ಕಣ್ಮರೆಯಾಗಿದ್ದ ಯುವಕನ ಹತ್ಯೆ: ಆತನ ಸ್ನೇಹಿತರು ಪೊಲೀಸ್ ವಶಕ್ಕೆ
ಮೈಸೂರು

ಕಣ್ಮರೆಯಾಗಿದ್ದ ಯುವಕನ ಹತ್ಯೆ: ಆತನ ಸ್ನೇಹಿತರು ಪೊಲೀಸ್ ವಶಕ್ಕೆ

October 15, 2019

ಮೈಸೂರು, ಅ.14(ಆರ್‍ಕೆ)- ಅಕ್ಟೋಬರ್ 3ರಂದು ಕಣ್ಮರೆಯಾಗಿದ್ದ ಯುವಕನನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿದೆ.

ಮೈಸೂರಿನ ಕುವೆಂಪುನಗರ ನಿವಾಸಿ ರಾಹುಲ್(27) ಕೊಲೆಯಾದ ಯುವಕ ನಾಗಿದ್ದು, ಈ ಸಂಬಂಧ ಲಕ್ಷ್ಮೀಪುರಂ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾ ರಣೆಗೊಳಪಡಿಸಿದ್ದಾರೆ. ಅಕ್ಟೋಬರ್ 3ರಂದು ಸಂಜೆ ಯುವ ದಸರಾಗೆ ಹೋಗುತ್ತೇನೆ ಎಂದು ಹೇಳಿ ಮನೆ ಯಿಂದ ಹೊರಬಂದಿದ್ದ ರಾಹುಲ್ ಅಂದು ರಾತ್ರಿ ಮನೆಗೆ ಹಿಂದಿರುಗಿರಲಿಲ್ಲ. ಮರುದಿನ ಅವರ ತಾಯಿ ಕುವೆಂಪುನಗರ ಠಾಣೆಗೆ ತೆರಳಿ ರಾಹುಲ್ ನಾಪತ್ತೆಯಾಗಿ ರುವ ಬಗ್ಗೆ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದ ಪೊಲೀ ಸರು ಅವರ ಫೋನ್ ಕಾಲ್ ಡೀಟೇಲ್ ಮಾಹಿತಿಯ ಸುಳಿವಿನ ಬೆನ್ನು ಹತ್ತಿದಾಗ ಅಕ್ಟೋಬರ್ 3ರಂದು ರಾತ್ರಿ ರಾಹುಲ್ ಮೊಬೈಲ್ ಫೋನ್‍ಗೆ ಸಂಪರ್ಕ ಸಾಧಿಸಿದ್ದ ನಾಲ್ವರು ಯುವಕರ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಿಗ್ಗೆ ಆ ನಾಲ್ವರನ್ನು ಕರೆತಂದು ವಿಚಾರಣೆ ನಡೆಸಿದ ಪೊಲೀಸರಿಗೆ ಅ.3ರಂದು ರಾತ್ರಿ ಮಹಾರಾಜ ಕಾಲೇಜು ಮೈದಾನದಿಂದ ರಾಹುಲ್‍ನನ್ನು ಕರೆ ದೊಯ್ದು ಓವೆಲ್ ಮೈದಾನದಲ್ಲಿ ಉಸಿರು ಕಟ್ಟಿಸಿ ಹತ್ಯೆಗೈದು ಮೃತದೇಹವನ್ನು ಕೆಆರ್‍ಎಸ್ ರಸ್ತೆಯ ಮೊಗರಹಳ್ಳಿ ಮಂಟಿ ಬಳಿ ಮಧ್ಯರಾತ್ರಿ ವರುಣಾ ನಾಲೆಗೆ ಎಸೆದಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿಯಿತು. ತಕ್ಷಣ ಅವರನ್ನು ತಮ್ಮ ವಶಕ್ಕೆ ಪಡೆದ ಲಕ್ಷ್ಮೀಪುರಂ ಠಾಣೆ ಪೊಲೀಸರು, ಇಂದು ವರುಣಾ ನಾಲೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿ ದರಾದರೂ ರಾಹುಲ್ ಮೃತದೇಹ ಪತ್ತೆಯಾಗಿಲ್ಲ ದೇಹ ನೀರಿನಲ್ಲಿ ತೇಲಿಕೊಂಡು ಮುಂದೆ ಹೋಗಿರಬಹುದೆಂದು ಶಂಕಿಸಲಾಗಿದ್ದು, ನಾಳೆ (ಅ.15) ಬೆಳಿಗ್ಗೆ ಈಜುಗಾರರನ್ನು ಕರೆದೊಯ್ದು ನಾಲೆಯಲ್ಲಿ ಶೋಧ ನಡೆಸುತ್ತೇವೆ ಎಂದು ಲಕ್ಷ್ಮೀಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಮ್ಮ ವಶದಲ್ಲಿರುವ ಶಂಕಿತ ನಾಲ್ವರು ಆರೋಪಿಗಳನ್ನು ಮೃತದೇಹ ಪತ್ತೆಯಾದ ಬಳಿಕ ಬಂಧನ ಪ್ರಕ್ರಿಯೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಲ್ಲಿ ಯವರೆಗೆ ಹತ್ಯೆ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Translate »