ವಾಹನ ಸವಾರರಿಗೆ ಕಂಟಕವಾಗಿರುವ ‘ಗುಂಡಿ’
ಮೈಸೂರು

ವಾಹನ ಸವಾರರಿಗೆ ಕಂಟಕವಾಗಿರುವ ‘ಗುಂಡಿ’

July 13, 2021

ಮೈಸೂರು, ಜು.12(ಎಂಕೆ)- ನಗರದ ಕಲಾಮಂದಿರ ಜಂಕ್ಷನ್ ಬಳಿಯ ವಿನೋಬಾ ರಸ್ತೆಯಲ್ಲಿ ಗುಂಡಿ ಬಿದ್ದು, ತಿಂಗಳಾದರೂ ದುರಸ್ತಿ ಕಾರ್ಯವಾಗದಿರುವುದು ವಾಹನ ಸವಾರರಿಗೆ ಕಂಟಕವಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯ ಗುಂಡಿ ಮುಚ್ಚಲು ಇನ್ನೆಷ್ಟು ದಿನ ಬೇಕೆಂದು ಪ್ರಜ್ಞಾವಂತ ನಾಗರಿಕರು ಕಿಡಿಕಾರಿದ್ದಾರೆ.

ಕಲಾಮಂದಿರ, ರಂಗಾಯಣ, ಕುಕ್ಕರಹಳ್ಳಿ ಕೆರೆ ಜೊತೆಗೆ ಬೋಗಾದಿ ಮುಖ್ಯ ರಸ್ತೆಗೆ ಹೋಗಬೇಕಾದರೂ ಇದೇ ಮಾರ್ಗದಲ್ಲಿ ಸಂಚರಿಸಲಿದ್ದು, ಯಾವಾಗ ಏನಾಗುತ್ತದೋ ಎಂಬ ಆತಂಕ ಎದುರಾಗಿದೆ. ತಿಂಗಳ ಹಿಂದೆ ಗುಂಡಿ ಬಿದ್ದಿದ್ದರೂ ಮಣ್ಣು ಸುರಿದು, ಬ್ಯಾರಿಕೇಡ್ ಇಟ್ಟಿದ್ದಾರೆಯೇ ಹೊರತು ರಸ್ತೆ ಸರಿಪಡಿಸುವ ಕಾರ್ಯವಾಗಿಲ್ಲ. ಪ್ರಮುಖ ರಸ್ತೆಯೇ ಸ್ಥಿತಿಯೇ ಈಗಾದರೇ ಸಣ್ಣ-ಪುಟ್ಟ ರಸ್ತೆಗಳ ಗತಿಯೇನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಕ್ಕರಹಳ್ಳಿ ಕೆರೆಗೆ ವಾಯುವಿಹಾರ ಕ್ಕೆಂದೇ ನಿತ್ಯ ನೂರಾರು ಜನರು ಇದೇ ರಸ್ತೆಯಲ್ಲಿ ಬರುತ್ತಾರೆ. ಅಲ್ಲದೆ ರಂಗಾಯಣ, ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮ ಗಳಿಗೆ ಆಗಮಿಸುವವರು ಈ ರಸ್ತೆಯಲ್ಲಿಯೇ ಬರಬೇಕು. ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಯನ್ನು ಸರಿಪಡಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಗಮನಿಸದಿರುವುದು ಶೋಚನೀಯ ಎಂದಿದ್ದಾರೆ.

ನೀರು ಸೋರಿಕೆಯಾಗುತ್ತಿತ್ತು: ತಿಂಗಳ ಹಿಂದೆ ರಸ್ತೆ ಮಧ್ಯದಲ್ಲಿ ನೀರು ಸೋರಿಕೆಯಾಗುತ್ತಿತ್ತು. ನೀರು ಸರಬರಾ ಜಾಗುವ ಪೈಪ್ ಒಡೆದು ಹೋಗಿತ್ತು ಎನಿಸುತ್ತದೆ. ಆದಾದ ಬಳಿಕ ಮಣ್ಣು ತಂದು ನೀರು ಸೋರುತ್ತಿದ್ದ ಸ್ಥಳಕ್ಕೆ ಸುರಿದಿ ದ್ದಾರೆ. ಸುರಿದಿದ್ದ ಮಣ್ಣಿನ ಮೇಲೆಯೇ ಗಿಡಗಳು ಬೆಳೆಯ ತೊಡಗಿದರೂ ರಸ್ತೆ ಸಮತಟ್ಟು ಮಾಡುವ ಕೆಲಸವಾಗಿಲ್ಲ. ಇದರಿಂದ ನಿತ್ಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಕೆಲವರು ಬಿದ್ದಿದ್ದಾರೆ ಎಂದು ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ‘ಮೈಸೂರು ಮಿತ್ರ’ನಲ್ಲಿ ದೂರಿದರು.

Translate »