ಮೈಸೂರು, ಮಾ.21(ಎಂಟಿವೈ)- ಕೊರೊನಾ ವೈರಸ್ ತ್ವರಿತ ರೀತಿ ವ್ಯಾಪಿ ಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಭಾನು ವಾರದ (ಮಾ.22) `ಜನತಾ ಕಫ್ರ್ಯೂ’ಗೆ ಎಲ್ಲರೂ ಬೆಂಬಲ ನೀಡಬೇಕು. ಮಹಾ ಮಾರಿ ಕೊರೊನಾದಿಂದ ದೂರ ಉಳಿಯಿರಿ. ಜತೆಗೆ ಒಂದು ದಿನವಾದರೂ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.
ಕೊರೊನಾ ವೈರಾಣು ಹಾಗೂ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಶನಿವಾರ ಮೈಸೂರು ಅರಮನೆಯ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈರಸ್ ತಗುಲಿರುವ ಶಂಕೆಯಿಂದ ಈವ ರೆಗೂ ಕೆ.ಆರ್.ಆಸ್ಪತ್ರೆಯಲ್ಲಿ 288 ಮಂದಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 28 ಜನರ ಸ್ಯಾಂಪಲ್ ಪಡೆದು ಪರೀಕ್ಷೆಗೊಳಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೋಂಕಿನ ಲಕ್ಷಣ ಕಂಡು ಬಂದ 233 ಜನರನ್ನು ಹೋಮ್ ಕ್ವಾರಂಟೈನ್‍ನಲ್ಲಿಟ್ಟು ಚಿಕಿತ್ಸೆ ನೀಡ ಲಾಗುತ್ತಿದೆ ಎಂದು ವಿವರಿಸಿದರು.
ಪ್ರಯೋಗಾಲಯದಲ್ಲಿ: ವಿದೇಶದಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗು ತ್ತಿದೆ. ಅನಾರೋಗ್ಯ ಲಕ್ಷಣ ಕಂಡು ಬಂದರೆ ಅವರ ರಕ್ತದ ಮಾದರಿಯನ್ನು ಪರೀಕ್ಷೆ ಗೊಳಪಡಿಸುತ್ತಿದ್ದು, ಮೈಸೂರಲ್ಲಿಯೇ ಪ್ರಯೋ ಗಾಲಯ ತೆರೆಯಲಾಗಿದೆ. ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಈ ಪ್ರಯೋಗಾಲಯ ದಲ್ಲಿ ಈವರೆಗೆ ಮಂಡ್ಯದಿಂದ 3, ಚಾಮ ರಾಜನಗರದಿಂದ 3 ಹಾಗೂ ಕೊಡಗಿ ನಿಂದ 7 ಮಂದಿ ಸೇರಿದಂತೆ ಒಟ್ಟು 42 ರೋಗಿಗಳ ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಲಾಗಿದೆ. ಉಳಿದವು ಸೋಂಕು ತಗುಲಿದ ಶಂಕೆಯ ಮೈಸೂರಿನ ವ್ಯಕ್ತಿಗಳ ದ್ದಾಗಿದೆ ಎಂದು ತಿಳಿಸಿದರು.
ಪರೀಕ್ಷೆಗೊಳಪಟ್ಟ ಸ್ಯಾಂಪಲ್‍ಗಳಲ್ಲಿ ಕೊಡಗು ಜಿಲ್ಲೆಯಲ್ಲಿನ ಒಂದು `ಪಾಸಿ ಟಿವ್’ ವರದಿ ಬಂದಿದೆ. ಹಾಗಾಗಿ ಮುನ್ನೆ ಚ್ಚರಿಕೆ ಕ್ರಮ ಕೈಗೊಂಡಿದ್ದು, ಕೆ.ಆರ್. ಆಸ್ಪತ್ರೆ ಯಲ್ಲಿ 10, ಜೆಎಸ್‍ಎಸ್ ಆಸ್ಪತ್ರೆಯಲ್ಲಿ 10, ರೈಲ್ವೆ ಆಸ್ಪತ್ರೆಯಲ್ಲಿ 10 ಹಾಸಿಗೆಯ ವಾರ್ಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆ ಯಲ್ಲೂ 50 ಬೆಡ್‍ಗಳ ವಾರ್ಡ್ ಸಿದ್ಧ ಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲಾಡಳಿತ ಕಟ್ಟೆಚ್ಚರ: ಪಾರಂಪರಿಕ ಹಾಗೂ ಅರಮನೆಗಳ ನಗರಿ, ಸ್ವಚ್ಛತಾ ನಗರಿ ಎನಿಸಿಕೊಂಡಿರುವ ಮೈಸೂರು ನಗರಕ್ಕೆ ದೇಶ ವಿದೇಶದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಕೊರೊನಾ ವೈರಸ್ ವಿಶ್ವದ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತೀವ್ರ ಸ್ವರೂ ಪದ ದುಷ್ಪರಿಣಾಮ ಬೀರಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಕೆಲವು ತೀರ್ಮಾನಗಳಿಂದಾಗಿ ನಮ್ಮ ದೇಶ ದಲ್ಲಿ ಕೊರೊನಾ ವೈರಸ್ ದೊಡ್ಡಮಟ್ಟ ದಲ್ಲಿ ದುಷ್ಪರಿಣಾಮ ಬೀರಿಲ್ಲ. ಮೈಸೂರು ಸೇರಿದಂತೆ ಕರ್ನಾಟಕದಲ್ಲೂ ಇದುವ ರೆಗೆ ಕೊರೊನಾ ವೈರಸ್ ವ್ಯಾಪಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವದಲ್ಲಿ ಇಲ್ಲಿನ ಅಧಿಕಾರಿಗಳ ಕಟ್ಟುನಿಟ್ಟಿನ ಮುಂಜಾ ಗ್ರತಾ ಕ್ರಮ ಕೈಗೊಂಡು ಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಜನತೆ ಜಿಲ್ಲಾಡಳಿತಕ್ಕೆ ಸಹಕಾರ ನೀಡ ಬೇಕು ಎಂದು ಮನವಿ ಮಾಡಿದರು.
ಹೆಚ್ಚು ಜನ ಸೇರಬಾರದು: ನಗರದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ 10 ಮಂದಿಗಿಂತ ಹೆಚ್ಚಾಗಿ ಒಂದೆಡೆ ಸೇರ ದಂತೆ ನಿಗಾ ಇಡಿ ಎಂದು ಪೊಲೀಸ್ ಆಯುಕ್ತರಿಗೆ ಸಚಿವರು ಸೂಚಿಸಿದರು.
ಬೀದಿಬದಿ ವ್ಯಾಪಾರ ಸ್ಥಗಿತ: ಕೊರೊನಾ ವೈರಸ್‍ನಿಂದ ದೇಶದ ಜನರನ್ನು ರಕ್ಷಿಸಲು ಪ್ರಧಾನಿ ಮೋದಿ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೂ `ಜನತಾ ಕಫ್ರ್ಯೂ’ಗೆ ಕರೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಮೈಸೂರಿನಲ್ಲಿ ಮಾ.31ರವರೆಗೂ ತರ ಕಾರಿ, ಹಣ್ಣು, ಫಾಸ್ಟ್‍ಫುಡ್, ಟೀ ಅಂಗಡಿ ಗಳು ಸೇರಿದಂತೆ ಎಲ್ಲ ರೀತಿಯ ಬೀದಿಬದಿ ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಿ ಸಲು ನಿರ್ಧರಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಬೀದಿಬದಿ ಅಂಗಡಿ ಗಳನ್ನು ಬಂದ್ ಮಾಡಿಸಲು ಕ್ರಮ ಕೈಗೊಳ್ಳ ಲಿದ್ದು, ಪಾಲಿಕೆ ಸಿಬ್ಬಂದಿ ಸಹಕರಿಸಲಿ ದ್ದಾರೆ ಎಂದು ಸೋಮಣ್ಣ ವಿವರಿಸಿದರು.
ಹೆಚ್ಚು ಜನ ಸೇರುವ ಮಾಲ್‍ಗಳನ್ನು ಬಂದ್ ಮಾಡಲಾಗಿದೆ. ಆದರೆ ಹೆಚ್ಚು ಗ್ರಾಹ ಕರು ಸೇರುವ ಬಿಗ್ ಬಜಾರ್ ತೆರೆದಿರುವ ಬಗ್ಗೆ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನೂ ಬಂದ್ ಮಾಡಿಸಲಾಗುತ್ತದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳಿಗೆ ಮಾತ್ರ ವಿನಾಯಿತಿ ನೀಡ ಲಾಗಿದೆ ಎಂದು ಸ್ಪಷ್ಟಪಡಿಸಿದರು.
ಗಡಿ ಭಾಗದಲ್ಲಿ ತಪಾಸಣೆ: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ರುವ ಹಿನ್ನೆಲೆಯಲ್ಲಿ ಕೊಡಗು, ಚಾಮರಾಜ ನಗರ ಜಿಲ್ಲೆ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಸೋಂಕು ಪತ್ತೆಯಾ ಗಿರುವ ಹಿನ್ನೆಲೆಯಲ್ಲಿ 4 ಕಡೆ ಥರ್ಮಲ್ ಸ್ಕ್ರೀನಿಂಗ್ ಕೇಂದ್ರ ತೆರೆಯಲಾಗಿದೆ. ಕುಟ್ಟಾ ರಸ್ತೆಯಿಂದ ಬರುವವರನ್ನು ವೀರನ ಹೊಸಳ್ಳಿ ಕೇಂದ್ರದಲ್ಲಿ ಪರೀಕ್ಷಿಸಲಾಗುತ್ತದೆ. ಪಿರಿಯಾಪಟ್ಟಣ, ಕುಶಾಲನಗರ ರಸ್ತೆಯಲ್ಲೂ ತಪಾಸಣಾ ಕೇಂದ್ರ ಆರಂಭಿಸಲಾಗಿದೆ. ಸೋಂಕು ಪತ್ತೆಯಾದವರನ್ನು ಯಾವುದೇ ಕಾರಣಕ್ಕೂ ಜಿಲ್ಲೆಗೆ ಬರಲು ಬಿಡುವುದಿಲ್ಲ. ಸೋಂಕಿತರು ಎಷ್ಟೇ ಪ್ರಭಾವಿತರಾಗಿ ದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್‍ಪಿ ಸಿ.ಬಿ. ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ. ಜಯಂತ್, ಡಾ.ಡಿ.ಜಿ.ನಾಗರಾಜು, ವಲಯ ಆಯುಕ್ತ ಎಸ್.ಶಿವಾನಂದ ಮೂರ್ತಿ, ಕಮರ್ಷಿಯಲ್ ಟ್ಯಾಕ್ಸ್ ಮೈಸೂರು ವಿಭಾ ಗದ ಮಂಜುನಾಥ್, ಡಿಡಿಪಿಐ ಪಾಂಡು ರಂಗ ಮತ್ತಿತರರು ಸಭೆಯಲ್ಲಿದ್ದರು.