ಜನಸೇವೆ ಮಾಡಬೇಕಾದ ಜನಪ್ರತಿನಿಧಿಗಳು  ಹೋಮ-ಹವನ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ…
ಮೈಸೂರು

ಜನಸೇವೆ ಮಾಡಬೇಕಾದ ಜನಪ್ರತಿನಿಧಿಗಳು  ಹೋಮ-ಹವನ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ…

December 7, 2018

ಮೈಸೂರು: ಜನಪ್ರತಿನಿಧಿಗಳು ಜನರ ಸೇವೆ ಮಾಡದೇ ಮಠ, ಮಂದಿರಗಳಲ್ಲಿ ಹೋಮ-ಹವನ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿ ಯರುಗಳ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ವಿಕಾಸ ವಾಹಿನಿ ಸಹಯೋಗದಲ್ಲಿ ಮೈಸೂರು ರತ್ನ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾ ಚರಣೆ ಅಂಗವಾಗಿ ‘ಸಂವಿಧಾನದ ಆಶಯಗಳು ಮತ್ತು ಭಾರತ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತ ನಾಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳು ಮತ ನೀಡಿ, ಕಳುಹಿಸಿದ ರಾಜಕಾರಣಿಗಳು ಅವರÀ ಸೇವೆಯನ್ನು ಮಾಡದೇ ದೇವಸ್ಥಾನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವ ದಲ್ಲಿರುವುದು ನನಗೆ ನೋವು ತಂದಿದೆ ಎಂದರು.

ದೇಶದ ಜನರು ಮಾಡುತ್ತಿದ್ದ ಕಾಯಕಗಳಿಗೆ ಒಂದೊಂದು ಜಾತಿಯನ್ನು ಸೃಷ್ಟಿ ಮಾಡುತ್ತಾ ಬಂದಿದ್ದಾರೆ. ಜಾತಿ ಸೃಷ್ಟಿ ಮಾಡುತ್ತಿರುವುದು ಇವತ್ತಿಗೂ ನಡೆಯುತ್ತಾ ಬಂದಿದೆ. ನಮ್ಮ ಸಮಾಜ ಹುಚ್ಚರ ಸಂತೆಯಾಗಿದೆ. ದೇವಸ್ಥಾನ ಗಳ ಮುಂದೆ ಎಲ್ಲಾ ಜಾತಿಯವರು ಬರಬಹುದು ಎಂಬ ನಾಮಫಲಕವನ್ನು ಅಳವಡಿಸುವ ಮಟ್ಟಕ್ಕೆ ತಲು ಪಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ವಚನ ಕ್ರಾಂತಿ ಮಾಡಿ, ಸಾಮಾಜಿಕ ಜಾಗೃತಿ ಮೂಡಿಸಿದ್ದರು. ಅವರು, ಕಾಯಕವೇ ಕೈಲಾಸ ಎಂದಿದ್ದರು.

ಆದರೆ, ಇಂದು ಕೈಲಾಸವೇ ಕಾಯಕವಾಗಿ ಬದಲಾವಣೆ ಮಾಡಿ ಕೊಂಡಿದ್ದಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಮನುಷತ್ವಕ್ಕೆ ಬೆಲೆ ಕೊಟ್ಟವರು ಈ ಮೂರು ರತ್ನಗಳು ಮಾತ್ರ. ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ನಮ್ಮ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಟವಾದ ಗ್ರಂಥ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಸಾಕಷ್ಟು ಬಾರಿ ಹೇಳಿದ್ದಾರೆ ಎಂದರು. ಇದೇ ವೇಳೆ ಲೇಖಕ ಪಿ.ಎಂ.ಮನೋಜ್ ಅವರ ‘ಕಾಸನೋವ’ ಮತ್ತು ಸಾಹಿತಿ ಪೂರೀಗಾಲಿ ಮರಡೇಶಮೂರ್ತಿ ಅವರ ‘ಸಾಕ್ಷಿಗುಡ್ಡ’ ಕೃತಿಗಳನ್ನು ಬಿಡುಗಡೆಗೊಳಿಸಿದರು.

ಕಾಯಕ ಪ್ರಶಸ್ತಿ ಪ್ರಧಾನ: ಡಾ.ಯಮದೂರು ಸಿದ್ಧರಾಜು, ಹಿರಿಯ ರೈತ ಹೋರಾಟಗಾರ ಎಂ.ಎಸ್. ರಾಜೇಂದ್ರ, ಎಪಿಎಂಸಿ ಉಪಾಧ್ಯಕ್ಷ ಚಿಕ್ಕ ಜವರಪ್ಪ, ವಿಳ್ಯೆದೆಲೆ ರೈತರ ಭೂ ಹೋರಾಟಗಾರ ಕುಮಾರ್ ಹಾಗೂ ಆದಿವಾಸಿ ಮುಖಂಡ ಹೆಮ್ಮಿಗೆ ಹರ್ಷ ಅವರಿಗೆ ‘ಕಾಯಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಆರ್.ಸಿದ್ದೇಗೌಡ, ಡೀಡ್ ಸಂಸ್ಥೆಯ ನಿರ್ದೇ ಶಕ ಡಾ.ಎಸ್.ಶ್ರೀಕಾಂತ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್, ಕೆ.ಎಂ.ನಾಗ ರಾಜ್ ಮತ್ತಿತರರು ಉಪಸ್ಥಿತರಿದ್ದರು.

Translate »