ಪೆರಿಫೆರಲ್ ರಿಂಗ್ ರಸ್ತೆಗೆ ಡಿಪಿಆರ್
ಮೈಸೂರು

ಪೆರಿಫೆರಲ್ ರಿಂಗ್ ರಸ್ತೆಗೆ ಡಿಪಿಆರ್

April 1, 2022

ಮೈಸೂರು: ಬೆಳೆಯುತ್ತಿರುವ ಮೈಸೂರು ನಗರ ದಲ್ಲಿ ಜನ ಮತ್ತು ವಾಹನ ಸಂಖ್ಯೆಗನುಗುಣವಾಗಿ ಪ್ರಸ್ತುತ ಇರುವ 42 ಕಿ.ಮೀ. ರಿಂಗ್ ರಸ್ತೆ ಜೊತೆಗೆ ಮುಂದಿನ ದಶಕಗಳಲ್ಲಿ ಹೊರ ವರ್ತುಲ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ನಿರ್ಮಿಸಲು ಮುಡಾ ಚಿಂತನೆ ನಡೆಸಿದೆ. ಬಜೆಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿ ಸಿದ ಆಯುಕ್ತ ಡಾ.ಡಿ.ಬಿ.ನಟೇಶ್, ಮುಂದಿನ ಮೂರು ದಶಕಗಳಲ್ಲಿ ಮೈಸೂರು ನಗರದ ಅಭಿವೃದ್ಧಿ ಯನ್ನು ಗಮನದಲ್ಲಿರಿಸಿಕೊಂಡು ಅಂತಾರಾಜ್ಯ ಸಂಪರ್ಕ, ಪ್ರವಾಸೋದ್ಯಮ ಹಾಗೂ ಕೈಗಾರಿ ಕೋದ್ಯಮದ ಲಾಭ ಪಡೆಯಲು ಈ ಯೋಜನೆ ರೂಪಿಸಲಾಗಿದೆ ಎಂದರು. ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆಯ ಎರಡೂ ಬದಿಯಲ್ಲಿ 750 ಮೀ. ವರೆಗೆ ಭೂಮಿ ಸ್ವಾಧೀನಪಡಿಸುವ ಮೂಲಕ ಒಟ್ಟು 73.25 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಈ ಯೋಜನೆಗೆ ಒಟ್ಟು 27,468.75 ಎಕರೆ ಭೂಮಿ (ರಸ್ತೆಯ ಎರಡೂ ಬದಿ ಜಾಗ ಸೇರಿ) ಅಗತ್ಯವಿದೆ. 45 ಮೀ ಅಗಲದ ಹೊರವರ್ತುಲ ರಸ್ತೆ ನಿರ್ಮಿಸಬೇಕಾಗಿದೆ. ಜೊತೆಗೆ ಎರಡೂ ಬದಿಯಲ್ಲಿ ವಾಣಿಜ್ಯ ಚಟುವಟಿಕೆ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ವಸತಿ ಸಮುಚ್ಚಯ, ಐಟಿ-ಬಿಟಿ ಪಾರ್ಕ್, ಆಟದ ಮೈದಾನ, ಉದ್ಯಾನ, ಮಾರುಕಟ್ಟೆ, ಸಾರಿಗೆ ಸೌಲಭ್ಯ ಅಭಿವೃದ್ಧಿಪಡಿಸಲು ಭೂಮಿಯನ್ನು ಕಾಯ್ದಿರಿಸಬೇಕಾಗುತ್ತದೆ ಎಂಬು ದನ್ನು ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ನೈಪುಣ್ಯತೆ ಹೊಂದಿರುವ ಸಂಸ್ಥೆಗಳಿಂದ ವಿಸ್ತøತ ಯೋಜನಾ ವರದಿ ತಯಾರಿಸಲು ಪ್ರಸಕ್ತ ಸಾಲಿನಲ್ಲಿ 3 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

Translate »