ಬೆಂಗಳೂರು,ಅ.14(ಕೆಎಂಶಿ)- ಅಕ್ರಮ ಆಸ್ತಿ ಗಳಿಕೆ ಹಾಗೂ ಹಣ ಸಾಗಾಣಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್, ತಾಯಿ ಗೌರಮ್ಮ ಹಾಗೂ ಪತ್ನಿ ಉಷಾಗೆ ಜಾರಿ ನಿರ್ದೇಶ ನಾಲಯ ನೋಟಿಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 1 ತಿಂಗಳಿಂದ ತಿಹಾರ್ ಜೈಲಿನಲ್ಲಿ ರುವ ಶಿವಕುಮಾರ್, ನಿರೀಕ್ಷಣಾ ಜಾಮೀನಿಗಾಗಿ ದೆಹಲಿ ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿ ನಾಳೆ ವಿಚಾರಣೆಗೆ ಬರುತ್ತಿರುವ ಬೆನ್ನಲ್ಲೇ ಅವರ ಕುಟುಂಬ ವರ್ಗದವರನ್ನು ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ತಾಯಿ ಗೌರಮ್ಮರಿಗೆ, ಮಂಗಳವಾರ, ಬುಧವಾರ, ಪತ್ನಿ ಉಷಾ ಅವರಿಗೆ ಅ.17ರಂದು ಹಾಜರಾಗುವಂತೆ ಸೂಚಿಸಿರುವುದ ಲ್ಲದೆ, ಇದೇ ಸಂದರ್ಭದಲ್ಲಿ ಶಿವಕುಮಾರ್, ಇತರ ಸಂಬಂಧಿಕರು, ಆಪ್ತರು ಮತ್ತು ವ್ಯವಹಾರದಲ್ಲಿ ಪಾಲುದಾರರಾಗಿರುವ 51 ವ್ಯಕ್ತಿಗಳಿಗೂ ನೋಟಿಸ್ ಜಾರಿ ಮಾಡಿರುವ ಇ.ಡಿ. ಇವರೆಲ್ಲ ರಿಗೂ ಪ್ರತ್ಯೇಕವಾಗಿ ಖುದ್ದು ಹಾಜರಾಗಲು ದಿನಾಂಕ ನಿಗದಿಪಡಿಸಿದೆ. ಈಗಾಗಲೇ ಶಿವಕುಮಾರ್ ಪುತ್ರಿ ಐಶ್ವರ್ಯ, ಸಹೋದರ ಸಂಸದ ಡಿ.ಕೆ.ಸುರೇಶ್ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಶಿವಕುಮಾರ್ ನಿವಾಸ, ಕಚೇರಿ, ಅವರ ವ್ಯವಹಾರ ಕೇಂದ್ರಗಳನ್ನು ಜಾಲಾಡಿದ್ದ ಆದಾಯ ತೆರಿಗೆ ಇಲಾಖೆ ದೊಡ್ಡ ಪ್ರಮಾಣದಲ್ಲಿ ದಾಖಲೆಗಳನ್ನು ವಶಪಡಿ ಸಿಕೊಂಡಿತ್ತು. ಈ ದಾಖಲೆ ಆಧಾರದ ಮೇಲೆ ಈಗಾಗಲೇ ಆದಾಯ ತೆರಿಗೆ ಇಲಾಖೆ ವಿಚಾರಣೆ ನಡೆಸಿದೆ. ಈ ನಡುವೆ ಅಕ್ರಮ ಹಣ ಸಂಗ್ರಹ ಮತ್ತು ಸಾಗಾಣಿಕೆಗೆ ಸಂಬಂಧಿಸಿ ದಂತೆ ಜಾರಿ ನಿರ್ದೇ ಶನಾಲಯ ಅವರ ಕುಟುಂಬ ವರ್ಗ ಮತ್ತು ಇತರರನ್ನು ವಿಚಾ ರಣೆಗೆ ಒಳಪಡಿಸುತ್ತಿದೆ. ಈ ಮಧ್ಯೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ. ಶಿವಕುಮಾರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಕೋರ್ಟ್‍ಗೆ ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡುವಂತೆ ಸಿಂಘ್ವಿ ಅವರ ಕಿರಿಯ ವಕೀಲರು ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠ ನಾಳೆ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಗುರುವಾರ, ಶುಕ್ರವಾರ ಜಾರಿ ನಿರ್ದೇಶನಾಲಯದ ಪರ ವಕೀಲರು ವಾದ ಮಂಡಿ ಸಲಿದ್ದಾರೆ. ಇಂದು ಇ.ಡಿ. ಅಧಿಕಾರಿಗಳು ಕೋರ್ಟ್‍ಗೆ ತನಿಖಾ ವರದಿಯನ್ನು ಸಲ್ಲಿಸಿದರು.