ಡಾ. ಸಿದ್ದಲಿಂಗಯ್ಯನವರ ಪ್ರತಿಷ್ಠಾನ, ಪೀಠ ಸ್ಥಾಪಿಸಿ ಚಿಂತನೆ ಕಾರ್ಯಗತಗೊಳಿಸಬೇಕು
ಮೈಸೂರು

ಡಾ. ಸಿದ್ದಲಿಂಗಯ್ಯನವರ ಪ್ರತಿಷ್ಠಾನ, ಪೀಠ ಸ್ಥಾಪಿಸಿ ಚಿಂತನೆ ಕಾರ್ಯಗತಗೊಳಿಸಬೇಕು

September 3, 2021

ಮೈಸೂರು,ಸೆ.2(ಪಿಎಂ)-ದಲಿತ ಕ್ರಾಂತಿ ಕಾರಿ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಕೇವಲ ಪ್ರತಿಮೆಗೆ ಸೀಮಿತಗೊಳಿಸದೇ ಅವರ ಹೆಸರಿನಲ್ಲಿ ಪ್ರತಿಷ್ಠಾನ, ಪೀಠ ಸ್ಥಾಪಿಸಿ, ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದು ಸಂಸದ ವಿ.ಶ್ರೀನಿ ವಾಸ ಪ್ರಸಾದ್ ಸಲಹೆ ನೀಡಿದರು.
ಮೈಸೂರು ವಿವಿ ಡಾ.ಬಿ.ಆರ್.ಅಂಬೇ ಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಿಂದ ಮಾನಸಗಂಗೋತ್ರಿಯ ಕೇಂದ್ರದ `ವಿಶ್ವಜ್ಞಾನಿ’ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಹೋರಾ ಟದ ಸಾಗರಕ್ಕೆ ಸಾವಿಲ್ಲದ ನದಿ ; ಡಾ. ಸಿದ್ದಲಿಂಗಯ್ಯ’ ವಿಚಾರಗೋಷ್ಠಿ ಉದ್ಘಾ ಟಿಸಿ ಅವರು ಮಾತನಾಡಿದರು.

ಡಾ.ಸಿದ್ದಲಿಂಗಯ್ಯ ನನಗಿಂತ ಚಿಕ್ಕವ ರಾದರೂ ಅವರು ನನಗೆ ಆದರ್ಶ. ಅವರ ಪ್ರತಿಮೆ ಸ್ಥಾಪಿಸಿ ವೈಭವೀಕರಿಸುವ ಬದಲು ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಪೀಠ ಅಥವಾ ಪ್ರತಿಷ್ಠಾನ ಸ್ಥಾಪಿ ಸುವುದು ಸೂಕ್ತ ಎಂದರು.

ಸಿದ್ದಲಿಂಗಯ್ಯ ಇಷ್ಟು ಬೇಗನೆ ನಮ್ಮಿಂದ ದೂರವಾಗುತ್ತಾರೆಂದು ಭಾವಿಸಿರಲಿಲ್ಲ. ಅವರು ಭೌತಿಕವಾಗಿ ದೂರವಾದರೂ ನಮ್ಮ ಸ್ಮøತಿಪಟದಲ್ಲಿದ್ದಾರೆ. ಸಿದ್ದಲಿಂಗಯ್ಯ ದಲಿತ ಕ್ರಾಂತಿಕಾರಿ ಕವಿಗಳಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.

ಸಂವಿಧಾನಾತ್ಮಕವಾಗಿ ನಿಷೇಧವಾಗಿ ದ್ದರೂ ಅಸ್ಪøಶ್ಯತೆ ಆಚರಣೆ ಚಾಲ್ತಿಯಲ್ಲಿದ್ದ ಹಿನ್ನೆಲೆಯಲ್ಲಿ ಅದರ ವಿರುದ್ಧ ಹೋರಾಟ ಮೊದಲಿಗೆ ಮಹಾರಾಷ್ಟ್ರದಲ್ಲಿ ಪ್ರಾರಂಭ ವಾಯಿತು. ಅಸ್ಪøಶ್ಯತೆಯ ನರಕ ಯಾತನೆ ಅನುಭವಿಸಿ ದಲಿತ ಸಾಹಿತ್ಯದಲ್ಲಿ ಕೃಷಿ ಮಾಡಿದವರು ಡಾ.ಸಿದ್ದಲಿಂಗಯ್ಯ. ಅವರ ಸಾಹಿತ್ಯವು ಅಸ್ಪøಶ್ಯತೆ ಹಿನ್ನೆಲೆಯಲ್ಲಿ ಮೂಡಿ ಬಂದಿದೆ. ದಲಿತ ಸಾಹಿತ್ಯದ ಬಗ್ಗೆ ಕೇವಲ ಬರೆಯುವುದು ಬೇರೆ. ಆದರೆ ಅಸ್ಪøಶ್ಯತೆಯ ನೋವು ಅನುಭವಿಸಿ ಬರೆಯುವುದರ ಪರಿಣಾಮವೇ ಬೇರೆ. ಡಾ.ಸಿದ್ದಲಿಂಗಯ್ಯ ಅವರ ಮಾತು, ಚಿಂತನೆ ಮತ್ತು ಬರ ವಣಿಗೆಯಲ್ಲಿ ಅಸ್ಪøಶ್ಯತೆಯ ನೋವು ಕಾಣ ಬಹುದು. ಕನ್ನಡದಲ್ಲಿ ಅಸ್ಪøಶ್ಯತೆ ಬಗ್ಗೆ ಮೊಟ್ಟ ಮೊದಲು ಬರೆದವರು ಡಾ.ಶಿವ ರಾಮ ಕಾರಂತರು. ಅವರು ತಮ್ಮ `ಚೋಮನ ದುಡಿ’ ಕಾದಂಬರಿ ಮೂಲಕ ಅಸ್ಪøಶ್ಯತೆಯ ನೋವು ಅನಾವರಣಗೊಳಿಸಿ ದರು ಎಂದು ಗಮನ ಸೆಳೆದರು.

ಅಶೋಕಪುರಂನಲ್ಲಿ ನಮ್ಮದೇ ಸಾಮ್ರಾಜ್ಯ ಸೃಷ್ಟಿಸಿಕೊಂಡು ಅಸ್ಪøಶ್ಯತೆಯ ನೋವಿಲ್ಲ ದಂತೆ ಬೆಳೆದವರು ನಾವು. ಹೀಗಾಗಿ ಸಿದ್ದ ಲಿಂಗಯ್ಯ ಆಗಾಗ್ಗೆ ನನಗೆ `ಸರ್, ನಿಮ್ಮ ಮೈಸೂರಿನಂತೆ ನಮ್ಮಲ್ಲಿ ಯಾವುದೇ ಅಶೋಕಪುರಂ ಇಲ್ಲ’ ಎಂದು ಹೇಳುತ್ತಿ ದ್ದರು. ಅವರು ನನಗೆ 1973ರಲ್ಲಿ ಪರಿಚಿತ ರಾದರು. ಆಗ ಬಸವಲಿಂಗಪ್ಪನವರ ಬೂಸಾ ಚಳವಳಿಯಲ್ಲಿ ಹೋರಾಟಕ್ಕೆ ಧುಮುಕಿದ್ದೆ. ಬಸವಲಿಂಗಪ್ಪನವರ ಈ ಚಳವಳಿಯು ನನ್ನಂತವರಿಗೆ ಸ್ಫೂರ್ತಿಯಾಯಿತು. ಅಂದು ದಲಿತ ಸಂಘರ್ಷ ಸಮಿತಿಗೆ ಸೇರಿದ್ದೆನಾದರೂ ರಾಜಕೀಯ ಪ್ರವೇಶಿಸಬೇಕಾದ ಹಿನ್ನೆಲೆ ಯಲ್ಲಿ ಸಂಘಟನೆಯಿಂದ ಹೊರ ಬಂದೆ. ಆದರೂ ಹೊರಗೆ ಇದ್ದು ಎಲ್ಲಾ ಸಹಕಾರ ನೀಡುತ್ತಿದ್ದೆ ಎಂದು ಹಳೇ ನೆನಪಿಗೆ ಜಾರಿ ದರು. ಡಾ.ಸಿದ್ದಲಿಂಗಯ್ಯ ಅವರ `ಚೋಮನ ಮಕ್ಕಳು ನಾವುಗಳು’ ಕವಿತೆಯನ್ನು ಅವರ ಮೊಮ್ಮಗಳಾದ ವಿದಿಷಾ ಸಾದರಪಡಿಸಿ ದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಡಾ.ಸಿದ್ದಲಿಂಗಯ್ಯ ಪುತ್ರಿ ಡಾ.ಮಾನಸ ಸಿದ್ದಲಿಂಗಯ್ಯ ಮತ್ತಿತರರು ಹಾಜರಿದ್ದರು.

Translate »