ಶ್ರೀನಗರ, ಜು. 4-ಡ್ರೋನ್ ಬಳಸಿ ಜಮ್ಮು ವಾಯುನೆಲೆ ಮೇಲೆ ದಾಳಿಯಾದ ನಂತರ ಡ್ರೋನ್ಗಳು ಮತ್ತು ಇದೇ ರೀತಿಯ ಮಾನವ ರಹಿತ ವೈಮಾನಿಕ ವಾಹನಗಳಿಗೆ ಶ್ರೀನಗರ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ. ಶ್ರೀನಗರ ಜಿಲ್ಲಾ ವ್ಯಾಪ್ತಿಯೊಳಗೆ ಡ್ರೋನ್ಗಳಂತಹ ಮಾನವ ರಹಿತ ವಾಹನಗಳ ಬಳಕೆ, ಹಾರಾಟ, ಸಂಗ್ರಹ, ಮಾರಾಟ ವನ್ನು ನಿಷೇಧಿಸಿ ಶ್ರೀನಗರ ಜಿಲ್ಲಾಧಿಕಾರಿ ಮೊಹಮ್ಮದ್ ಅಜಾಜ್ ಆದೇಶಿಸಿದ್ದಾರೆ. ಈಗಾಗಲೇ ಡ್ರೋನ್ ಕ್ಯಾಮೆರಾ ಗಳು/ಅಂತಹುದೇ ಮಾನವರಹಿತ ವೈಮಾನಿಕ ವಾಹನಗಳನ್ನು ಹೊಂದಿರುವ ವ್ಯಕ್ತಿಗಳು ಸರಿಯಾದ ರಶೀದಿಯಡಿಯಲ್ಲಿ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಇಡಬೇಕೆಂದು ಆದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಕೃಷಿ, ಪರಿಸರ ಸಂರಕ್ಷಣೆ ಮತ್ತು ವಿಪತ್ತು ತಗ್ಗಿಸುವಿಕೆ ಕ್ಷೇತ್ರಗಳಲ್ಲಿ ಮ್ಯಾಪಿಂಗ್, ಸಮೀಕ್ಷೆಗಳು ಮತ್ತು ಕಣ್ಗಾವಲುಗಾಗಿ ಡ್ರೋನ್ಗಳನ್ನು ಬಳಸುವ ಸರ್ಕಾರಿ ಇಲಾಖೆಗಳು ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಯಾವುದೇ ಚಟುವಟಿಕೆಯನ್ನು ಕೈಗೊಳ್ಳುವ ಮೊದಲು ಸ್ಥಳೀಯ ಪೆÇಲೀಸರಿಗೆ ತಿಳಿಸಬೇಕಾಗುತ್ತದೆ ಆದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘನೆ ಯಾದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
