ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ; ಬೇಲೂರು ಪ್ರತಿಭೆಗಳ ಸಾಧನೆ
ಹಾಸನ

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ; ಬೇಲೂರು ಪ್ರತಿಭೆಗಳ ಸಾಧನೆ

July 10, 2019

ಬೇಲೂರು, ಜು.9- ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಮತ್ತು ಬೇಲೂರಿನ ಎನ್‍ಎಸ್ ಕೆಎಂಎಫ್ ಶಾಲೆ ಯಿಂದ ಸೋಮವಾರ ಆಯೋ ಜಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೇಲೂರಿನ ವಿವಿಧ ಶಾಲೆಗಳ ಕರಾಟೆ ಪಟುಗಳು ಭಾಗವಹಿಸಿ ಹಲವು ಬಹು ಮಾನಗಳನ್ನು ಗೆದ್ದು ಕೊಂಡರು.

25 ಕೆಜಿ ವಿಭಾಗದಲ್ಲಿ ಬೇಲೂರು ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಪೂರ್ಣೇಶ್ ಪ್ರಥಮ, ಧ್ರುವ ಮೌಂಟ್ ಕಾರ್ಮೆಲ್ ಶಾಲೆಯ ಚಿರಂಜೀವಿ ದ್ವಿತೀಯ ಸ್ಥಾನ, 30 ಕೆಜಿ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಶಾಲೆಯ ಚಿರಂತ್ ಡಿ.ರಾವ್ ಪ್ರಥಮ, 45ಕೆಜಿ ವಿಭಾಗದಲ್ಲಿ ಸರ್ವೋದಯ ಎಜುಕೇಷನ್ ಸಂಸ್ಥೆಯ ರೆನೀಷ ರೆಬೆಲ್ಲೊ ಪ್ರಥಮ ಸ್ಥಾನ ಪಡೆದರು. ಎನ್‍ಎಸ್ ಕೆಎಂಎಫ್ ಶಾಲೆಯ ಭೋಜೇಂದ್ರ ಪ್ರಸಾದ್, ಗಣೇಶ್, ಹರ್ಷಿತ್, ತಿಲಕ್, ಫರ್ದಿನ್, ಸಂತೋಷ್, ಕಿರಣ್, ಲೋಕೇಶ್ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.

Translate »