ಡಾ.ಅಂಬೇಡ್ಕರ್ ಕಲ್ಪನೆಯ ಪ್ರಬುದ್ಧ ಭಾರತದ ಚರ್ಚೆಯಾಗಬೇಕು `ಪೂನಾ ಒಪ್ಪಂದ, ಆನಂತರದ ಪರಿಣಾಮಗಳು- ಒಂದು ಸಂವಾದ’ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಮತ
ಮೈಸೂರು

ಡಾ.ಅಂಬೇಡ್ಕರ್ ಕಲ್ಪನೆಯ ಪ್ರಬುದ್ಧ ಭಾರತದ ಚರ್ಚೆಯಾಗಬೇಕು `ಪೂನಾ ಒಪ್ಪಂದ, ಆನಂತರದ ಪರಿಣಾಮಗಳು- ಒಂದು ಸಂವಾದ’ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಮತ

September 25, 2021

ಮೈಸೂರು, ಸೆ.೨೪(ಆರ್‌ಕೆಬಿ)- ಸ್ವಾತಂತ್ರ÷್ಯ ನಂತರದ ಚುನಾವಣೆಗಳಲ್ಲಿ ಬಾಬಾ ಸಾಹೇಬರು ಬಯಸಿದ ದಲಿತ ರಾಜಕಾರಣ, ದಲಿತ ನಾಯಕತ್ವ, ಎಲ್ಲವನ್ನು ಒಳಗೊಂಡ ಪ್ರಬುದ್ಧ ಭಾರತದ ನಿರ್ಮಾಣ ಸಾಧ್ಯವಾಗಿದೆಯೇ? ಎಂಬ ಕಡೆ ಆರೋಗ್ಯಪೂರ್ಣ ಚರ್ಚೆಗಳು, ಸಂವಾದಗಳು, ಸಂಶೋಧನೆಗಳು ಹೆಚ್ಚು-ಹೆಚ್ಚು ನಡೆಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ಶುಕ್ರವಾರ `ಪೂನಾ ಒಪ್ಪಂದ ಮತ್ತು ಆನಂತರದ ಪರಿಣಾಮಗಳು- ಒಂದು ಸಂವಾದ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಪೂನಾ ಒಪ್ಪಂದ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಚಾರಿತ್ರಿಕ ಘಟ್ಟವಾಗಿದೆ. ಗಾಂಧೀಜಿ ಅವರಿಗೆ ಭಾರತವನ್ನು ಬ್ರಿಟೀಷ ರಿಂದ ಮುಕ್ತಿಗೊಳಿಸುವುದು ಆದ್ಯತೆಯಾದರೆ, ಅಂಬೇಡ್ಕರ್ ರವರಿಗೆ ಭಾರತೀಯರನ್ನು ಸಾಮಾಜಿಕ ಸಂಕೋಲೆ ಯಿಂದ ಮುಕ್ತಿಗೊಳಿಸುವುದು ಆದ್ಯತೆಯಾಗಿತ್ತು ಎಂದರು.
ಕರ್ನಾಟಕ ರಾಜ್ಯ ರಾಜಕೀಯ ಮೀಸಲಾತಿ ವಿಚಾರದಲ್ಲಿ ಅದರಲ್ಲೂ ಸ್ಥಳೀಯ ಸರ್ಕಾರ ವ್ಯವಸ್ಥೆ ಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವ ಮೂಲಕ ಸಾಮಾಜಿಕ ನ್ಯಾಯದ ನಡೆಯಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಹೇಳಬಹುದು. ಮಹಿಳೆಯರ ರಾಜಕೀಯ ಮೀಸಲಾತಿಯ ಮಸೂದೆಯು ಸಂಸತ್ತಿ ನಲ್ಲಿಯೇ ಉಳಿದಿದೆ. ರಾಜಕೀಯ ಮೀಸಲಾತಿಗೆ ಅರ್ಥ ಬರಬೇಕಾದರೆ ಭಾರತೀಯರು ವೈಜ್ಞಾನಿಕ ಮನೋಭಾವನೆ ಯನ್ನು ಬುದ್ಧ ಪ್ರಜ್ಞೆಯ, ಬೆಳಕಿನಲ್ಲಿ ಸ್ಥಾಪಿಸಿ ಕೊಂಡಾಗ ಮಾತ್ರವೇ ರಾಜಕೀಯ ಮೀಸಲಾತಿಗೆ ಅರ್ಥ ಬರುತ್ತದೆ ಎಂದು ಹೇಳಿದರು. ಗಾಂಧಿಯನ್ನು ಉಳಿಸಿಕೊಳ್ಳಲು ಬಾಬಾ ಸಾಹೇಬರು ಬಹುದೊಡ್ಡ ತ್ಯಾಗವನ್ನು ಮಾಡಿದ್ದಾರೆ. ಬಾಬಾ ಸಾಹೇಬರ ನೆಲೆಯಲ್ಲಿ ಹೇಳುವುದಾದರೆ, ಕೋಮುವಾರು, ತೀರ್ಪಿನಿಂದ ನೈಜ ಪ್ರಾತಿನಿಧ್ಯತ್ವ ಸಾಧ್ಯವಾಗುತ್ತ ದೆಂದು ಹಾಗೂ ಎರಡು ಮತಗಳಿರುವುದರಿಂದ ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕು ಪ್ರತ್ಯೇಕ ಸಮು ದಾಯಕ್ಕೂ ಕೊಟ್ಟಿರುವುದನ್ನು ಬಾಬಾ ಸಾಹೇಬರು ಬೆಲೆ ಕಟ್ಟಲಾಗದ ಆಸ್ತಿ ಎಂದೇ ಸ್ವಾಗತಿಸಿದರು. ಆದರೆ ಗಾಂಧಿಯವರ ವಿರೋಧದಿಂದಾಗಿ ಪ್ರತ್ಯೇಕ ಮತದಾನವನ್ನು ಕಳೆದುಕೊಳ್ಳಬೇಕಾಯಿತು ಎಂದರು.

ಗದಗದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ವಿಶ್ವವಿದ್ಯಾನಿಲಯ ಗೌರವ ಪ್ರಾಧ್ಯಾಪಕ ಪ್ರೊ.ಡಿ.ಜೀವನ್‌ಕುಮಾರ್ ಮಾತನಾಡಿದರು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ, ಅಂಬೇ ಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಉಪಸ್ಥಿತರಿದ್ದರು.

 

Translate »