ಅಂಬಾರಿ ಆನೆ ಮುನ್ನಡೆಸುವುದು ನನ್ನ ಪುಣ್ಯ
ಮೈಸೂರು

ಅಂಬಾರಿ ಆನೆ ಮುನ್ನಡೆಸುವುದು ನನ್ನ ಪುಣ್ಯ

September 15, 2020

ಮೈಸೂರು, ಸೆ.14-ಕಾಡಂಚಿನ ಗ್ರಾಮ ಗಳಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಸೈ ಎನಿಸಿಕೊಂಡು ಮನೆ ಮಾತಾಗಿರುವ  ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಈ ಬಾರಿ ಅಂಬಾರಿ ಹೊರುವ ಹೊಸ ಜವಾಬ್ದಾರಿ ಯನ್ನು ಹೆಗಲಿಗೇರಿಸಿಕೊಂಡಿದ್ದು, ಸರ್ಕಾರ ನೀಡುವ ಯಾವುದೇ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಅಭಿಮನ್ಯು ನಿಭಾಯಿ ಸಲಿದ್ದಾನೆ. ಇದು ನಮ್ಮ ಪುಣ್ಯದ ಕೆಲಸ ಎಂದು ಅಭಿಮನ್ಯುವಿನ ಮಾವುತ ವಸಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅರಮನೆ ಆವರಣದಲ್ಲಿಯೇ ಜಂಬೂ ಸವಾರಿ ನಡೆಯಲಿದ್ದು, ರಾಜ್ಯ ಸರ್ಕಾರ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯು ಹೆಗಲಿಗೆ ವರ್ಗಾಯಿಸಿರು ವುದನ್ನು ಅಧಿಕೃತವಾಗಿ ಘೋಷಿಸಿದೆ. ಮತ್ತಿಗೋಡು ಆನೆ ಶಿಬಿರದಲ್ಲಿರುವ ಅಭಿ ಮನ್ಯುಗೆ ಈಗಾಗಲೇ ಅಂಬಾರಿ ಹೊರಲು  ತಯಾರಿ ಆರಂಭಿಸಲಾಗಿದೆ. ಅಧಿಕೃತ ವಾಗಿ ಅ.2ರಂದು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 5 ಆನೆಗಳ ತಂಡ ನೇರವಾಗಿ ಅರಮನೆಗೆ ಆಗಮಿಸಲಿವೆ. ಮತ್ತೊಂದು ಮಹತ್ತರ ಜವಾಬ್ದಾರಿ ಸ್ವೀಕರಿಸಿರುವ ಅಭಿಮನ್ಯು ಹಾಗೂ ಅದರ ಮಾವುತ ವಸಂತ ಇಬ್ಬರು ಸರ್ಕಾರ ನೀಡಿರುವ ಹೊಣೆ ಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಭಾಯಿಸಲು ಪಣ ತೊಡುವ ಮೂಲಕ ಸಕಲ ಸಿದ್ಧತೆ ಯಲ್ಲಿ ತೊಡಗಿದ್ದಾರೆ.

ಪುಣ್ಯದ ಕೆಲಸ: `ಮೈಸೂರು ಮಿತ್ರ’ನೊಂ ದಿಗೆ ಅಭಿಮನ್ಯುವಿನ ಮಾವುತ ವಸಂತ್ ಮಾತನಾಡಿ, ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುವಿಗೂ ಹಾಗೂ ಅಂಬಾರಿ ಹೊತ್ತ ಆನೆಯನ್ನು ಮುನ್ನಡೆಸುವ ಜವಾಬ್ದಾರಿ ನನಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ನೀಡಿದೆ. ದೇವರ ಕೆಲಸವಾಗಿರುವ ಇದು ನನಗೆ ಪುಣ್ಯ ಎಂದು ಭಾವಿಸುತ್ತೇನೆ. ಹಿರಿಯರ ಮಾರ್ಗ ದರ್ಶನದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಈಗ ಅಂಬಾರಿ ಹೊತ್ತ ಅಭಿಮನ್ಯುವನ್ನು ಮುನ್ನ ಡೆಸುವ ಹೊಣೆಗಾರಿಕೆ ನನ್ನದಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಮಕ್ಕಳಂತೆ ಸಾಕಿದ್ದೇನೆ: ಅಭಿಮನ್ಯು ಹಾಗೂ ನನ್ನ ನಡುವೆ ಅತ್ಯುತ್ತಮವಾದ ಬಾಂಧವ್ಯವಿದೆ. ಅದನ್ನು ನನ್ನ ಮಗುವಿನಂತೆ ಪ್ರೀತಿಸುತ್ತೇನೆ. ಕಾಳಜಿಯಿಂದ ನೋಡಿ ಕೊಳ್ಳುತ್ತೇನೆ. ನಮ್ಮ ನಡುವಿನ ಈ ಬಾಂಧ ವ್ಯವೇ ಅನೇಕ ಕಾರ್ಯಾಚರಣೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಅದರಿಂದಾಗಿ ಅಭಿಮನ್ಯು ಕಂಡರೆ ನನಗೆ ಪಂಚಪ್ರಾಣ.

ತಂದೆಯೇ ಪಳಗಿಸಿದ್ದು: ನನ್ನ ತಂದೆ ಸಣ್ಣಪ್ಪ ಈ ಹಿಂದೆ ಅರ್ಜುನ ಆನೆಗೆ ಕಾವಾಡಿ ಯಾಗಿ ಕೆಲಸ ಮಾಡಿದ್ದರು. ತದನಂತರ 1977ರಲ್ಲಿ ಅಭಿಮನ್ಯುವಿಗೆ ಮಾವುತರಾಗಿ ನಿಯೋಜನೆಗೊಂಡರು. ಅವರ ನಿವೃತ್ತಿಯ ನಂತರ 2009ರಲ್ಲಿ ನಾನು ಮಾವುತನಾಗಿ ಅಭಿಮನ್ಯುಗೆ ನಿಯೋಜನೆಗೊಂಡೆ. ಅದಕ್ಕೂ ಮುನ್ನ (2003ರಿಂದ) ಹೊರ ಗುತ್ತಿಗೆ ಆಧಾರ ದಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ತಂದೆ ಸಣ್ಣಪ್ಪ ಅಭಿಮನ್ಯುವನ್ನು ಕಾಳಜಿಯಿಂದ ನೋಡಿ ಕೊಂಡಿದ್ದಂತೆ ನಾನೂ ಸಹ ಅಷ್ಟೇ ಪ್ರೀತಿ ಯಿಂದ ಸಲಹುತ್ತಿದ್ದೇನೆ. ನಮ್ಮ ತಾತ ರೋಸಿ ಎಂಬ ಹೆಣ್ಣಾನೆಯನ್ನು ನಮ್ಮ ಮುತ್ತಾತ ಹಳೇ ಅರ್ಜುನನಿಗೆ ಮಾವುತರಾಗಿ ಸೇವೆ ಸಲ್ಲಿಸಿದ್ದರು. ನಮ್ಮ ಕುಟುಂಬವೇ ಆನೆ ನೋಡಿಕೊಳ್ಳುವ ಕಾಯಕದಲ್ಲಿ ತೊಡಗಿ ಸಿಕೊಂಡು ಬಂದಿದೆ.

ಎಂ.ಟಿ. ಯೋಗೇಶ್‍ಕುಮಾರ್

 

Translate »