ಸಂಗೀತ ಸಾಧಕ ಡಾ.ಕೆ.ವಾಗೀಶ್‍ರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ
ಮೈಸೂರು

ಸಂಗೀತ ಸಾಧಕ ಡಾ.ಕೆ.ವಾಗೀಶ್‍ರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ

December 7, 2018

ಮೈಸೂರು: ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಗೀತ ಸಾಧಕ ಡಾ.ಕೆ.ವಾಗೀಶ್ ಅವರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಲಾಯಿತು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 25ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ವಾಗೀಶ್ ಅವರಿಗೆ ಗುರು ವಾರ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಕಲಾಶ್ರೀ, ಸಂಗೀತ ಸರಸ್ವತಿ, ನಾದ ವಿದ್ಯಾ ಭೂಪತಿ, ಗಾಯಕ ರತ್ನ ಹೀಗೆ ವಿವಿಧ ಸಂಗೀತ ಸಂಸ್ಥೆ ಗಳ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿ ರುವ ವಾಗೀಶ್ ಅವರು, ಇಂದು `ಸಂಗೀತ ಸೇವಾನಿಧಿ’ ಪುರಸ್ಕಾರಕ್ಕೆ ಬಾಜನರಾದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಸಂಗೀತ ವಿದ್ಯಾನಿಧಿ ಎಸ್.ಶಂಕರ್, ಇಂತಹ ಸಂಗೀತ ಸಮ್ಮೇಳನಗಳಲ್ಲಿ ಹೆಚ್ಚೆಚ್ಚು ಯುವ ಕಲಾವಿದರು ಭಾಗವಹಿಸಬೇಕು. ಸಂಗೀತ, ಸಾಹಿತ್ಯ, ಸಂಸ್ಕøತಿಯ ಮಹತ್ವವನ್ನು ಅರಿಯಬೇಕು. ಶ್ರೇಷ್ಟ ಕಲೆ ಸಂಗೀತವನ್ನು ಬೆಳೆಸುವುದರೊಂದಿಗೆ ಮುಂದಿನ ತಲೆ ಮಾರಿಗೂ ಕೊಂಡೊಯ್ದು ಪೋಷಿಸುವ ಸತ್ಕಾರ್ಯವಾಗಬೇಕು. ಇದನ್ನು ಯುವ ಕಲಾವಿದರು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಗೀತ ಸಾಧನೆ ಸುಲಭ ಸಾಧ್ಯವಲ್ಲ. ಕಲಿಕೆಗೆ ಗುರುಕುಲ ಶಿಕ್ಷಣ ಪದ್ಧತಿ ಸೂಕ್ತ ವಾಗಿದೆ. ನಿರಂತರವಾಗಿ ನಿಷ್ಠೆಯಿಂದ ಕಲಿಯಬೇಕೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಮೇಲೆ ಒತ್ತಡ ಹೇರುವುದು, ಅವರ ಪ್ರತಿಭಾ ಪ್ರದರ್ಶನ ಕ್ಕಾಗಿ ವೇದಿಕೆ ಗಿಟ್ಟಿಸಿಕೊಳ್ಳಲು ಹಪಹಪಿಸ ಬಾರದು. ಪುಟ್ಟ ಸಸಿ, ನಿಧಾನವಾಗಿ ಬೆಳೆದು ಹೆಮ್ಮರವಾಗುವಂತೆ ಮಕ್ಕಳು ಹಂತಹಂತ ವಾಗಿ ಸಾಧನೆಯ ಮೆಟ್ಟಿಲೇರಬೇಕು. ಶಿಸ್ತು, ಸಂಯಮದಿಂದ ಕಲಿಕೆಯಲ್ಲಿ ತಲ್ಲೀನ ರಾದರೆ ಫಲ ತಾನಾಗಿಯೇ ದಕ್ಕುತ್ತದೆ ಎಂದು ಕಿವಿಮಾತು ಹೇಳಿದರು.

ಸಂಗೀತಾಭ್ಯಾಸದ ಜೊತೆಗೆ ಸಂಗೀತ ಕ್ಷೇತ್ರದ ದಿಗ್ಗಜರ ಜೀವನ, ಸಾಧನೆ ಕುರಿ ತಾದ ಪುಸ್ತಕಗಳನ್ನು ಓದಬೇಕು. ಇದ ರಿಂದ ಸಾಕಷ್ಟು ವಿಚಾರಗಳು ಮನದಟ್ಟಾ ಗುತ್ತವೆ. ಆಧುನಿಕ ತಂತ್ರಜ್ಞಾನಕ್ಕೆ ಅಂಟಿ ಕೊಳ್ಳಬಾರದು. ಯುವ ಸಮೂಹ ಮೊಬೈಲ್ ಸೆಳೆತಕ್ಕೆ ಬಲಿಯಾಗುತ್ತಿದೆ. 5 ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿ ದರೆ ಪ್ರಸ್ತುತ ಸಂಗೀತಗಾರರ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಿದೆ. ಹಾಗೆಯೇ ಗೊತ್ತು, ಗುರಿಯಿಲ್ಲದ ಹಾದಿಯೂ ಸೃಷ್ಟಿ ಯಾಗಿದೆ. ಹಾಗಾಗಿ ಕಲಾವಿದರು, ಯೋಗ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಸಿದ್ಧಿಸಿಕೊಳ್ಳಬೇಕು. ಉತ್ತಮ ಜೀವನಕ್ಕೆ ಪ್ರೇರಣೆ ನೀಡುವಂತಹ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅಭ್ಯಾಸದಲ್ಲಿ ಏಕಾಗ್ರತೆ ಕಾಯ್ದುಕೊಳ್ಳ ಬೇಕು. ಆಸೆಯ ಹಿಂಬಾಲಕರಾಗದೆ ಆತ್ಮತೃಪ್ತಿ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು. ಸಂಗೀತ ಸೇವಾನಿಧಿ ಕೆ.ವಿ. ಮೂರ್ತಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ವಿಪಂಚಿ-ಮಹಂತೀ ಅವರು ಪ್ರಸ್ತುತ ಪಡಿಸಿದ ದ್ವಂದ್ವ ಗಾಯನ ಸಂಗೀತಾಸಕ್ತರ ಹೃನ್ಮನ ತಣಿಸಿತು.
ಬಳಿಕ ಪೃಥ್ವಿ ಭಾಸ್ಕರ್ ವೈಲಿನ್, ಪವನ್ ಮಾಧವ್ ಮಾಸೂರ್ ಮೃದಂಗ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Translate »