯ ಮಹಾ ವಿದ್ಯಾಲಯವು ದೇಶದ ಮೊದಲ 20 ಸ್ಥಾನಗಳ ಪೈಕಿ ಸ್ಥಾನ ಗಳಿಸಿರುತ್ತದೆ. ವಿದ್ಯಾರ್ಜನೆ, ಸಂಶೋ ಧನೆ ಮತ್ತು ಸೇವೆಗಳಲ್ಲಿ ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜು ಕೇಶನ್ ಅಂಡ್ ರಿಸರ್ಚ್ ಭಾರತ ಮತ್ತು ವಿದೇಶಗಳಲ್ಲಿ ಗುಣಮಟ್ಟದ ಶಿಕ್ಞಣ ನೀಡುವಲ್ಲಿ ಗಣ್ಯಸ್ಥಾನವೆನಿಸಿಕೊಂಡಿದೆ. ವಿಶ್ವವಿದ್ಯಾನಿಲಯವು ಶೈಕ್ಷಣಿಕ, ಸಂಶೋಧನೆ, ಪದವಿ ಫಲಿತಾಂಶ, ಗ್ರಹಿಕೆ ಮತ್ತು ಔಟ್ ರೀಚ್ ಗಳಿಂದ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಸದೃಢ ವಾಗಿ ಮುನ್ನಡೆಯಲು ಶ್ರಮಿಸುತ್ತಿದೆ.

ಇಂತಹ ಗುರುತರ ಮೈಲಿಗಲ್ಲುಗಳನ್ನು ಸಾಧಿಸು ವಲ್ಲಿ ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜು ಕೇಶನ್ ಅಂಡ್ ರಿಸರ್ಚ್‍ನ ಎಲ್ಲಾ ಶ್ರೇಯಗಳೂ, ಇದರ ಕುಲಾಧಿಪತಿಗಳು ಹಾಗೂ ಪರಮಪೂಜ್ಯರೂ ಆಗಿರುವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಪ್ರೋತ್ಸಾ ಹವೇ ಕಾರಣವಾಗಿದೆ. ಜೊತೆಗೆ ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟ್‍ಸೂರ್‍ಮಠ್ ಅವರ ಉತ್ತಮ ಆಡಳಿತ, ನಿರ್ದೇಶನಗಳು ಮತ್ತು ಸಮಕುಲಾಧಿಪತಿ ಗಳಾದ ಡಾ.ಬಿ.ಸುರೇಶ್ ಅವರ ಬಹುಮುಖ ಪ್ರತಿಭೆ, ಹಾಗೂ ಕುಲಪತಿ ಡಾ.ಸುರಿಂದರ್ ಸಿಂಗ್ ಮತ್ತು ಕುಲಸಚಿವ ಡಾ. ಬಿ.ಮಂಜುನಾಥ್ ಅವರ ಉತ್ತಮ ಆಡಳಿತವೂ ಕಾರಣವಾಗಿದೆ.

Translate »