ಮೈಸೂರು, ಜು. 18- ಓದುಗರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಬದುಕು ಕುರಿತಾದ “ತಾಷ್ಕೆಂಟ್ ಡೈರಿ” ಕೃತಿ ಶುಕ್ರವಾರ ಲೋಕಾರ್ಪಣೆಗೊಂಡಿತು.
ನಾಡಿನ ಹಿರಿಯ ಕಾದಂಬರಿ ಕಾರರೂ, ಸರಸ್ವತಿ ಸಮ್ಮಾನ್ ಪುರ ಸ್ಕøತರೂ ಆದ ಡಾ. ಎಸ್.ಎಲ್. ಭೈರಪ್ಪನವರು ಲೇಖಕರಾದ ಎಸ್. ಉಮೇಶ್ ಅವರಿಂದ ಪ್ರಥಮ ಕೃತಿ ಯನ್ನು ಸ್ವೀಕರಿಸುವ ಮೂಲಕ ಕೃತಿಯನ್ನು ಲೋಕಾರ್ಪಣೆಗೊಳಿಸಿ ದರು. ಅನಂತರ ಕೃತಿ ಮತ್ತು ಶಾಸ್ತ್ರೀಜಿ ಯವರನ್ನು ಕುರಿತು ಲೇಖಕರ ಜೊತೆ ತಮ್ಮ ಹಳೆಯ ನೆನಪುಗಳನ್ನು ಕೆದಕಿ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿದರು. ವೈಯಕ್ತಿಕವಾಗಿ, ಬನಾರಸ್‍ನಲ್ಲಿ ವಾಸವಿದ್ದ ಶಾಸ್ತ್ರೀಜಿ ಯವರ ಮನೆಗೆ ಭೇಟಿ ಕೊಟ್ಟ ಪ್ರಸಂಗ ಚಿರಸ್ಮರಣೀಯ ಎಂದರು. ಹಾಗೆಯೇ ಮುಂದುವರೆಯುವ ಲಕ್ಷಣದತ್ತ ಕಾಲಿ ಡುತ್ತಿದ್ದ ಭಾರತಕ್ಕೆ ಕ್ಷೀರ ಕ್ರಾಂತಿ ಅತ್ಯಂತ ಅವಶ್ಯಕ ಎಂದು ನಿರ್ಧರಿಸಿ ಶಾಸ್ತ್ರೀಜಿ ಯವರು ಆ ಕ್ಷೇತ್ರದಲ್ಲಿ ತಜ್ಞರಾಗಿದ್ದ ಕುರಿ ಯನ್ ಅವರಿಗೆ ಸಂಪೂರ್ಣ ಜವಾಬ್ದಾರಿ ವಹಿಸಿದರು (ಇದೇ ನಮ್ಮ ಭಾರತದ ಹೆಮ್ಮೆಯ ಪ್ರತೀಕ ಅಮೂಲ್) ಎಂದರು.
ತಾವು ದೆಹಲಿಯಲ್ಲಿದ್ದಾಗಿನ ಬ್ಯಾಂಕಿನ ಪ್ರಸಂಗವನ್ನು ನೆನಪು ಮಾಡಿಕೊಳ್ಳುತ್ತ ಶಾಸ್ತ್ರೀಜಿಯವರ ಸರಳತೆಗೆ ಇದು ಅತ್ಯು ತ್ತಮ ನಿದರ್ಶನ ಎಂದರು. ಅದು “ತಾಷ್ಕೆಂಟ್ ಡೈರಿ” ಪುಸ್ತಕದಲ್ಲಿ ಅವರದೇ ಮಾತು ಗಳಲ್ಲಿ ಮೂಡಿಬಂದಿದೆ. ಶಾಸ್ತ್ರೀಜಿಯವರು ಇನ್ನೂ ಬದುಕಿದ್ದರೆ ಬಹುಶಃ ಭಾರತದ ಇತಿಹಾಸವೇ ಬದಲಾಗುತ್ತಿತ್ತು ಎಂದರು.
ಈ ವೇಳೆ ಉಪಸ್ಥಿತರಿದ್ದ ನಾಡಿನ ಹಿರಿಯ ವಿದ್ವಾಂಸರೂ, ಭಾಷಾವಿಜ್ಞಾನಿಗಳೂ ಆದ ಡಾ.ಪ್ರಧಾನ್ ಗುರುದತ್ತ ಕೃತಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಯಶಸ್ಸು ದೊರೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಭೈರಪ್ಪ, ಶ್ರೀಮತಿ ಪ್ರಧಾನ್ ಮತ್ತು ಧಾತ್ರಿ ಪ್ರಕಾಶನದ ಮುಖ್ಯಸ್ಥರಾದ ಶ್ರೀಮತಿ ಬೃಂದಾ ಉಮೇಶ್ ಸಹ ಉಪಸ್ಥಿತರಿದ್ದರು.