ಮೂಗೂರಿನಲ್ಲಿ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ
ಮೈಸೂರು

ಮೂಗೂರಿನಲ್ಲಿ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ

July 11, 2021

ಮೂಗೂರು, ಜು. 10 (ಎಂಬಿಆರ್)- ರೈತರು ಕೃಷಿ ಇಲಾಖೆ ಮಾಹಿತಿ ಆಧಾರಿತ ಚಟುವಟಿಕೆಯಲ್ಲಿ ತೊಡಗುವ ಮೂಲಕ ತಮ್ಮ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು.

ಮೂಗೂರಲ್ಲಿ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಕೃಷಿ ಉತ್ಪನ್ನದ ಜೊತೆಗೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇದರ ನಡುವೆಯೂ ಹಲವು ಸವಾಲುಗಳನ್ನು ಎದುರಿಸಿ ಕೃಷಿಯಲ್ಲಿ ತೊಡಗುವುದು ಅನಿವಾರ್ಯವಾಗಿದೆ. ಸರ್ಕಾರದ ಕೃಷಿ ಯೋಜನೆ ಸೌಲಭ್ಯ ಸದ್ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ಬಲವನ್ನು ವೃದ್ಧಿಸಿಕೊಳ್ಳು ವಂತೆ ತಿಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್ ಮೂರ್ತಿ ಮಾತನಾಡಿ, ಸರ್ಕಾರದ ಯೋಜನೆಗಳು ಪ್ರಚಾರಕ್ಕೆ ಮಾತ್ರ ಸೀಮಿತ ವಾಗಿದ್ದು, ಕೃಷಿಕರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಕೃಷಿ ಉತ್ತೇಜನಕ್ಕೆ ನೀಡುವ ಘೋಷಣೆಗಳನ್ನು ನೋಡಿ ರೈತ ತೃಪ್ತಿಪಟ್ಟುಕೊಂಡು ಸುಮ್ಮನಾಗಬೇಕಿದೆ. ರೈತರ ಸಮಸ್ಯೆಗೆ ಸ್ಪಂದನೆ ಇಲ್ಲದೇ ಇವರ ನೋವನ್ನು ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.

ಮುಂಗಾರು ಪ್ರಾರಂಭವಾಗುವ ಮುನ್ನ ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ಗುಣಮಟ್ಟದ ಭತ್ತದ ಬಿತ್ತನೆ ಬೀಜ ಪೂರೈಸಿ ಮಾಹಿತಿಯ ಕೊರತೆ ಯಿಂದ ಹೊಸ ತಳಿ ಬಿತ್ತನೆ ಬೀಜದಿಂದಾಗುವ ನಷ್ಟಕ್ಕೆ ಮುಕ್ತಿ ನೀಡಿ ಎಂದು ರೈತ ಸಂಘದ ಹೋಬಳಿ ಅಧ್ಯಕ್ಷೆ ಶಾಂತಾ ಆಗ್ರಹಿಸಿದರು.

ಗ್ರಾ.ಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಮೋಹನ್‍ಕುಮಾರ್‍ಗೌಡ, ಜಗದೀಶ್ ಮೂರ್ತಿ, ತಾ.ಪಂ ಸದಸ್ಯ ಚಂದ್ರಶೇಖರ, ಕೃಷಿ ಸಹಾಯಕ ನಿರ್ದೇಶಕ ಜಯ ರಾಮಯ್ಯ, ಮುಖಂಡರಾದ ಶಿವಮೂರ್ತಿ, ಎಂ. ಸಿದ್ದ ರಾಜು, ಎಂಎಂ ಜಗದೀಶ್, ಕುಮಾರಸ್ವಾಮಿ, ನವೀನ್, ಕಾರ್ ರೇವಣ್ಣ, ಕುಮಾರ್, ಗ್ರಾಪಂ ಸದಸ್ಯ ಲೋಕೇಶ್, ಮಹೇಶ್, ಪುಟ್ಟ ಮಾದಯ್ಯ, ನಿಂಗರಾಜು, ನಾಗೇಂದ್ರ, ರೈತ ಸಂಪರ್ಕ ಕೇಂದ್ರ ಸಿಬ್ಬಂದಿ ವರ್ಗ ಹಾಜರಿದ್ದರು.

Translate »