ಫೆ.24ಕ್ಕೆ ಎಸ್.ಎಂ.ಕೃಷ್ಣರ ಮೊಮ್ಮಗ ಅಮಥ್ರ್ಯ, ಡಿಕೆಶಿ ಪುತ್ರಿ ಐಶ್ವರ್ಯ ವಿವಾಹ
ಮೈಸೂರು

ಫೆ.24ಕ್ಕೆ ಎಸ್.ಎಂ.ಕೃಷ್ಣರ ಮೊಮ್ಮಗ ಅಮಥ್ರ್ಯ, ಡಿಕೆಶಿ ಪುತ್ರಿ ಐಶ್ವರ್ಯ ವಿವಾಹ

September 15, 2020

ಬೆಂಗಳೂರು, ಸೆ.14 (ಕೆಎಂಶಿ)- ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣಾ ಮೊಮ್ಮಗ ಅಮಥ್ರ್ಯ ಹೆಗಡೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಅವರ ವಿವಾಹ 2021ರ ಫೆಬ್ರ ವರಿ 24ರಂದು ಜರುಗಲಿದೆ.

ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮಥ್ರ್ಯ ಹೆಗಡೆ, ತಂದೆಯ ಅಕಾಲಿಕ ಮರಣದ ನಂತರ ತಾಯಿ ಜೊತೆಗೂಡಿ, ಸಂಸ್ಥೆಯ ಹೊಣೆ ಗಾರಿಕೆ ವಹಿಸಿಕೊಂಡಿದ್ದಾರೆ.

ರಾಜ್ಯದ ಎರಡು ಬಲಿಷ್ಠ ರಾಜಕೀಯ ಮತ್ತು ಉದ್ಯಮಿ ಗಳ ಕುಟುಂಬದ ನಡುವೆ ಸಂಬಂಧ ಏರ್ಪಡುತ್ತಿದೆ. ಈ ಎರಡು ಕುಟುಂಬಗಳ ನಡುವೆ ಮದುವೆಯ ಮಾತುಕತೆ ಮುಗಿದಿದ್ದು, ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಯಲಿದೆ.ಅದಾದ ಮೂರು ತಿಂಗಳಿಗೆ ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಿಶ್ಚಿತಾರ್ಥ ಮತ್ತು ಮದುವೆ ಎಲ್ಲಿ ಮಾಡ ಬೇಕೆಂಬುದರ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೆ ಎಲ್ಲವೂ ಸರಿ ಹೊಂದಿ ದಲ್ಲಿ, ಅರಮನೆ ಆವರಣದಲ್ಲೇ ಎರಡೂ ಶುಭಕಾರ್ಯಗಳನ್ನು ನಡೆಸಲು ಕುಟುಂ ಬದ ಹಿರಿಯರು ನಿರ್ಧರಿಸಿದ್ದಾರೆ. ಎಸ್.ಎಂ. ಕೃಷ್ಣಾ ಅವರ ಹಿರಿಯ ಪುತ್ರಿ ಮಗನೇ ಅಮಥ್ರ್ಯ ಹೆಗಡೆ. ಶಿವಕುಮಾರ್ ಪುತ್ರಿ ಐಶ್ವರ್ಯ, ತನ್ನ ತಂದೆಯ ಗ್ಲೋಬಲ್ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.