ರಘುಲಾಲ್ ಸೇರಿ ಮೈಸೂರಿನ 30 ಔಷಧಿ ಅಂಗಡಿಯಲ್ಲಿ ಹೋಂ ಐಸೋಲೇಷನ್ ಕಿಟ್ ಲಭ್ಯ
ಮೈಸೂರು

ರಘುಲಾಲ್ ಸೇರಿ ಮೈಸೂರಿನ 30 ಔಷಧಿ ಅಂಗಡಿಯಲ್ಲಿ ಹೋಂ ಐಸೋಲೇಷನ್ ಕಿಟ್ ಲಭ್ಯ

July 19, 2020

ಮೈಸೂರು,ಜು.18(ಆರ್‍ಕೆ)-ಮನೆಯಲ್ಲೇ ಪ್ರತ್ಯೇಕವಾಗಿರ ಬಯಸುವವರಿಗಾಗಿ ಮೈಸೂರಿನ 30 ಮೆಡಿಕಲ್ ಸ್ಟೋರ್ ಗಳಲ್ಲಿ ಹೋಂ ಐಸೋಲೇಷನ್ ಕೋವಿಡ್-19 ಕಿಟ್ ಗಳು ಲಭ್ಯವಾಗಲಿದೆ ಎಂದು ಔಷಧ ಉಪನಿಯಂತ್ರಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಿಟ್‍ನಲ್ಲಿ ಪಲ್ಸ್ ಆಕ್ಸಿಮೀಟರ್, 1 ಡಿಜಿಟಲ್ ಥರ್ಮೋ ಮೀಟರ್, 1 ಫೇಸ್ ಶೀಲ್ಡ್, 14 ಎನ್95 ಮಾಸ್ಕ್, 14 ಜೊತೆ ಹ್ಯಾಂಡ್ ಗ್ಲೌಸ್ ಹಾಗೂ 200 ಎಂಎಲ್ ಹ್ಯಾಂಡ್ ಸ್ಯಾನಿಟೈಸರ್ ಒಳಗೊಂಡಿರುತ್ತದೆ. ಯಾವ ಕಂಪನಿಯ ಉಪಕರಣಗಳು ಹಾಗೂ ಎಷ್ಟು ಪ್ರಮಾಣದಲ್ಲಿ ಒದಗಿ ಸಲಾಗುವುದೋ ಅದಕ್ಕನುಗುಣವಾಗಿ ಸ್ಪರ್ಧಾತ್ಮಕ ಬೆಲೆ ಯಲ್ಲಿ ಹೋಂ ಐಸೋಲೇಷನ್ ಕೋವಿಡ್ ಕಿಟ್‍ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕೆಂದು ಔಷಧಿ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಯ್ಯಾಜಿರಾವ್ ರಸ್ತೆಯ ರಘುಲಾಲ್ ಮೆಡಿಕಲ್ಸ್, ಶಾಂತಿ ಮೆಡಿಕಲ್ಸ್, ಎಂ.ಜಿ. ರಸ್ತೆಯ ಔಷಧ ಕೆಮಿಸ್ಟ್ಸ್, ಸರಸ್ವತಿಪುರಂನ ಮುರುಗನ್, ಸೀತಾರಾಂ ಮೆಡಿಕಲ್ಸ್, ಗೋಕುಲಂನ ಈಶ್ವರ್ ಮೆಡಿಕಲ್ಸ್, ಹೆಬ್ಬಾಳ್‍ನ ಶ್ರೇಯಸ್ ಮೆಡಿಕಲ್ಸ್, ಕಾಮಾಕ್ಷಿ ಆಸ್ಪತ್ರೆ ಬಳಿಯ ಆಕ್ಸ್‍ಫರ್ಡ್ ಫಾರ್ಮಾ, ಸಿದ್ಧಾರ್ಥನಗರದ ನ್ಯೂ ಆಕ್ಸ್‍ಫರ್ಡ್ ಮೆಡಿಕಲ್ಸ್, ಜಯನಗರದ ಲಕ್ಷ್ಮಿದೇವಿ ಮೆಡಿಕಲ್ಸ್, ರಾಮಕೃಷ್ಣನಗರದ ಚಂದನ ಮೆಡಿಕಲ್ಸ್, ಮೇಟಗಳ್ಳಿಯ ಸೌಮ್ಯ ಮೆಡಿಕಲ್ಸ್, ಕ್ಯಾತಮಾರನಹಳ್ಳಿಯ ಎ ಟು ಝಡ್ ಮೆಡಿಕಲ್ಸ್, ಉದಯಗಿರಿಯ ಮನ್ಸೂರ್ ಮೆಡಿಕಲ್ಸ್, ರಾಮಾನುಜ ರಸ್ತೆಯ ಜೈ ಹನುಮಾನ್ ಮೆಡಿಕಲ್ಸ್, ಕುವೆಂಪುನಗರದ ಕುಮಾರ್ ಮೆಡಿಕಲ್ಸ್, ನಜರ್‍ಬಾದ್‍ನ ಸಿದ್ಧಿವಿನಾಯಕ ಮೆಡಿಕಲ್ಸ್, ಶಾಂತಿ ನಗರದ ವಿಶ್ವನಾಥ ಮೆಡಿಕಲ್ಸ್, ಟಿ.ಕೆ. ಲೇಔಟ್‍ನ ನಮ್ರತಾ ಮೆಡಿಕಲ್ಸ್, ವಿಜಯನಗರ 3ನೇ ಹಂತದ ವಿನಯ್ ಮೆಡಿಕಲ್ಸ್, ಜೆಪಿನಗರದ ಶಿವಾನಂದ ಮೆಡಿಕಲ್ಸ್, ಸಿದ್ಧಾರ್ಥನಗರದ ನವ್ಯ ಮೆಡಿಕಲ್ಸ್, ಅಜೀಜ್ ಸೇಠ್ ನಗರದ ತಾಜ್ ಡ್ರಗ್‍ಹೌಸ್, ವಿದ್ಯಾರಣ್ಯಪುರಂನ ರವಿ ಮೆಡಿಕಲ್ಸ್, ಶಾಂಭವಿ ಮೆಡಿಕಲ್ಸ್, ಧನ್ವಂತರಿ ರಸ್ತೆಯ ಪಾರ್ವತಿ ಮೆಡಿಕಲ್ಸ್, ಎಸ್ ಅಂಡ್ ವಿ ಏಜೆನ್ಸೀಸ್, ಶ್ರೀರಾಂಪುರ ಎರಡನೇ ಹಂತದ ಮನು ಮೆಡಿಕಲ್ಸ್, ಜೆ.ಪಿ.ನಗರದ ಫಾರ್ಮಾ ಬಸ್ ಹಾಗೂ ವಿಜಯನಗರ 1ನೇ ಹಂತದ ರಘುಲಾಲ್ ಹೆಲ್ತ್ ಮಾರ್ಟ್‍ನಲ್ಲಿ ಹೋಂ ಐಸೋಲೇಷನ್ ಕೋವಿಡ್ ಕಿಟ್‍ಗಳು ದೊರೆಯುತ್ತವೆ ಎಂದು ಅವರು ತಿಳಿಸಿದ್ದಾರೆ.

 

Translate »