ಮದ್ದೂರು ಬಳಿ ಕೆಎಸ್‍ಆರ್‍ಪಿ ಬಸ್ ಉರುಳಿ 11ಕ್ಕೂ ಅಧಿಕ ಪೆÇಲೀಸರಿಗೆ ಗಾಯ
ಮೈಸೂರು

ಮದ್ದೂರು ಬಳಿ ಕೆಎಸ್‍ಆರ್‍ಪಿ ಬಸ್ ಉರುಳಿ 11ಕ್ಕೂ ಅಧಿಕ ಪೆÇಲೀಸರಿಗೆ ಗಾಯ

March 10, 2020

ಮದ್ದೂರು,ಮಾ.9(ನಾಗಯ್ಯ)- ಭದ್ರತಾ ಕರ್ತವ್ಯಕ್ಕೆ ಸಿಬ್ಬಂದಿ ಕರೆದೊಯ್ಯುತ್ತಿದ್ದ ಕೆಎಸ್‍ಆರ್‍ಪಿ ಪೊಲೀಸ್ ಬಸ್‍ವೊಂದು ಸ್ಟೇರಿಂಗ್ ಲಾಕ್ ಆಗಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು 11ಕ್ಕೂ ಹೆಚ್ಚು ಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ತಾಲೂಕಿನ ತೈಲೂರು ಕೆರೆ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಚಾಲಕ ನಾಗಣ್ಣ, ಕೆಎಸ್‍ಆರ್‍ಪಿ ಪೊಲೀಸರಾದ ರಿಯಾಜ್, ಚಂದ್ರಶೇಖರ್, ಸೈಯ್ಯದ್, ಸಾಗರ್, ರಾಘವೇಂದ್ರ, ರಾಮನ ಗೌಡ ಹಾಗೂ ಆನಂದ್ ಇತರರು ಗಾಯಗೊಂಡಿದ್ದು ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಸೋಮವಾರ ರಾತ್ರಿ ಆದಿಚುಂಚನಗರಿಯಲ್ಲಿ ನಡೆದ ರಥೋತ್ಸವ ಭದ್ರತಾ ಕರ್ತವ್ಯ ಮುಗಿಸಿದ ಮೈಸೂರು ವಿಭಾಗದ 5ನೇ ಬೆಟಾಲಿಯನ್ ಕೆಎಸ್‍ಆರ್‍ಪಿ ತುಕಡಿಯ ಪೊಲೀಸರು ಸೋಮವಾರ ಮಧ್ಯಾಹ್ನ 12ರ ಸಮಯದಲ್ಲಿ ಪೊಲೀಸ್ ಬಸ್ (ಕೆಎ 27, ಜಿ 4024)ನಲ್ಲಿ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮಕ್ಕೆ ಭದ್ರತಾ ಕರ್ತವ್ಯಕ್ಕೆ ತೆರಳುತ್ತಿದ್ದರು.

ಮಾರ್ಗ ಮಧ್ಯೆ ತೈಲೂರು ಕೆರೆ ಏರಿ ಕೆಳಗೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಬಸ್‍ನಲ್ಲಿದ್ದ ಸುಮಾರು 20ಕ್ಕೂ ಅಧಿಕ ಮಂದಿಯ ಪೈಕಿ 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತಕ್ಕೆ ಸ್ಟೇರಿಂಗ್ ಲಾಕ್ ಆಗಿರೋದೇ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಪೊಲೀಸ್ ಬಸ್ ಅಪಘಾತವಾಗಿರುವುದನ್ನು ತಿಳಿದ ಸ್ಥಳೀಯರು ಬಸ್‍ನೊಳಗೆ ಸಿಲುಕಿಕೊಂಡಿದ್ದ ಪೊಲೀಸರನ್ನು ಹೊರ ತೆಗೆದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮದ್ದೂರು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರಿಗೂ ಸಣ್ಣ-ಪುಟ್ಟ ಗಾಯಗ ಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿ ದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು, ಮದ್ದೂರು ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆ ಸಂಬಂಧ ಮದ್ದೂರು ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Translate »