ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿಯ ಸಾಧನೆ
ಮೈಸೂರು

ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿಯ ಸಾಧನೆ

October 13, 2020

ಮೈಸೂರು, ಅ. 12- ಮೈಸೂರಿನ ಪ್ರತಿಷ್ಠಿತ ಸೆಂಟ್ ಫಿಲೋಮಿನಾಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಯಾದ ಎಂ.ಎಸ್. ದರ್ಶನ್ ಗೌಡ ಅವರಿಗೆ ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ಲಭಿಸಿದೆ. ಮುಖ್ಯಶಿಕ್ಷಕ ಎಂ.ಆರ್.ಸುರೇಶ್ ಹಾಗೂ ಶೋಭಾ ದಂಪತಿ ಪುತ್ರರಾದ ದರ್ಶನ್ ಗೌಡ ಅವರು, 6.9 ಸೆಂಟಿ ಮೀಟರ್ ಉದ್ದ ಸಿಗರೇಟಿನ ಮೇಲೆ “SಒಔಏIಓಉ IS IಓಎUಖIಔUS ಖಿಔ ಊಇಂಐಖಿಊ” ಹಾಗೂ “ IಓಆIಂ” ಎಂಬ ಪದಗಳನ್ನು 7186 ಬಾರಿ ಬರೆದು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್, ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಗ್ರಾಂಡ್ ಮಾಸ್ಟರ್ ಬಿರುದು ಹಾಗೂ `ಗೋಲ್ಡನ್ ಬುಕ್ ಅಫ್ ವಲ್ರ್ಡ್ ರೆಕಾಡ್ರ್ಸ್’ನಲ್ಲಿ ಸ್ಥಾನ ಗಿಟ್ಟಿಸಿ ಕೊಳ್ಳುವ ಮೂಲಕ ತಮ್ಮ ಹೆಸರು ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಯೋಗ ಪಟುವಾದ ದರ್ಶನ್ ಈಗಾಗಲೇ ಕರ್ನಾಟಕ ಬುಕ್ ಆಫ್ ರೆಕಾಡ್ರ್ಸ್‍ನ ದಾಖಲೆಯನ್ನು ಹೊಂದಿದ್ದಾರೆ. ದೇಶದ ಯುವಜನತೆಗೆ ಸಿಗರೇಟ್‍ನಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ “ಸ್ಮೋಕಿಂಗ್ ಇಸ್ ಇಂಜುರಿಯಸ್ ಟು ಹೆಲ್ತ್” ಪದವನ್ನು ಬರೆದಿದ್ದಾರೆ.

 

 

 

 

Translate »