ಮೈಸೂರು, ಅ.12(ಆರ್‍ಕೆಬಿ)- ಜಿಲ್ಲೆಯ 189 ಪಶುವೈದ್ಯ ಆಸ್ಪತ್ರೆಗಳಲ್ಲಿ ಏಕಕಾಲದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಮೂಲಕ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ (ಎನ್‍ಎಡಿಸಿಪಿ)ಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ಅಮೃತೇಶ್ವರ ದೇವಸ್ಥಾನದ ಬಳಿ ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಸಿ.ಎಂ.ಪ್ರಸಾದ್‍ಮೂರ್ತಿ ಇಂದು ಬೆಳಿಗ್ಗೆ ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾನು ವಾರುಗಳಿಗೆ ಕಂಟಕ ಪ್ರಾಯವಾಗಿರುವ ಕಾಲುಬಾಯಿ ಜ್ವರಕ್ಕೆ ಲಸಿಕೆ ಅಭಿಯಾನ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುತ್ತಿದೆ. 45 ದಿನಗಳ ನಿರಂತರವಾಗಿ ನಡೆ ಯುವ ಈ ಅಭಿಯಾನದಲ್ಲಿ ಮೈಸೂರಿನ 4500 ಜಾನುವಾರುಗಳು ಸೇರಿದಂತೆ ಜಿಲ್ಲೆಯ ಒಟ್ಟು 5.14,714 ಜಾನುವಾರುಗಳಿಗೆ ಲಸಿಕೆ ಹಾಕಲಾ ಗುತ್ತದೆ. 2030ರ ವೇಳೆಗೆ ಭಾರತವನ್ನು ಕಾಲುಬಾಯಿ ರೋಗ ಮುಕ್ತ ದೇಶವನ್ನಾಗಿ ಮಾಡುವ ಗುರಿ ಇಟ್ಟು ಕೊಳ್ಳಲಾಗಿದೆ ಎಂದು ಹೇಳಿದರು. ಹಸು, ಎತ್ತು, ಹಂದಿಗಳಿಗೆ ಮಾತ್ರ ಈ ಬಾರಿ ಲಸಿಕೆ ಹಾಕಲಾಗುತ್ತಿದ್ದು, ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿಯೂ ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಅನುಸರಿಸಿ 94 ಪಶುವೈದ್ಯರು ಮತ್ತು 307 ವೈದ್ಯಕೀಯ ಸಿಬ್ಬಂದಿ ಜಾನು ವಾರುಗಳಿಗೆ ಲಸಿಕ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ಸಿ.ಸುರೇಶ್, ಮೈಮುಲ್‍ನ ಡಾ.ಆಲೂರು, ಪಾಲಿ ಕ್ಲಿನಿಕ್‍ನ ಉಪನಿರ್ದೇಶಕ ರವಿಕುಮಾರ್, ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.