ಮುಕ್ತ ಗಂಗೋತ್ರಿಯಲ್ಲಿ ಸಜ್ಜಾಗಿದೆ ಹೈಟೆಕ್ ‘ದೃಶ್ಯ-ಶ್ರವಣ ಸ್ಟುಡಿಯೋ’
ಮೈಸೂರು

ಮುಕ್ತ ಗಂಗೋತ್ರಿಯಲ್ಲಿ ಸಜ್ಜಾಗಿದೆ ಹೈಟೆಕ್ ‘ದೃಶ್ಯ-ಶ್ರವಣ ಸ್ಟುಡಿಯೋ’

September 25, 2021

ಮೈಸೂರು, ಸೆ. ೨೪(ಆರ್‌ಕೆ)- ರಾಜ್ಯಾ ದ್ಯಂತ ಪ್ರಾದೇಶಿಕ ಕೇಂದ್ರಗಳಲ್ಲಿ ವಿದ್ಯಾರ್ಥಿ ಗಳು ಪಾಠ ಕೇಳಲು ಸಹಾಯವಾಗ ಲೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ(ಏSಔU)ವು ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿ ಸಜ್ಜುಗೊಳಿಸಿ ರುವ ಅತ್ಯಾಧುನಿಕ ತಂತ್ರಜ್ಞಾನದ ದೃಶ್ಯ ಮತ್ತು ಶ್ರವ್ಯ(ಆಡಿಯೋ-ವಿಡಿಯೋ) ಸ್ಟುಡಿಯೋ ಉದ್ಘಾಟನೆಗೆ ರೆಡಿಯಾಗಿದೆ.

ಮುಕ್ತಗಂಗೋತ್ರಿ ಆವರಣದ ತುಂಗ ಭದ್ರ ಸಭಾಂಗಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆಡಿಯೋ-ವಿಡಿಯೋ ಕ್ಯಾಮರಾಗಳು, ಎಎನ್‌ಎನ್‌ಸಿಆರ್ ಮತ್ತು ರೆಕಾರ್ಡಿಂಗ್ ಉಪಕರಣ, ಶಬ್ಧವನ್ನು ತಡೆದಿಟ್ಟು ಹೊರಗೆ ಕೇಳಿಸಿದಂತೆ ನಿಯಂ ತ್ರಿಸುವ ಸಲಕರಣೆ, ಪ್ರಿಂಟರ್‌ಗಳು, ಕಂಪ್ಯೂಟರ್, ರೆಕಾರ್ಡ್ ಮಾಡಿದ ಪಾಠ ಗಳನ್ನು ಸ್ಟೋರ್ ಮಾಡಿಕೊಳ್ಳುವ ಉಪ ಕರಣಗಳನ್ನೊಳಗೊಂಡ ಹವಾನಿಯಂತ್ರಿತ ಹೈಟೆಕ್ ಸ್ಟುಡಿಯೋ ಅನ್ನು ಮುಕ್ತ ವಿಶ್ವವಿದ್ಯಾನಿಲಯವು ಸಿದ್ಧಪಡಿಸಿದೆ.

ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸುಗಳಿಗೆ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡಿರುವು ದರಿಂದ ಪಠ್ಯಕ್ರಮಗಳನ್ನು ಸಿದ್ಧಪಡಿಸಿ ರಾಜ್ಯದಲ್ಲಿರುವ ವಿವಿಧ ಜಿಲ್ಲೆಗಳ ಪ್ರಾದೇಶಿಕ ಕೇಂದ್ರ(ಖegioಟಿಚಿಟ ಅeಟಿಣಡಿe) ಗಳಿಗೆ ತಲುಪಿಸಲು ಹಾಗೂ ಸ್ಟುಡಿಯೋದಲ್ಲಿ ಪ್ರಾಧ್ಯಾಪಕರು ಮಾಡುವ ಪಾಠವನ್ನು ಆನ್‌ಲೈನ್ ಮೂಲಕ ನೇರ ವಾಗಿ ಕೇಳಲು ಈ ಸ್ಟುಡಿಯೋ ಅನು ಕೂಲವಾಗಲಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ತಿಳಿಸಿದರು.

ಈ ಹಿಂದಿನಿAದಲೂ ಮುಕ್ತ ವಿಶ್ವವಿದ್ಯಾ ನಿಲಯದಲ್ಲಿ ಈ ವ್ಯವಸ್ಥೆ ಇದೆಯಾದರೂ, ವಿದ್ಯಾರ್ಥಿಗಳಿಗೆ ಪ್ರಯೋಜನವಾಗು ತ್ತಿರಲಿಲ್ಲ. ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಕ್ಕನುಗುಣವಾಗಿ ಪಾಠ-ಪ್ರವ ಚನವನ್ನೂ ನೀಡುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಅವಶ್ಯ ವಿರುವುದರಿಂದ ಈ ಹೈಟೆಕ್ ಆಡಿಯೋ -ವಿಡಿಯೋ ಸ್ಟುಡಿಯೋವನ್ನು ಸಿದ್ದಪಡಿಸ ಲಾಗಿದೆ ಎಂದೂ ಅವರು ತಿಳಿಸಿದರು.

ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿರುವ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರಿರುವ ಸ್ಥಳದಲ್ಲೇ ನೇರವಾಗಿ ಪಾಠ ಕೇಳುವ ಸೌಲಭ್ಯ ಒದ ಗಿಸುವ ಜೊತೆಗೆ ವಿವಿಧ ಕೋರ್ಸುಗಳ ಪಠ್ಯಕ್ರಮವನ್ನು ರೆಕಾರ್ಡ್ ಮಾಡಿ ಪ್ರಾದೇ ಶಿಕ ಕೇಂದ್ರಗಳಿಗೆ ರವಾನಿಸಬಹುದಾಗಿದೆ ಎಂದೂ ಅವರು ತಿಳಿಸಿದರು.

ಬಯಸಿದ್ದಲ್ಲಿ ರಾಜ್ಯದಲ್ಲಿರುವ ಇನ್ನಿತರ ವಿಶ್ವವಿದ್ಯಾನಿಲಯಗಳಿಗೂ ಸಿಲಬಸ್, ಲೆಸನ್ ಕಂಟೆAಟ್ ಅನ್ನೂ ಸ್ಟುಡಿಯೋ ದಲ್ಲಿ ಸಿದ್ಧಪಡಿಸಿ ಪೂರೈಸಬಹುದಾಗಿದೆ. ಸೆಪ್ಟೆಂಬರ್ ಕಡೇ ವಾರ ಅಥವಾ ಅಕ್ಟೋ ಬರ್ ಮೊದಲವಾರ ರಾಜ್ಯಪಾಲರು, ಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿ ವರ ಲಭ್ಯತೆ ನೋಡಿಕೊಂಡು ಉದ್ಘಾಟನೆಗೆ ದಿನಾಂಕ ನಿಗಧಿಗೆ ಕಾಯುತ್ತಿದ್ದೇವೆ ಎಂದೂ ಪ್ರೊ.ವಿದ್ಯಾಶಂಕರ ಅವರು ತಿಳಿಸಿದರು.

ಮುಕ್ತ ವಿಶ್ವವಿದ್ಯಾನಿಲಯದ ಬೆಳ್ಳಿಹಬ್ಬದ ಅಂಗವಾಗಿ ಈ ಆಡಿಯೋ-ವಿಡಿಯೋ ಸ್ಟುಡಿಯೋವನ್ನು ವಿದ್ಯಾರ್ಥಿಗಳ ಅನು ಕೂಲಕ್ಕಾಗಿ ಸಮರ್ಪಣೆ ಮಾಡಲಾಗು ವುದು. ಮುಂದೆ ಹಲವು ಶೈಕ್ಷಣ ಕ ಕಾರ್ಯಕ್ರಮ ಗಳು, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣಗಳು ವರ್ಷ ಪೂರ್ತಿ ನಡೆಯ ಲಿದ್ದು, ಅದಕ್ಕಾಗಿ ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದೂ ತಿಳಿಸಿದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾ ಯಕ ಪ್ರಾದ್ಯಾಪಕಿ ಪ್ರೊ.ಸುಮತಿ ಆರ್. ಗೌಡ ಅವರು ವಿಡಿಯೋ ಹಾಗೂ ಪತ್ರಿಕೋ ದ್ಯಮ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಹೇಮಲತಾ ಅವರು ಆಡಿಯೋ ವ್ಯವಸ್ಥೆಯ ಮೇಲ್ವಿ ಚಾರಣೆ ನಡೆಸುವರು. ಸ್ಟುಡಿಯೋಗೆ ಬೇಕಾದ ವಿದ್ಯುತ್, ಸಿಬ್ಬಂದಿ ಹಾಗೂ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದೂ ಪ್ರೊ.ವಿದ್ಯಾಶಂಕರ ವಿವರ ನೀಡಿದರು.

 

Translate »