ತೆರಿಗೆ, ಟ್ರೇಡ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಿ
ಮೈಸೂರು

ತೆರಿಗೆ, ಟ್ರೇಡ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಿ

May 21, 2020

ಮೈಸೂರು, ಮೇ 20(ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ ತೀವ್ರ ನಷ್ಟ ಅನುಭವಿಸಿರುವುದರಿಂದ ಕಲ್ಯಾಣ ಮಂಟಪಗಳ ತೆರಿಗೆ ಹಾಗೂ ಟ್ರೇಡ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಬೇಕೆಂದು ಕಲ್ಯಾಣ ಮಂಟಪಗಳ ಮಾಲೀಕರು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡರ ನೇತೃತ್ವದಲ್ಲಿ ಇಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ ಅವರು, ಸಂಕಷ್ಟದಲ್ಲಿರುವ ತಮ್ಮ ಉದ್ಯಮಕ್ಕೆ ಟ್ರೇಡ್ ಲೈಸನ್ಸ್ ಶುಲ್ಕ ಹಾಗೂ ಕಂದಾಯವನ್ನು ಒಂದು ಅವಧಿಗೆ ಮನ್ನಾ ಮಾಡಬೇ ಕೆಂದು ಕೋರಿಕೊಂಡರು.

ಸರ್ಕಾರದ ನಿರ್ದೇಶನದಂತೆ ಕಲ್ಯಾಣ ಮಂಟಪದಲ್ಲಿ ಕೇವಲ 50 ಮಂದಿ ಸೇರಿಸಿ ಮದುವೆ ಮಾಡಲಾಗದು, ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಮಾರ್ಚ್ ಮಾಹೆ ನಂತರ ನಿಗದಿಯಾಗಿದ್ದ ಮದುವೆಗಳು ರದ್ದಾ ಗಿರುವುದರಿಂದ ಕಲ್ಯಾಣ ಮಂಟಪದ ಮಾಲೀಕರಿಗೆ ಭಾರೀ ನಷ್ಟ ಉಂಟಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಜಿಎಸ್‍ಟಿ, ವಿದ್ಯುತ್ ಶುಲ್ಕ, ನೀರಿನ ಶುಲ್ಕ, ಆಸ್ತಿ ತೆರಿಗೆ, ಟ್ರೇಡ್ ಲೈಸನ್ಸ್, ವೃತ್ತಿ ತೆರಿಗೆ, ಆದಾಯ ತೆರಿಗೆ, ಬ್ಯಾಂಕ್ ಸಾಲದ ಕಂತು, ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್‍ಗಳ ಸಂಬಳ ಮತ್ತಿತರ ಖರ್ಚುಗಳು ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯದಿದ್ದರೂ ಭರಿಸಬೇಕಾಗುತ್ತದೆ. ಆ ವೆಚ್ಚ ನಿರ್ವಹಿಸ ಬೇಕಾದರೆ, 400ರಿಂದ 500 ಮಂದಿ ಸೇರಿಸಿ ಮದುವೆ ಮಾಡಲು ಅವಕಾಶ ನೀಡಬೇಕು. ಈ ವರ್ಷ ಆಸ್ತಿ ತೆರಿಗೆ ಮತ್ತು ಮಾರಾಟ ಪರವಾನಗಿ ಶುಲ್ಕ ಮನ್ನಾ ಮಾಡಬೇ ಕೆಂದು ಅವರು ಕೋರಿಕೊಂಡರು.

ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು, ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಅನುಮತಿಗಾಗಿ ಪ್ರಸ್ತಾ ವನೆ ಸಲ್ಲಿಸುವುದಾಗಿ ತಿಳಿಸಿದರು. ಮೈಸೂರು ಕಲ್ಯಾಣ ಮಂಟಪ ಮಾಲೀ ಕರ ಸಂಘದ ಉಪಾಧ್ಯಕ್ಷ ಎಸ್.ಮೂರ್ತಿ, ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ಖಜಾಂಚಿ ಮನೋಜ್ ಶೆಣೈ, ನಿರ್ದೇ ಶಕರಾದ ಎಲ್.ಶಿವಣ್ಣ ಹಾಗೂ ಚಂದ್ರ ಶೇಖರ್ ಈ ವೇಳೆ ಉಪಸ್ಥಿತರಿದ್ದರು.

Translate »