ಟಿಬೇಟಿಯನ್ನರಿಂದ ಪಡಿತರ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಟಿಬೇಟಿಯನ್ನರಿಂದ ಪಡಿತರ ಕಿಟ್ ವಿತರಣೆ

May 4, 2020

ಹುಣಸೂರು, ಮೇ 3(ಕೆಕೆ)-ದೇಶದಲ್ಲಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಅಸಹಾಯಕ ಬಡಜನರ ಹಸಿವಿಗೆ ನೆರವಾಗುವುದು ಪ್ರತಿಯೊಬ್ಬರ ಮಾನವ ಸಹಜ ಗುಣವಾಗಿರ ಬೇಕು. ಆಗಲೇ ನಮಗೆ ಆಂತರಿಕ ಮನಃತೃಪ್ತಿ ಸಿಗಲಿದೆ ಎಂದು ಗುರುಪುರ ನಿರಾಶ್ರಿತರ ಕ್ಯಾಂಪ್‍ನ ಚೊಂಗೆ ಜೋದೆ ಕಾಲೇಜಿನ ಮಹಾಗುರು ಚೋಂಪಾಸೋಂಪೆ ತಿಳಿಸಿದರು. ಕ್ಯಾಂಪಿನ ಚೊಂಗೆ ಜೋದೆ ಕಾಲೇಜು ವತಿಯಿಂದ ನಿರಾಶ್ರಿತ ಕ್ಯಾಂಪ್ ಸುತ್ತಮುತ್ತಲಿ ರುವ ಸುಮಾರು 11 ಗ್ರಾಮಗಳ 755 ಬಡ ಕುಟುಂಬಗಳಿಗೆ ಪಡಿತರ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ಚೀನಿಯರ ದಬ್ಬಾಳಿಕೆಗೆ ಒಳಗಾಗಿ ನಿರಾಶ್ರಿತರಾಗಿ ಬಂದ ನಮಗೆ ಭಾರತ ಆಶ್ರಯ ನೀಡಿ ಮಕ್ಕಳಂತೆ ಈವರೆವಿಗೆ ಸಲುಹಿದೆ. ಇಂತಹ ಪವಿತ್ರ ದೇಶದಲ್ಲಿರುವ ನಾವು ಇಲ್ಲಿನ ಅಸಹಾಯಕ ಗ್ರಾಮೀಣ ಬಡವರಿಗೆ ಕೈಲಾದ ಸಹಾಯ ಮಾಡುವ ನಿಟ್ಟಿನಲ್ಲಿ ಸುಮಾರು 11 ಗ್ರಾಮಗಳ 755 ಬಡ ಕುಟುಂಬಗಳಿಗೆ ಪಡಿತರ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದರು. ಹುಣಸೂರು ಡಿವೈಎಸ್‍ಪಿ ಸುಂದರ್‍ರಾಜ್ ಪಡಿತರ ಕಿಟ್ ವಿತರಿಸಿ ಮಾತನಾಡಿ ದರು. ಈ ಸಂದರ್ಭದಲ್ಲಿ ಕ್ಯಾಂಪ್‍ನ ಸೆಟಲ್ಮೆಂಟ್ ಅಧಿಕಾರಿ ತುಪ್‍ಟೇನ್ ತ್ಸೇರಿಂಗ್, ನಗರಸಭಾ ಸದಸ್ಯ ದೊಡ್ಡಹೆಜ್ಜೂರು ರಮೇಶ್ ಹಾಗೂ ಕ್ಯಾಂಪ್‍ನ ಧರ್ಮಗುರು ಹಾಜರಿದ್ದರು.

Translate »