ವೈವಿಧ್ಯತೆ ಗುಣವುಳ್ಳ ಹೆಣ್ಣು ಪ್ರಕೃತಿಯ ಪ್ರತಿರೂಪ
ಮೈಸೂರು

ವೈವಿಧ್ಯತೆ ಗುಣವುಳ್ಳ ಹೆಣ್ಣು ಪ್ರಕೃತಿಯ ಪ್ರತಿರೂಪ

March 10, 2020

ವಿದುಷಿ ಡಾ.ತುಳಸಿ ರಾಮಚಂದ್ರ ಬಣ್ಣನೆ

ಮೈಸೂರು, ಮಾ.9(ಎಂಕೆ)- ಹೆಣ್ಣು ಪ್ರಕೃತಿಯ ಪ್ರತಿರೂಪವಾಗಿದ್ದು, ಪ್ರಕೃತಿಯಲ್ಲಿರುವ ವೈವಿಧ್ಯತೆಯ ಗುಣಗಳು ಹೆಣ್ಣಿನಲ್ಲೂ ಇವೆ ಎಂದು ವಿದುಷಿ ಡಾ.ತುಳಸಿ ರಾಮಚಂದ್ರ ಹೇಳಿದರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ಲಯದಲ್ಲಿ ಏರ್ಪಡಿಸಿದ್ದ ‘ವಿಶ್ವ ಮಹಿಳಾ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಸ್ತ್ರೀ ಎಂಬುದೇ ಶಕ್ತಿ. ದೇಶದ ಯಾವುದೇ ಗ್ರಾಮಗಳಿಗೂ ಭೇಟಿ ನೀಡಿದರೂ ಅಲ್ಲಿ ಗ್ರಾಮ ದೇವತೆಯನ್ನು ಪೂಜಿಸುವ ಪದ್ಧತಿಗಳು ನಡೆದುಕೊಂಡು ಬಂದಿವೆ. ವಿಶ್ವದ ಯಾವ ದೇಶದಲ್ಲಿಯೂ  ಈ ದೇಶದ  ಮಹಿಳೆಗೆ ದೊರಕುತ್ತಿರುವ ಗೌರವ ಸಿಗುತ್ತಿಲ್ಲ ಎಂದರು.

ನದಿಗಳನ್ನು ತಾಯಿಯಂತೆ ಪೂಜಿಸ ಲಾಗುತ್ತದೆ. ಒಂದೊಂದು ನದಿಯೂ ಒಂದೊಂದು ರೀತಿಯ ವಿಶೇಷತೆ ಒಳ ಗೊಂಡಿರುವುದನ್ನು ಕಾಣುತ್ತೇವೆ. ಪ್ರಕೃತಿಯು ಮಹಿಳೆಯರಿಗೆ ಹಲವು ಜವಾಬ್ದಾರಿ ಗಳನ್ನು ನೀಡಿದೆ. ಆದ್ದರಿಂದ ವಿಶ್ವದಲ್ಲಿ ಮಹಿಳಾ ದಿನದ ಆಚರಣೆ ಮಾಡಲಾಗು ತ್ತದೆ ಹೊರತು ಪುರುಷರ ದಿನಾಚರಣೆ ಎಂಬುದಿಲ್ಲ. ಪುರುಷರನ್ನು ಚಿಕ್ಕ ಮಗುವಿ ನಿಂದಲೂ ಆರೈಕೆ ಮಾಡಿ, ಎತ್ತರದ ಸ್ಥಾನಕ್ಕೆ ಬೆಳೆಸುವ ಜವಾಬ್ದಾರಿ ಮಹಿಳೆಯ ದ್ದಾಗಿರುತ್ತದೆ ಎಂದು ತಿಳಿಸಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಮಹಿಳೆಯ ಪಾತ್ರ ಹೆಚ್ಚಿದೆ. ಗಿಡ ಬೆಳೆಯಲು ಹೇಗೆ ಉತ್ತಮ ಗೊಬ್ಬರ, ಮಣ್ಣು ಮತ್ತು ನೀರು ಬೇಕಾಗು ವುದೋ ಅದೇರೀತಿ ಉತ್ತಮ ನಾಗರಿಕರಾ ಗಲು ಶಿಕ್ಷಣ, ಸಂಸ್ಕøತಿಯ ಅರಿವು ಮುಖ್ಯ. ಭರತನಾಟ್ಯ ಕ್ಷೇತ್ರದಲ್ಲಿ ರುಕ್ಮಿಣಿದೇವಿ ಅರುಂಡೇಲ್ ಅವರ ಕೊಡುಗೆಯನ್ನು ಸ್ಮರಿಸದೆ ಇರದಿರುವುದಕ್ಕೆ ಸಾಧ್ಯವೇ ಇಲ್ಲ. ಅದರಂತೆ ಕಲೆ, ಸಾಹಿತ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಮಹಿಳೆ ಮುಂದಿ ದ್ದಾಳೆ. ರಕ್ಷಣಾ ಕ್ಷೇತ್ರದಲ್ಲೂ ಛಾಪು ಮೂಡಿ ಸಿರುವ ಮಹಿಳೆಯರು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಸುಧಾಮೂರ್ತಿ ಗುಣಗಾನ: ಇತ್ತೀಚಿನ ದಿನಗಳಲ್ಲಿ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರ ಸಮಾಜ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ಶ್ರೀಮಂತ ರಾದರೂ ಸರಳತೆ, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಅವರ ನಡೆ-ನುಡಿ ಇತರ ಮಹಿಳೆಯರಿಗೆ ಮಾದರಿಯಾಗಿದೆ. ಕಸಗುಡಿ ಸುವ ಸಂದರ್ಭ ಬಂದರೂ ಅದನ್ನು ಮಾಡುವ ಸಜ್ಜನ ಮಹಿಳೆ ಅವರಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಬಳಿಕ ಮಹಿಳಾ ದಿನ ಅಂಗವಾಗಿ ವಿವಿಯ ಮಹಿಳಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯ ರಿಗೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮ ದಲ್ಲಿ ಸಂಗೀತ ವಿವಿ ಹಂಗಾಮಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟ ಕೋಟೆ, ಕುಲಸಚಿವ ಪ್ರೊ.ಆರ್.ರಾಜೇಶ್, ಹಣಕಾಸು ಅಧಿಕಾರಿ ಎಂ.ಲೋಕೇಶ್, ಪತ್ರಕರ್ತೆ ವಿಶಾಲಕ್ಷಿ, ಭುವನೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

Translate »