ಹಳೇ ಉಂಡವಾಡಿ ಯೋಜನೆಯಡಿ ಮೈಸೂರು ಹೊಸ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ
ಮೈಸೂರು

ಹಳೇ ಉಂಡವಾಡಿ ಯೋಜನೆಯಡಿ ಮೈಸೂರು ಹೊಸ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ

March 13, 2020

ಬೆಂಗಳೂರು,ಮಾ.12-ಹಳೇ ಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಮೈಸೂರಿನ ಹೊಸ ಬಡಾವಣೆಗಳು ಸೇರಿ ದಂತೆ 92 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ 1ನೇ ಹಂತದ ಕಾಮಗಾರಿಯನ್ನು 350 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು 2009 ರಲ್ಲೇ ಸರ್ಕಾರವು ಆಡಳಿತಾತ್ಮಕ ಅನು ಮೋದನೆ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಿಧಾನ ಪರಿ ಷತ್‍ನಲ್ಲಿ ತಿಳಿಸಿದರು. ಈ ಯೋಜನೆಯಲ್ಲಿ ಕೇವಲ ಸಗಟು ಪ್ರಮಾಣದಲ್ಲಿ ನೀರನ್ನು ಸರಬರಾಜು ಮಾಡಲು ಯೋಜಿಸಲಾಗಿದೆ. ಈ ನೀರನ್ನು ಮೈಸೂರು ನಗರದ ಹೊಸ ಬಡಾವಣೆಗಳಿಗೆ ಒದಗಿಸಲು, ಸಮಗ್ರ ಸಂಗ್ರಹ ಹಾಗೂ ವಿತರಣಾ ಜಾಲದ 2ನೇ ಹಂತದ ಸಮಗ್ರ ಯೋಜನೆಯು ಸಹ ಕರ್ನಾ ಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಪರಿಶೀಲನೆಯಲ್ಲಿದೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿ ದರು. ಹಳೇ ಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿಯಿಂದ ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆ ಯನ್ನು ಕೂಡಲೇ ಕೈಗೆತ್ತಿಕೊಂಡು ಕುಡಿ ಯುವ ನೀರಿನ ಅಭಾವ ಎದುರಿಸುತ್ತಿರುವ ಮೈಸೂರು ನಗರದ ಹೊಸ ಬಡಾವಣೆ ಗಳಿಗೆ ನೀರು ಸರಬರಾಜು ಮಾಡುವ ಬಗ್ಗೆ ತ್ವರಿತ ವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸಂದೇಶ್ ನಾಗರಾಜ್ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಸಗಟು ಪ್ರಮಾಣದಲ್ಲಿ ನೀರು ಸರಬರಾಜು ಮಾಡುವ ಮೊದಲನೇ ಹಂತದ ಕಾಮಗಾರಿಗೆ ಅವಶ್ಯಕವಿರುವ 30 ಎಕರೆ 31 ಗುಂಟೆ ಸರ್ಕಾರಿ ಜಮೀನು ಇನ್ನೂ ಕರ್ನಾಟಕ ನಗರ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಗೆ ಹಸ್ತಾಂ ತರವಾಗಬೇಕಾದೆ. ಇದಲ್ಲದೆ ಯೋಜನೆಗೆ ಅಗತ್ಯವಾಗಿರುವ ಇನ್ನೂ 92 ಎಕರೆ ಖಾಸಗಿ ಜಮೀನನ್ನು ನೇರ ಖರೀದಿ ಮಾಡಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯು ಚಾಲನೆ ಯಲ್ಲಿದೆ ಎಂದು ಸಚಿವರು ವಿವರಿಸಿದರು.

ಅವಶ್ಯವಿರುವ ಜಮೀನನ್ನು ಮಂಡಳಿಗೆ ಪೂರ್ತಿಯಾಗಿ ಹಸ್ತಾಂತರಿಸಿದ ನಂತರ 3 ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಯೋಜಿಸಲಾ ಗಿದೆ ಎಂದು ಸಚಿವರು ಸಂದೇಶ್ ಅವರ ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.

Translate »