ವದಂತಿ ನಂಬದಿರಿ: ಡಿಸಿ ಮನವಿ
ಮೈಸೂರು

ವದಂತಿ ನಂಬದಿರಿ: ಡಿಸಿ ಮನವಿ

March 22, 2020

ಮೈಸೂರು,ಮಾ.21(ವೈಡಿಎಸ್)- ಕೊರೊನಾ ವೈರಸ್ ತಡೆಗಟ್ಟಲು ಯೋಧರು ವಿಮಾನದ ಮೂಲಕ ಬಂದು ರಾತ್ರಿ ಔಷಧಿ ಸಿಂಪಡಿಸಲಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ಯಾರೂ ನಂಬಬಾರದು ಎಂದು ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೋವಿಡ್-19 ವೈರಸ್ ಹರಡದಂತೆ ತಡೆಗಟ್ಟಲು ಭಾರತೀಯ ಯೋಧರು ವಿಮಾನದಲ್ಲಿ ಶನಿವಾರ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಔಷಧಿ ಸಿಂಪಡಿಸಲಿದ್ದಾರೆ. ಹಾಗಾಗಿ ಮನೆಯಿಂದ ಯಾರೂ ಹೊರಬರಬಾರದು. ಬಟ್ಟೆಗಳನ್ನು ಒಗೆದು ಒಣಹಾಕಿ ದ್ದರೆ ತೆಗೆದುಕೊಳ್ಳಬೇಕು ಎಂಬ ಆಡಿಯೋ ವೈರಲ್ ಆಗಿತ್ತು. ಈ ಕುರಿತು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಯಾವುದೇ ರೀತಿಯ ವಿಮಾನ, ಹೆಲಿಕಾಪ್ಟರ್ ಬಳಸಿ ಔಷಧಿ ಸಿಂಪಡಿಸುವುದಾಗಲಿ, ಸ್ಪ್ರೇ ಮಾಡುವು ದಾಗಲೀ ಇಲ್ಲ ಎಂದು ಸ್ಪಷ್ಟಪಡಿಸಿದರು.

Translate »