ಕೊಟ್ಟಗೇರಿ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತ: ಪ್ರತಿಭಟನೆ ಎಚ್ಚರಿಕೆ
ಕೊಡಗು

ಕೊಟ್ಟಗೇರಿ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತ: ಪ್ರತಿಭಟನೆ ಎಚ್ಚರಿಕೆ

December 8, 2018

ಪೊನ್ನಂಪೇಟೆ: ವಿರಾಜಪೇಟೆ ತಾಲೂಕು ಕೊಟ್ಟಗೇರಿ ಗ್ರಾಮಕ್ಕೆ ಕಳೆದ 9 ವರ್ಷ ದಿಂದ ಕರ್ನಾಟಕ ಸಾರಿಗೆ ಬಸ್ ಒಂದು ವಾರದಿಂದ ಸಂಚಾರ ಸ್ಥಗಿತಗೊಳಿಸಿದ್ದು, ಇದ ರಿಂದ ಗ್ರಾಮದ ಸಾರ್ವಜನಿಕರು, ವಿಧ್ಯಾರ್ಥಿಗಳು, ಕೂಲಿಕಾರ್ಮಿಕರಿಗೆ ತುಂಬಾ ಸಂಕಷ್ಟ ಉಂಟಾಗಿದೆ. ಬಸ್ ಸಂಚಾರವನ್ನು ಪುನರಾರಂಭಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕಳೆದ 9 ವರ್ಷದಿಂದ ಸರ್ಕಾರಿ ಸಾರಿಗೆ ಬಸ್ ಕೊಟ್ಟಗೇರಿಗೆ ಬೆಳಿಗ್ಗೆ 7.30 ಗೆ ಮತ್ತು ಸಂಜೆ 5.30ಗೆ ಬಂದು ಹೋಗುತ್ತಿತ್ತು. ಈ ಬಸ್ಸಿಗೆ ಗ್ರಾಮ ದಿಂದ ದಿನನಿತ್ಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಕೂಲಿ ಕಾರ್ಮಿಕರು ಓಡಾಡುತ್ತಿದ್ದರು, ಬಸ್ಸಿಗೆ ಉತ್ತಮ ಆದಾಯವು ಬರುತ್ತಿತ್ತು. ಆದರೆ ಇದೀಗ ದಿಢೀರ್ ಎಂದು ಬಸ್ಸು ನಿಲ್ಲಿಸಿದ್ದು, ಈ ಬಗ್ಗೆ ಸಂಬಂಧಿಸಿದ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ, ಬಸ್ಸು ಸಂಚಾರಪುನರಾರಂಭಗೊಂಡಿಲ್ಲ. ಆದ್ದರಿಂದ ಕೊಟ್ಟಗೇರಿ ಗ್ರಾಮದ ಲಕ್ಷ್ಮಣ ತೀರ್ಥ ಸ್ವಸಹಾಯ ಸಂಘ ಮತ್ತು ಶ್ರೀಕಾವೇರಿ ಮಹಿಳಾ ಸಂಘದ ಬೆಂಬಲದೊಂದಿಗೆ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ತಿಳಿಸಿದ್ದಾರೆ.

Translate »