ತ್ಯಾಜ್ಯ ವಿಲೇವಾರಿ ಮಾಹಿತಿ ಕಾರ್ಯಾಗಾರ
ಕೊಡಗು

ತ್ಯಾಜ್ಯ ವಿಲೇವಾರಿ ಮಾಹಿತಿ ಕಾರ್ಯಾಗಾರ

December 8, 2018

ಸೋಮವಾರಪೇಟೆ:  ಕಾಫಿ ಬೆಳೆ ಗಾರರ ಹೋರಾಟ ಸಮಿತಿಯ ವತಿ ಯಿಂದ ಸಂಘದ ಕಚೇರಿಯಲ್ಲಿ, ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತ ನಾಡಿದ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖಾ ಅಧಿಕಾರಿ ಗಣೇಶ್‍ಕುಮಾರ್ ಅವರು, ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ಜಲಮೂಲಗಳಿಗೆ ಹರಿಸದಂತೆ ಕರೆ ನೀಡಿ ದರು. ಪಲ್ಪಿಂಗ್ ಘಟಕದಿಂದ ಉತ್ಪಾದನೆ ಯಾಗುವ ಕಲುಷಿತ ನೀರು ಮತ್ತು ತ್ಯಾಜ್ಯ ವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೈಗೊಳ್ಳಬೇಕಾದ ಅಗತ್ಯ ಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸಿ.ಮುದ್ದಪ್ಪ ಮಾತನಾಡಿ, ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಫಸಲು ನಷ್ಟ ಅನುಭ ವಿಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಸಹ ಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಕ್ರಮಕೈ ಗೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಸುದೀಪ್, ವಕ್ತಾರ ಶ್ಯಾಮ್‍ಪ್ರಕಾಶ್, ಸದಸ್ಯ ರಾದ ಬಿ.ಎ. ತಮ್ಮಯ್ಯ, ಬಿ.ಎ. ಬೋಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »