ಕಲಾರಸಿಕರ ಮನಸೆಳೆದ ‘ಡೋರ್ ನಂಬರ್-8’
ಮೈಸೂರು

ಕಲಾರಸಿಕರ ಮನಸೆಳೆದ ‘ಡೋರ್ ನಂಬರ್-8’

October 27, 2020

ಮೈಸೂರು, ಅ.26(ಎಂಕೆ)- ಕೊರೊನಾ ಆತಂಕದ ನಡುವೆಯೂ ಕಲಾಭಿಮಾನಿ ಗಳಿಗೆ ಕಚಗುಳಿ ಹಿಟ್ಟು ನಕ್ಕು ನಗಿಸಿದ ಡೋರ್ ನಂ-8…! ಮೈಸೂರು ರಂಗಾಯಣದಲ್ಲಿ ಭಾನುವಾರ ಕಾವ್ಯ ಕಡಮೆ ನಾಗರಕಟ್ಟೆ ಅವರ ರಚನೆ, ಕಲಾವಿದ ಆರ್.ಧನಂಜಯ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಡೋರ್ ನಂ-8’ ವಾರಾಂತ್ಯ ನಾಟಕ ಪ್ರದರ್ಶನ ಕಲಾರಸಿಕರ ಮನಗೆದ್ದಿತು.

ತೀರ ಸರಳ, ಸಾಮಾನ್ಯ ರೀತಿಯಲ್ಲಿ ಬದುಕನ್ನು ‘ಬೇಕು-ಬೇಡ’ ಎನ್ನುವ ಹಾಗೂ ಹಾಸ್ಯಭರಿತ ಸಂಭಾ ಷಣೆಯಿಂದ ಕೂಡಿರುವ ‘ಡೋರ್ ನಂಬರ್ -8’ ನಾಟಕ ವನ್ನು ಕಲಾವಿದರಾದ ಮಹೇಶ್ ಕಲ್ಲತಿ, ಆರ್.ಧನಂ ಜಯ ಅಮೋಘವಾಗಿ ಅಭಿ ನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದರು. ಕೊರೊನಾ ಹಿನ್ನೆಲೆ ಸುಮಾರು 8 ತಿಂಗಳ ಬಳಿಕ ಮೈಸೂರು ರಂಗಾಯಣದಲ್ಲಿ ಮೊದಲ ವಾರಾಂತ್ಯ ನಾಟಕ ಪ್ರದರ್ಶನಗೊಂಡಿದೆ. ಮುಂದಿನ ದಿನಗಳಲ್ಲಿ ವಾರಾಂತ್ಯ ನಾಟಕಗಳು ಮುಂದುವರೆಯುವುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಸರ್ಕಾರದ ಸೂಚನೆಯಂತೆ ಎಲ್ಲಾ ಬಗೆಯ ರಂಗಚಟುವಟಿಕೆಗಳು ಪ್ರಾರಂಭವಾಗಿದ್ದು, ಮೈಸೂರು ರಂಗಾಯಣ ಮರಳಿ ರಂಗಕ್ಕೆ ಎಂಬ ಶಿರ್ಷಿಕೆಯಡಿ ವಾರಾಂತ್ಯ ನಾಟಕ ಪ್ರದರ್ಶನಗಳ ಆಯೋಜಿಸಲಾಗುವುದು. ನಾಟಕ ಪ್ರದರ್ಶನದ ವೇಳೆ ಕೊರೊನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Translate »