ಆದಿವಾಸಿ, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಆದಿವಾಸಿ, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

July 13, 2021

ಹುಣಸೂರು, ಜು.12(ಕೆಕೆ)- ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿದ್ದ ಕಾಡಂಚಿನ ಆದಿವಾಸಿ ಹಾಗೂ ಕೂಲಿ ಕಾರ್ಮಿಕರಿಗೆ ಐಟಿ ಫಾರ್ ಚೇಂಜ್ (ಪ್ರಕ್ರಿಯೆ) ಹಾಗೂ ಟೆಕ್ ಮಹೇಂದ್ರ ಸೇವಾ ಸಂಸ್ಥೆ ಸಹಯೋಗದಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

ತಾಲೂಕಿನ ಹನಗೋಡು ಹೋಬಳಿ ಮಾಸ್ತಮ್ಮನ ಹಾಡಿ, ವಿಜಯಗಿರಿ, ಶಂಕರ ಪುರ, ಮಾದಳ್ಳಿ, ತಟ್ಟೆಕೆರೆ, ಭರತವಾಡಿ ಗಿರಿಜನ ಹಾಡಿಗಳ ಆದಿವಾಸಿಗಳು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ಒಟ್ಟು 500 ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಉಪ್ಪು, ಗೋಧಿ ಹಿಟ್ಟು, ಸಾಂಬಾರ್ ಪುಡಿ, ರವೆ ಸೇರಿದಂತೆ 17 ಪದಾರ್ಥಗಳನ್ನೊಳ ಗೊಂಡ ಪಡಿತರ ಕಿಟ್ ವಿತರಿಸಲಾಯಿತು.

ಸಂಸ್ಥೆಯ ಶ್ರೀಜಾ ಮಾತನಾಡಿ, ಸಂಸ್ಥೆಯ ಮುಖ್ಯಸ್ಥರಾದ ಅನುಪಮ ಅವರ ಮಾರ್ಗ ದರ್ಶನದಲ್ಲಿ ಕಳೆದ ಒಂದೂವರೆ ವರ್ಷ ದಿಂದ ಸಾವಿರಾರು ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸುತ್ತಿದ್ದೇವೆ ಎಂದರು.

ಕೊರೊನಾ ತಡೆಗಟ್ಟಲು ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ಕಾಪಾಡಿ ಕೊಳ್ಳಬೇಕೆಂದು ಮನವಿ ಮಾಡಿದರು.

ದೊಡ್ಡಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ಮಾತನಾಡಿದರು. ಇದೇ ವೇಳೆ ತಾಲೂಕಿನ 7 ಆಶ್ರಮ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 28 ಮಂದಿ ಹೊರ ಗುತ್ತಿಗೆ ಶಿಕ್ಷಕರಿಗೂ ಪಡಿತರ ಕಿಟ್ ವಿತರಿಸಲಾಯಿತು. ಈ ವೇಳೆ ಸಂಸ್ಥೆಯ ಶಬರೀಶ್, ಹರೀಶ್, ಮಹದೇವ್, ರಾಜು ಕೆ.ಕೆ.ಸ್ವಾಮಿ ಇತರgರಿದ್ದರು.

Translate »