ದಾನಿಗಳು ನೀಡಿದ ದಿನಸಿ ಕಿಟ್‍ಗಳನ್ನು 380   ಆಟೋರಿಕ್ಷಾ ಚಾಲಕರಿಗೆ ವಿತರಿಸಿದ ಪಾಲಿಕೆ
ಮೈಸೂರು

ದಾನಿಗಳು ನೀಡಿದ ದಿನಸಿ ಕಿಟ್‍ಗಳನ್ನು 380  ಆಟೋರಿಕ್ಷಾ ಚಾಲಕರಿಗೆ ವಿತರಿಸಿದ ಪಾಲಿಕೆ

May 21, 2020

ಮೈಸೂರು, ಮೇ 20(ಪಿಎಂ)- ಲಾಕ್‍ಡೌನ್‍ನಿಂ ದಾಗಿ ಕಷ್ಟಕ್ಕೆ ಸಿಲುಕಿರುವ ಮೈಸೂರಿನ ಆಟೋರಿಕ್ಷಾ ಚಾಲಕರಿಗೆ ಮಹಾನಗರ ಪಾಲಿಕೆ ವತಿಯಿಂದ ದಿನಸಿ ಕಿಟ್‍ಗಳನ್ನು ಬುಧವಾರ ವಿತರಣೆ ಮಾಡಲಾಯಿತು.

ನಗರದ ದಾನಿಗಳಿಂದ ಸಂಗ್ರಹಿಸಿದ ದಿನಸಿ ಪದಾರ್ಥ ಗಳನ್ನು ಪಾಲಿಕೆಯು ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ವಿವಿಧ ಕ್ಷೇತ್ರದ ಜನರಿಗೆ ನೀಡುತ್ತಾ ಬಂದಿದ್ದು, ಈವರೆಗೂ ಟ್ಯಾಕ್ಸಿ ಚಾಲಕರು, ಟಾಂಗಾವಾಲಗಳು, ಪಡಿತರ ಚೀಟಿ ಇಲ್ಲದ ನಿರಾಶ್ರಿತ ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ. ಮೈಸೂರಿನ ಕಾಡಾ ಕಚೇರಿ ಆವರಣ ದಲ್ಲಿ ಮೈಸೂರು ಆಟೋರಿಕ್ಷಾ ಚಾಲಕರ ಸಂಘದ 220 ಸದಸ್ಯರಿಗೆ ಹಾಗೂ ಅಶೋಕಪುರಂನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಆವರಣದಲ್ಲಿ ಅಶೋಕಪುರಂನ ಆದಿ ಕರ್ನಾಟಕ ಆಟೋ ಚಾಲಕರು ಮತ್ತು ಮಾಲೀಕರ ಸಂಘದ 160 ಸದಸ್ಯರಿಗೆ ದಿನಸಿ ಕಿಟ್ ವಿತರಿಸಲಾಯಿತು.

ಕಷ್ಟದಲ್ಲಿರುವ ತಮ್ಮ ಸದಸ್ಯರನ್ನು ಆಯ್ಕೆ ಮಾಡಿ ಸಂಘಗಳು ನೀಡಿದ ಪಟ್ಟಿ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ತಲಾ 800 ಗ್ರಾಂ ಗೋಧಿಹಿಟ್ಟು, ರಾಗಿ ಹಿಟ್ಟು, ಕಡಲೆಕಾಳು, ಹುರುಳಿಕಾಳು, 1 ಕೆಜಿ ಉಪ್ಪು, ಅರ್ಧ ಲೀ. ಅಡುಗೆ ಎಣ್ಣೆ ಒಳಗೊಂಡ ಆಹಾರ ಪದಾರ್ಥಗಳ ದಿನಸಿ ಕಿಟ್ ಹಂಚಲಾಯಿತು.

ಸ್ವಯಂಸೇವಕರು: ಸದ್ಯ ಕೊರೊನಾ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯಡಿ ಸ್ವಯಂಸೇವಕರಾಗಿರುವ ನಿಶಿತಾ ಕೃಷ್ಣ ಸ್ವಾಮಿ, ರಕ್ಷಿತಾ ಕಶ್ಯಪ್, ಫನಿದತ್ತ, ಶಿಶಿರತ್ ರಮೇಶ್, ರಕ್ಷಿತಾ ರಾವ್, ಮಧುಶ್ರೀ, ಅಭಿಲಾಷ್ ಜೈನ್, ಸುರೇಶ್ ಕುಮಾರ್, ಸುಬ್ರಹ್ಮಣ್ಯರಾವ್, ರಜತ್ ಆರ್.ಶಂಕರ್, ಹರ್ಷಕುಮಾರ್, ಬಿ.ಆರ್.ರಾಜೇಶ್, ಅಮರೇಶ್ ಪಾಲಿಕೆ ಪರವಾಗಿ ದಿನಸಿ ಕಿಟ್‍ಗಳನ್ನು ಸಿದ್ಧಪಡಿಸಿ ವಿತರಿಸಿದರು.

 

Translate »