ವಿದ್ಯುತ್ ಸ್ಪರ್ಶ: ಎರಡು ಕಾಡಾನೆ ಸಾವು
ಕೊಡಗು

ವಿದ್ಯುತ್ ಸ್ಪರ್ಶ: ಎರಡು ಕಾಡಾನೆ ಸಾವು

July 26, 2022

ಮಡಿಕೇರಿ,ಜು.25- ಕಾಫಿ ತೋಟದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ಸ್ಪರ್ಶಗೊಂಡು 2 ಕಾಡಾನೆಗಳು ದಾರುಣವಾಗಿ ಮೃತಪಟ್ಟ ಘಟನೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ಕಾಫಿ ತೋಟದಲ್ಲಿ ಸಂಭವಿಸಿದೆ.

ನೆಲ್ಯಹುದಿಕೇರಿ ಗ್ರಾಮದ ಕೋಣೇರಿರ ಪ್ರಕಾಶ್ ಹಾಗೂ ಮಂಡೇಪಂಡ ಸುಮಂತ್ ಚಂಗಪ್ಪ ಎಂಬುವರಿಗೆ ಸೇರಿದ ಕಾಫಿ ತೋಟ ದಲ್ಲಿ 11 ಕೆ.ವಿ ಸಾಮಥ್ರ್ಯದ ವಿದ್ಯುತ್ ತಂತಿಗಳು ಹಾದು ಹೋಗಿದ್ದವು. ಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ನೆಲಮಟ್ಟದಿಂದ 5 ಅಡಿ ಅಂತರದಲ್ಲಿ ತಂತಿಗಳು ಜೋತು ಬಿದ್ದಿದ್ದು, ಭಾನುವಾರ ರಾತ್ರಿ ಆಹಾರ ಅರಸಿ ಕಾಡಿನಿಂದ ಕಾಫಿ ತೋಟದತ್ತ ಬಂದ ಎರಡು ಕಾಡಾನೆಗಳು ತೋಟದ ಮಾರ್ಗವಾಗಿ ಹಾದು ಹೋಗುವಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ. ಪರಿಣಾಮ 12 ವರ್ಷದ ಗಂಡಾನೆ ಹಾಗೂ 13 ವರ್ಷದ ಹೆಣ್ಣಾನೆ ಸ್ಥಳದಲ್ಲೇ ಮೃತಪಟ್ಟಿವೆ.
ಎಂದಿನಂತೆ ಸೋಮವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದ ಕಾರ್ಮಿಕರು ಕಾಡಾನೆಗಳು ಮೃತಪಟ್ಟಿರುವುದನ್ನು ಗಮ ನಿಸಿದ್ದಾರೆ. ಬಳಿಕ ತೋಟದ ಮಾಲೀಕರ ಮೂಲಕ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಡಗು ರೈತ ಸಂಘದ ಪದಾಧಿಕಾರಿ ಗಳು ಸ್ಥಳಕ್ಕಾಗಮಿಸಿ ಕಾಡಾನೆಗಳ ಸಾವಿಗೆ ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ, ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಹಲವು ಬಾರಿ ಒತ್ತಾ ಯಿಸಲಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಲೇ ಇಂತಹ ಘಟನೆಗಳು ಮರು ಕಳಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರು. ಕಾಡಾನೆಗಳಿಗೆ ಬೇಕಾದ ಆಹಾರ ವ್ಯವಸ್ಥೆ ಅರಣ್ಯದಲ್ಲಿ ಮಾಡದಿರುವುದರಿಂದ ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರು ತ್ತಿವೆ. ಶಾಶ್ವತ ಯೋಜನೆಗಳನ್ನು ರೂಪಿಸಿ ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಿದ್ದಲ್ಲಿ ಇಂತಹ ಘಟನೆಗಳು ಮರು ಕಳಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಕಾಫಿ ತೋಟಗಳಲ್ಲೇ ಮೃತ ಪಟ್ಟ ಕಾಡಾನೆಗಳ ಮರಣೋತ್ತರ ಪರೀಕ್ಷೆ ಯನ್ನು ನಡೆಸಿ, ಅದೇ ಸ್ಥಳದಲ್ಲಿ ಹೂಳಲಾಗು ತ್ತಿತ್ತು. ಆನೆಗಳನ್ನು ಹೂಳುವ ಸ್ಥಳದಲ್ಲಿ ಕೆಲಸ ನಿರ್ವಹಿಸಲು ಕಾರ್ಮಿಕರು ಭಯ ಪಡುತ್ತಾರೆ. ಮಾತ್ರವಲ್ಲದೇ, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಕಾಫಿ ತೋಟದಲ್ಲಿ ಆನೆಗಳನ್ನು ಹೂಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಹಿನ್ನೆಲೆ ಯಲ್ಲಿ ಕ್ರೇನ್‍ಗಳ ಸಹಾಯದಿಂದ ಕಾಡಾನೆ ಗಳ ಕಳೇಬರವನ್ನು ಲಾರಿಯಲ್ಲಿ ಮೀನು ಕೊಲ್ಲಿ ಅರಣ್ಯಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಅಲ್ಲೇ ಹೂಳಲಾಯಿತು.

Translate »