ಮುಡಾದಿಂದ ಶೀಘ್ರ 288 ಸಿಎ ನಿವೇಶನ ಹಂಚಿಕೆ
ಮೈಸೂರು

ಮುಡಾದಿಂದ ಶೀಘ್ರ 288 ಸಿಎ ನಿವೇಶನ ಹಂಚಿಕೆ

September 3, 2021

ಮೈಸೂರು, ಸೆ.2(ಆರ್‍ಕೆ)-ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 288 ನಾಗರಿಕ ಸೌಲಭ್ಯ (ಸಿಎ)ನಿವೇಶನಗಳನ್ನು ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ಶೀಘ್ರ ಅರ್ಜಿ ಆಹ್ವಾನಿಸಲಿದೆ.

ಹಂಚಿಕೆಗೆ ಸಿದ್ಧವಾಗಿರುವ ನಿವೇ ಶನಗಳ ಅಂತಿಮ ಪಟ್ಟಿ ತಯಾ ರಿಸಿರುವ ಪ್ರಾಧಿಕಾರದ ನಗರ ಯೋಜನಾ ಶಾಖೆಯು ಅಧಿ ಸೂಚನೆಗಾಗಿ ಕಡತವನ್ನು ಆಯು ಕ್ತರ ಕಚೇರಿಗೆ ರವಾನಿಸಿದೆ. ಶ್ರೀರಾಂಪುರ, ಉದ್ಬೂರು, ವಾಜ ಮಂಗಲ, ವಸಂತನಗರ, ವಿಜಯನಗರ 2ನೇ ಹಂತ, 3 ಮತ್ತು 4ನೇ ಹಂತ, ಯಾಂದಳ್ಳಿ, ಯರಗನಹಳ್ಳಿ, ಆಲನಹಳ್ಳಿ, ಅನಗಳ್ಳಿ, ಅಯ್ಯಾಜಯ್ಯನ ಹುಂಡಿ, ಬಸವನಹಳ್ಳಿ, ಬೆಳವಾಡಿ, ಬೆಲವತ್ತ, ಭುಗತಗಳ್ಳಿ, ಬಂಡಿಪಾಳ್ಯ, ಬೋಗಾದಿ, ಚಾಮಲಾಪುರ, ಚಿಕ್ಕಳ್ಳಿ, ದಟ್ಟಗಳ್ಳಿ, ದೇವನೂರು 1ನೇ ಹಂತ, ದಡದಹಳ್ಳಿ, ಗೊರೂರು, ಹಂಚ್ಯಾ, ಹುಲಿಕೆರೆ, ಹಾಲಾಳು, ಹಡಜನ, ಇಲವಾಲ, ಜೆ.ಪಿ.ನಗರ, ಕೇರ್ಗಳ್ಳಿ, ಕೂರ್ಗಳ್ಳಿ, ಕುಪ್ಪ ಲೂರು, ಲಲಿತಾದ್ರಿಪುರ, ಲಿಂಗಾಂಬುಧಿ, ಮಾದಗಳ್ಳಿ, ಮಂಡಕಳ್ಳಿ, ಮೇಟಗಳ್ಳಿ, ಮರಟಿಕ್ಯಾತನಹಳ್ಳಿ, ನಾಚನಹಳ್ಳಿ, ನಾಡನಹಳ್ಳಿ, ನಗರ್ತಹಳ್ಳಿ, ಸಾತಗಳ್ಳಿ, ಶ್ಯಾದನಹಳ್ಳಿ, ಯರಗನಹಳ್ಳಿ ಸೇರಿದಂತೆ ಮುಡಾ ದಿಂದ ನಿರ್ಮಿಸಿರುವ ಪ್ರಾಧಿಕಾರದಿಂದ ಅನು ಮೋದನೆ ಪಡೆದು ಗೃಹ ನಿರ್ಮಾಣ ಸಹಕಾರ ಸಂಘಗಳು ಹಾಗೂ ಖಾಸಗಿ ಯವರು ನಿರ್ಮಿಸಿರುವ ವಸತಿ ಬಡಾವಣೆಗಳಲ್ಲಿ ಮುಡಾಗೆ ಹಸ್ತಾಂತರಿಸಿ ರುವ ವಿವಿಧ ಅಳತೆಯ ಸಿಎ ನಿವೇಶನಗಳನ್ನು ನಿಯಮಾನುಸಾರ ಅರ್ಹ ಸಂಘ-ಸಂಸ್ಥೆಗಳಿಗೆ ಹಂಚಿಕೆ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ.

ಇದೇ ಪ್ರಥಮ ಬಾರಿ ಅತೀ ಹೆಚ್ಚಿನ ಸಂಖ್ಯೆಯ ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿರುವ `ಮುಡಾ’ಗೆ ನೂರಾರು ಕೋಟಿ ರೂ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗಲಿದೆ. ಸಮುದಾಯ ಭವನ, ಕಲ್ಯಾಣ ಮಂಟಪ, ಆರೋಗ್ಯ ಕೇಂದ್ರ, ಶಾಲಾ-ಕಾಲೇಜು, ಆಧ್ಯಾತ್ಮಿಕ, ಯೋಗ, ಧ್ಯಾನ ಕೇಂದ್ರ, ವಿದ್ಯುಚ್ಛಕ್ತಿ ಚಾಲಿತ ವಾಹನ ಚಾರ್ಜಿಂಗ್ ಘಟಕ, ಅಂಗನವಾಡಿ ಕೇಂದ್ರ, ಹಾಪ್‍ಕಾಮ್ಸ್, ಹಾಲಿನ ಕೇಂದ್ರ, ವ್ಯಾಯಾಮ ಶಾಲೆ, ಗ್ರಂಥಾಲಯ, ಸಾಂಸ್ಕøತಿಕ ಕೇಂದ್ರ, ನರ್ಸಿಂಗ್ ಹೋಂ, ವಿದ್ಯಾರ್ಥಿ ನಿಲಯ, ಕೈಗಾರಿಕಾ ತರಬೇತಿ ಕೇಂದ್ರ, ಬಸ್ ನಿಲ್ದಾಣ, ವೃದ್ಧರ ಪೋಷಣಾ ಕೇಂದ್ರ, ನ್ಯಾಯಬೆಲೆ ಅಂಗಡಿ ಸೇರಿದಂತೆ ವಿವಿಧ ನಾಗರಿಕ ಸೇವೆ ಉದ್ದೇಶಗಳಿಗಾಗಿ ಈ ಬಾರಿ 288 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

ನಿಬಂಧನೆಗಳು: ಸಂಘ-ಸಂಸ್ಥೆಗಳು ಬಯಸುವ ನಿವೇಶನದ ಬಳಕೆ ಉದ್ದೇಶವು ಸಂಘದ ಬೈಲಾದಲ್ಲಿ ನಮೂದಾಗಿರಬೇಕು. ಅರ್ಜಿ ಸಲ್ಲಿಸುವಾಗಲೇ ನೋಂದಣಿ ಶುಲ್ಕ, 500 ರೂ. ಅರ್ಜಿ ಶುಲ್ಕ ಪ್ರಾರಂಭಿಕ ಠೇವಣಿ ಪಾವತಿಸಬೇಕು. ಸಂಸ್ಥೆಯ 3 ವರ್ಷಗಳ ವಾರ್ಷಿಕ ವರದಿ, ಲೆಕ್ಕ ಪರಿಶೋಧಕರ ವರದಿ ಸಲ್ಲಿಸಬೇಕು.

ಸಿಎ ನಿವೇಶನಗಳ ಹಂಚಿಕೆ ಸಂಬಂಧ `ಮುಡಾ’ ಮೂರ್ನಾಲ್ಕು ದಿನದಲ್ಲಿ ಅಧಿಸೂಚನೆ ಹೊರಡಿಸಲಿದ್ದು, ನಿವೇಶನಗಳ ವಿಸ್ತೀರ್ಣ, ಸ್ಥಳ, ಉದ್ದೇಶ, ದರ, ಕಂತುಗಳಲ್ಲಿ ಪಾವತಿಸಬೇಕಾದ ಮೊತ್ತ ಇತ್ಯಾದಿ ಮಾಹಿತಿಗಳನ್ನು ಸುದ್ದಿ ಮಾಧ್ಯಮ ದಲ್ಲಿ ಜಾಹೀರಾತು ಮೂಲಕ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Translate »