ಸಮಗ್ರ ಕೃಷಿ ಮಾಹಿತಿ ಪ್ರಚಾರ ರಥಕ್ಕೆ ಚಾಲನೆ
ಮೈಸೂರು

ಸಮಗ್ರ ಕೃಷಿ ಮಾಹಿತಿ ಪ್ರಚಾರ ರಥಕ್ಕೆ ಚಾಲನೆ

July 11, 2021

ಹಿರೀಕ್ಯಾತನಹಳ್ಳಿ, ಜು.10(ಸ್ವಾಮಿಗೌಡ)- ಸರ್ಕಾರ ಕೃಷಿ ಅಭಿಯಾನದ ಮೂಲಕ ರೈತರಿಗೆ ವಿವಿಧ ಇಲಾಖೆಗಳಿಂದÀ ಸಿಗುವ ಸವÀಲತ್ತು ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ ಎಂದು ತಾಪಂ ನಿಕಟಪೂರ್ವ ಸದಸ್ಯ ಗಣಪತಿ ಇಂದೂಲ್ಕರ್ ತಿಳಿಸಿದರು.
ಇಲ್ಲಿನ ಗಾವಡಗೆರೆಯಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಸಮಗ್ರ ಕೃಷಿ ಮಾಹಿತಿ ಒಳಗೊಂಡ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲಾಖೆ ನೀಡುವ ಸವಲತ್ತುಗಳ ಸದುಪಯೋಗ ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದ ಅವರು, ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು, ಲಭ್ಯವಿರುವ ಕೃಷಿ ಜಮೀನಿನಲ್ಲಿ ಗರಿಷ್ಠ ಆಹಾರ ಉತ್ಪಾದನೆ ಮಾಡಲು, ವಿವಿಧ ಇಲಾಖೆಗಳನ್ನು ಒಳಗೊಂಡಂತೆ ರೈತರಿಗೆ ಕೃಷಿ ಜೊತೆಗೆ ಉಪ ಕಸುಬುಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರು ಇದರ ಮಾಹಿತಿ ಪಡೆದು ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಗಾವಡಗೆರೆ ಕೃಷಿ ಅಧಿಕಾರಿ ಡಿ.ಆರ್. ವೆಂಕಟೇಶ್ ಮಾತನಾಡಿದರು. ಕಾರ್ಯ ಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮಧುಮತಿ ಬಾಯಿ, ಉಪಾಧ್ಯಕ್ಷ ಕೃಷ್ಣಯ್ಯ, ಸದಸ್ಯರಾದ ಲೋಕೇಶ್, ಪಿಡಿಓ ಹೆಚ್.ಡಿ.ಲೋಕೇಶ್, ಸಹಾಯಕ ಕೃಷಿ ಅಧಿಕಾರಿಗಳಾದ ಕಾವ್ಯಶ್ರೀ, ಶಶಿಧರ್, ಧಾರಿಣಿ, ರೈತ ಮುಖಂಡ ರಾಮೇಗೌಡ, ರೈತ ಅನುವುಗಾರರಾದ ಪ್ರಕಾಶ್‍ಗೌಡÀ, ಕುಮಾರ್‍ನಾಯಕ್, ಸುರೇಶ್, ಸುದರ್ಶನ್ ರಾವ್ ಸಿಂದೆ ಮತ್ತಿತರರಿದ್ದರು.

Translate »