ಮೈಸೂರು, ಜು.18(ಪಿಎಂ)- ಭೂ ಸುಧಾರಣಾ ತಿದ್ದು ಪಡಿ ಕಾಯ್ದೆಯ ಸುಗ್ರೀ ವಾಜ್ಞೆಗೆ ರಾಜ್ಯ ಪಾಲರ ಅಂಗೀಕಾರ ದೊರಕಿರಬಹುದು. ಆದರೆ ಈ ಕಾಯ್ದೆ ಹಿಂಪಡೆಯುವವರೆಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರಂತರ ಹೋರಾಟ ನಡೆಸ ಲಿವೆ ಎಂದು ಸಂಘದ ಅಧ್ಯಕ್ಷ ಬಡಗಲ ಪುರ ನಾಗೇಂದ್ರ ಮೈಸೂರಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕಾಯ್ದೆಗೆ ತಿದ್ದು ಪಡಿ ತರುವ ಮೂಲಕ ರೈತರ ಕೊರಳಿಗೆ ನೇಣು ಕುಣಿಕೆ ಹಾಕಿದೆ. ಆ ಕುಣಿಕೆಯು ಮುಂದಿನ ದಿನಗಳಲ್ಲಿ ಸಿಎಂ ಕುರ್ಚಿಗೆ ಮಾತ್ರ ವಲ್ಲದೆ ಬಿಜೆಪಿ ಸರ್ಕಾರಕ್ಕೂ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯಪಾಲರು ಅಂಕಿತ ಹಾಕಿದ 6 ತಿಂಗ ಳೊಳಗೆ ಶಾಸನ ಸಭೆಯಲ್ಲಿ ಚರ್ಚೆಗೆ ಬಂದು ಅಂಗೀಕಾರಗೊಳ್ಳಬೇಕಿದೆ ಎಂದರು.
ತಿದ್ದುಪಡಿ ಹಿಂದೆ ದೊಡ್ಡ ಭ್ರಷ್ಟಾಚಾರ ವಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ. ತಿದ್ದುಪಡಿ ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳ ಮುಖಂಡರು ಹೋರಾಟಕ್ಕಿಳಿಯ ಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಾದ ನಾಯಕರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಅವರ ಪುತ್ರರು ಮಾತನಾಡಿದ್ದರೆ ಸ್ವಾಗತ ಎಂದು ಪ್ರತಿಕ್ರಿಯಿಸಿದರು.
ನವಲಗುಂದ-ನರಗುಂದ ರೈತ ಹೋರಾಟ ದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ರೈತರ ಸ್ಮರಣಾರ್ಥ ಪ್ರತಿ ಜು.21ರಂದು `ಹುತಾತ್ಮ ದಿನ’ ಆಚರಿಸಲಾಗುತ್ತಿದೆ. ಈ ಬಾರಿ ಅದೇ ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ದಿನ ವಾಗಿ ಆಚರಿಸಲು ಉದ್ದೇಶಿಸಲಾಗಿತ್ತು. ಆದರೆ ಬೆಂಗಳೂರು ಲಾಕ್‍ಡೌನ್ ಆಗಿರು ವುದರಿಂದ ಜಿಲ್ಲೆಯಲ್ಲಿಯೇ ಅನುಕೂಲಕ್ಕೆ ತಕ್ಕಂತೆ ರೈತರು ಹೋರಾಟ ನಡೆಸಲಿದ್ದಾರೆ. ಜತೆಗೆ ವಿಚಾರಗೋಷ್ಠಿ, ಸಂವಾದ ಏರ್ಪ ಡಿಸಲಾಗುವುದು ಎಂದರು.
ಪ್ರಧಾನಿ ಫಸಲ್ ವಿಮಾ ಯೋಜನೆ ಕೇಳಲು ಚೆನ್ನಾಗಿದೆ. ವಾಸ್ತವದಲ್ಲಿ ಕಂಪನಿ ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 45 ಲಕ್ಷ ರೈತರಿಗೆ ಈ ಯೋಜನೆಯಡಿ ಬೆಳೆ ಪರಿಹಾರವನ್ನೇ ಪಾವತಿಸಿಲ್ಲ. ಚಾಮ ರಾಜನಗರದಲ್ಲಿ 17 ಸಾವಿರ ರೈತರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಅವೈಜ್ಞಾನಿಕ ವಾಗಿ ಹಲವು ಬೆಳೆಗಳನ್ನು ವಿಮೆ ವ್ಯಾಪ್ತಿ ಯಿಂದ ಕೈಬಿಡಲಾಗಿದೆ ಎಂದು ಟೀಕಿಸಿ ದರು. ಸಂಘದ ಮುಖಂಡರಾದ ಚಂದ್ರೇ ಗೌಡ, ಮಂಡಕಳ್ಳಿ ಮಹೇಶ್, ಪಿ.ಮರಂ ಕಯ್ಯ, ಸ್ವರಾಜ್ ಇಂಡಿಯಾ ಪಕ್ಷದ ಎನ್. ಪುನೀತ್ ಸುದ್ದಿಗೋಷ್ಠಿಯಲ್ಲಿದ್ದರು.