ಮೈಸೂರಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ `ಮಾರ್ಗದರ್ಶಿಕೆ’ ಅಳವಡಿಕೆ
ಮೈಸೂರು

ಮೈಸೂರಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ `ಮಾರ್ಗದರ್ಶಿಕೆ’ ಅಳವಡಿಕೆ

September 15, 2020

ಮೈಸೂರು, ಸೆ.14(ಎಂಕೆ)- ಮೈಸೂರು ದಸರಾ ಮಹೋತ್ಸವ ಸಮೀ ಪಿಸುತ್ತಿದ್ದು, ವಾಹನ ದಟ್ಟಣೆ ಹೆಚ್ಚಲಿದೆ. ಹಾಗಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ಸಂಚಾರ ಪೊಲೀಸರಿಂದ ಸೂಚನಾ ಫಲಕಗಳು, ಪ್ರತಿಫಲಕಗಳು ಹಾಗೂ ಮಾರ್ಗದರ್ಶಿ ಸಾಧನಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.

ವಿವಿಪುರಂ, ದೇವರಾಜ, ನರಸಿಂಹರಾಜ, ಸಿದ್ದಾರ್ಥನಗರ ಮತ್ತು ಕೆ.ಆರ್.ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯ ರಸ್ತೆ ಮತ್ತು ವೃತ್ತಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗು ತ್ತಿದೆ. ದೇವರಾಜ ಸಂಚಾರ ಠಾಣೆ ವ್ಯಾಪ್ತಿಯಲ್ಲಿಯ ಬೆಂಗ ಳೂರು-ನೀಲಗಿರಿ ರಸ್ತೆಯ ಬಿಷಪ್ ಹೌಸ್ ಮುಂಭಾಗದ ವೈ ಜಂಕ್ಷನ್‍ನಲ್ಲಿ ‘ಹಜಾರ್ಡ್ ಮಾರ್ಕರ್ ಬೋರ್ಡ್’, ಗುಡ್ ಶಫರ್ಡ್ ಕಾನ್ವೆಂಟ್ ಹತ್ತಿರದ ರಸ್ತೆ ಡುಬ್ಬಕ್ಕೆ ಕ್ಯಾಟ್ ಐಸ್(ರಿಫ್ಲೆಕ್ಟ್ ಲೈಟ್)ಗಳು, ಯಾ-ಅಲ್ಲಾ ಮಸೀದಿ ಹತ್ತಿರದ ಮರಗಳಿಗೆ `ಟ್ರೀಸ್ ರಿಫ್ಲೆಕ್ಟರ್’ಗಳನ್ನು ಅಳವಡಿಸಲಾಗಿದೆ.

ಹಾರ್ಡಿಂಜ್ ವೃತ್ತದ ಬೆಂಗಳೂರು-ನೀಲಗಿರಿ ರಸ್ತೆಯ ಡಿವೈಡರ್‍ಗೆ ‘ಸೋಲಾರ್ ಡೆಲಿನೇಟರ್‍ಗಳು’, ಆಲ್ಬರ್ಟ್ ವಿಕ್ಟರ್ ರಸ್ತೆಯ ಚಾಮ ರಾಜೇಂದ್ರ ವೃತ್ತದ ಕಡೆಯಿಂದ ಕೆ.ಆರ್.ವೃತ್ತದ ಕಡೆಯ ರಸ್ತೆ ವಿಭಜಕ, ಸಯ್ಯಾಜಿರಾವ್ ರಸ್ತೆಯ ಬ್ರಹ್ಮಪುರಿ ಗೇಟ್ ಕಡೆಯಿಂದ ಕೆ.ಆರ್.ವೃತ್ತದ ಕಡೆಗೆ ರಸ್ತೆ ವಿಭಜಕ ಹಾಗೂ ಕೆ.ಆರ್ ವೃತ್ತದ ಕಡೆಯಿಂದ ಆಯು ರ್ವೇದಿಕ್ ವೃತ್ತದ ಕಡೆಯ ರಸ್ತೆ ವಿಭಜಕಗಳಿಗೆ ‘ಫ್ಲೆಕ್ಸಿಬಲ್ ಮೀಡಿ ಯನ್ ರಿಫ್ಲೆಕ್ಟರ್’ಗಳನ್ನು ಹಾಕಲಾಗಿದೆ. ಜಗನ್ಮೋಹನ ಅರಮನೆಯ ಮುಂಭಾಗದಲ್ಲಿರುವ ತಿರುವಿನಲ್ಲಿ ರಸ್ತೆಯ ಮಧ್ಯೆ ಟ್ಯೂಬುಲರ್ ಕೋನ್ ಗಳು ಮತ್ತು ಬೆಂಗಳೂರು-ನೀಲಗಿರಿ ರಸ್ತೆಯ ಗುಡ್ ಶಫರ್ಡ್ ಕಾನ್ವೆಂಟ್ ಹತ್ತಿರ ಸೋಲಾರ್ ಬ್ಲಿಂಕರ್ ಲೈಟ್‍ಗಳನ್ನು ಅಳವಡಿಸಲಾಗಿದೆ ಎಂದು ದೇವರಾಜ ಸಂಚಾರ ಪೊಲೀಸ್ ಠಾಣೆ ಇನ್ಸ್‍ಸ್ಪೆಕ್ಟರ್ ಮುನಿಯಪ್ಪ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ವಿವಿಪುರಂ, ಎನ್.ಆರ್, ಸಿದ್ದಾರ್ಥನಗರ ಮತ್ತು ಕೆ.ಆರ್ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ರಸ್ತೆ ಮತ್ತು ವೃತ್ತಗಳಲ್ಲಿ ‘ಹಜಾರ್ಡ್ ಮಾರ್ಕರ್ ಬೋರ್ಡ್’, ಸೋಲಾರ್ ಬ್ಲಿಂಕರ್ ಲೈಟ್, ಟ್ಯೂಬ್ಲರ್ ಕೋನ್ ಮೊದ ಲಾದ ಸಂಚಾರ ಮಾರ್ಗದರ್ಶಿ ಉಪಕರಣಗಳನ್ನು ಅಳವಡಿಸಲಾಗುತ್ತಿದೆ.

 

 

 

Translate »