ಅ.10ರವರೆಗೆ ದಸರಾ ದೀಪಾಲಂಕಾರ ವಿಸ್ತರಣೆ
ಮೈಸೂರು

ಅ.10ರವರೆಗೆ ದಸರಾ ದೀಪಾಲಂಕಾರ ವಿಸ್ತರಣೆ

October 7, 2022

ಮೈಸೂರು, ಅ.6(ಆರ್‍ಕೆ)-ಮೈಸೂರಲ್ಲಿ ದಸರಾ ವಿದ್ಯುದ್ದೀಪಾಲಂಕಾರವನ್ನು ಅಕ್ಟೋಬರ್ 10ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 10 ದಿನಗಳ ಕಾಲ ದೀಪಾಲಂಕಾರ ವಿಸ್ತರಿಸುವಂತೆ ಕೋರಲಾಗಿತ್ತು. ಆದರೆ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು 5 ದಿನ ವಿಸ್ತರಿಸುತ್ತೇವೆಂದು ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು, ಇಂಧನ ಸಚಿವರೊಂದಿಗೆ ಮಾತನಾಡಿ, ಅಕ್ಟೋಬರ್ 15ರವರೆಗೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು. ಈ ಬಾರಿ 124 ಕಿ.ಮೀ.ವರೆಗೆ ವಿಶೇಷ ರೀತಿಯಲ್ಲಿ ವಿದ್ಯುದ್ದೀ ಪಾಲಂಕಾರ ಮಾಡಲಾಗಿದ್ದು, ಜನರು ನೋಡಿ ಆನಂದಿಸುತ್ತಿದ್ದಾರೆ. ಸಾರ್ವಜನಿಕರು, ಪ್ರವಾಸಿ ಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವು ದರಿಂದ 10 ದಿನಗಳವರೆಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಜಯ ವಿಭವಸ್ವಾಮಿ, 10 ದಿನ ದೀಪಾಲಂಕಾರ ವಿಸ್ತರಿ ಸುವಂತೆ ತಿಳಿಸಿದ್ದಾರೆ. ಆದರೆ ಪ್ರತೀ ದಿನ 30 ಲಕ್ಷ ರೂ. ಹೆಚ್ಚುವರಿ ಖರ್ಚು ಭರಿಸ ಬೇಕಾ ಗುತ್ತದೆ. ಆರ್ಥಿಕ ಸಂಪನ್ಮೂಲ ಖಚಿತಪಡಿ ಸಿಕೊಳ್ಳ ಬೇಕು. ನಂತರವಷ್ಟೇ ಸರ್ಕಾರ ಆದೇಶ ನೀಡಿದರೆ ವಿಸ್ತರಿಸಬೇಕಾಗುತ್ತದೆ. ಸದ್ಯಕ್ಕೆ ಅ.10ರ ವರೆಗೆ 5 ದಿನಗಳ ಕಾಲ ವಿಸ್ತರಿಸಿದ್ದೇವೆ ಎಂದರು.

Translate »