ರೈತರು, ಎಸ್‌ಸಿ-ಎಸ್‌ಟಿ, ಹಿಂದುಳಿದವರು, ಅಲ್ಪಸಂಖ್ಯಾತರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರವಿಡುವ ಉದ್ದೇಶದಿಂದ ಎನ್‌ಇಪಿ ಜಾರಿ
ಮೈಸೂರು

ರೈತರು, ಎಸ್‌ಸಿ-ಎಸ್‌ಟಿ, ಹಿಂದುಳಿದವರು, ಅಲ್ಪಸಂಖ್ಯಾತರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರವಿಡುವ ಉದ್ದೇಶದಿಂದ ಎನ್‌ಇಪಿ ಜಾರಿ

October 4, 2021

ಹೈಕೋರ್ಟ್ ವಕೀಲ ಹೆಚ್.ಮೋಹನ್‌ಕುಮಾರ್ ಅಭಿಮತ

ಭಾರತ ಸಂಸದೀಯ ಪ್ರಜಾಸತಾತ್ಮಕ ವ್ಯವಸ್ಥೆ ಹೊಂದಿದ್ದು, ಇಂತಹ ವಿಶಿಷ್ಟ ವ್ಯವಸ್ಥೆ ಯನ್ನು ಬೇರೆ ಯಾವುದೇ ದೇಶದಲ್ಲಿ ಕಾಣಲಾಗದು. ಡಾಅಂಬೇಡ್ಕರ್ ಅವರು ಈ ವ್ಯವಸ್ಥೆ ಬಗ್ಗೆ ಮಾತನಾಡುತ್ತಾ, `ಈ ವ್ಯವಸ್ಥೆ ಸುಗಮವಾಗಿ ಸಾಗಲು ಪ್ರಬಲ ವಾದ ವಿರೋಧ ಪಕ್ಷದ ಅಗತ್ಯವಿದೆ’ ಎಂದು ಹೇಳಿದ್ದಾರೆ. ಆದರೆ ದೇಶದ ಜನತೆ ಇದನ್ನು ಗ್ರಹಿಸಿದಂತೆ ಕಾಣು ತ್ತಿಲ್ಲ. ಹಾಗಾಗಿಯೇ ಇಂದು ಸಂಸತ್ತಿ ನಲ್ಲಿ ಪ್ರಬಲ ವಿರೋಧ ಪಕ್ಷ ಇಲ್ಲವಾ ಗಿದೆ. ಈ ಕಾರಣಕ್ಕಾಗಿ ದೇಶದ ರೈತರ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಗಂಭೀರ ವಾದ ಚರ್ಚೆಯೇ ಆಗುತ್ತಿಲ್ಲ. ಚರ್ಚೆಯೇ ಆಗದೇ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ರೈತರು ಎಂಟತ್ತು ತಿಂಗಳಿAದ ದೆಹಲಿ ಸುತ್ತಲು ಹೋರಾಟ ನಡೆಸುತ್ತಿದ್ದಾರೆ. ಇವರ ಬೇಡಿಕೆಯ ಕೂಗು ವಾಸ್ತವ ವಾಗಿ ಸಂಸತ್ತಿನಲ್ಲಿ ಕೇಳಿಸಬೇಕಿತ್ತು. ಅಂದರೆ ಸಂಸತ್ತಿನೊಳಗೆ ರೈತ ನಾಯ ಕರು ಸಂಸದರಾಗಿದ್ದರೆ ಇಂತಹ ಮೂರು ಕಾಯ್ದೆಗಳು ಇಂದು ಜಾರಿ ಯಾಗಲು ಸಾಧ್ಯವಾಗುತ್ತಿರಲಿಲ್ಲ.
-ಹೆಚ್.ಮೋಹನ್‌ಕುಮಾರ್

ಮೈಸೂರು, ಅ.೩(ಪಿಎಂ)-ನೂತನ ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ರ (ಎನ್‌ಇಪಿ) ಬಗ್ಗೆ ಸಂಸತ್ತಿನಲ್ಲಿ ಸಮಗ್ರ ಚರ್ಚೆಯೇ ಆಗದ ಹಿನ್ನೆಲೆಯಲ್ಲಿ ಅದರಲ್ಲಿನ ಅಂಶ ಗಳ ಬಗ್ಗೆ ಯಾರಿಗೂ ಸರಿಯಾದ ಮಾಹಿ ತಿಯೇ ಇಲ್ಲ. ಆದರೂ ಮೇಲ್ನೋಟಕ್ಕೆ ಇದರಲ್ಲಿ ರೈತರು, ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರ ವಾಗಿಸುವ ಉದ್ದೇಶವಿರುವುದು ಗೋಚರಿ ಸುತ್ತಿದೆ ಎಂದು ಹೈಕೋರ್ಟ್ ವಕೀಲ ಹೆಚ್. ಮೋಹನ್‌ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‌ಬಿ ರಸ್ತೆಯ ಇಂಜಿ ನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಮೈಸೂರು ಜಿಲ್ಲಾ ಶಾಖೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮ ದೀಕ್ಷೆ ಪಡೆದ ೬೭ನೇ ವರ್ಷದ ಆಚರಣೆ ಅಂಗ ವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡಿದರು.

ಈ ನೀತಿಯಡಿ ವಿದೇಶಿ ವಿವಿಗಳು ತಮ್ಮ ಕೇಂದ್ರಗಳನ್ನು ದೇಶದಲ್ಲಿ ಆರಂಭಿಸಲಿವೆ. ಆ ಮೂಲಕ ಸಾರ್ವಜನಿಕ ಮತ್ತು ಸಾಂಪ್ರ ದಾಯಿಕ ವಿವಿಗಳಿಗೆ ಧಕ್ಕೆಯಾಗುವಂತಹ ವಾತಾವರಣ ಸೃಷ್ಟಿಯಾಗಲಿದ್ದು, ಇಲ್ಲಿನ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ನಮ್ಮ ಮಕ್ಕಳ ಕನಸು ಭಗ್ನವಾಗಲಿದೆ ಎಂದು ಹೇಳಿದರು.
ಸಂಸತ್ತು ದೇಶದ ಅತ್ಯುನ್ನತ ವೇದಿಕೆ. ಅಲ್ಲಿ ಈ ಶಿಕ್ಷಣ ನೀತಿ ಬಗ್ಗೆ ವ್ಯಾಪಕ ಚರ್ಚೆ ಆಗಬೇಕಿತ್ತು. ರಾಜ್ಯ ಸರ್ಕಾರವಾದರೂ ವಿಧಾನಸಭೆಯಲ್ಲಿ ಸಮರ್ಪಕ ಚರ್ಚೆ ನಡೆ ಸಲಿಲ್ಲ. ಬದಲಿಗೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತರಾತುರಿಯಲ್ಲಿ ಸಿದ್ಧತೆ ನಡೆಸುತ್ತಿದೆ. ಆದರೆ ತಮಿಳುನಾಡು ಮತ್ತು ಕೇರಳ ಸರ್ಕಾರ ಈ ನೀತಿಯನ್ನು ಸಾರಗ ಟಾಗಿ ತಿರಸ್ಕರಿಸಿವೆ. ಈ ಶಿಕ್ಷಣ ನೀತಿಯನ್ನು ಸಂಸತ್ತಿನಲ್ಲಿ ಸಮಗ್ರ ಚರ್ಚೆಗೆ ಒಳಪಡಿಸ ಬೇಕು ಎಂದು ಒತ್ತಾಯಿಸಿದರು.

ಜಿಎಸ್‌ಟಿ ಮೂಲಕ ಅಧಿಕಾರ ಮೊಟಕು: ರಾಜ್ಯ ಸರ್ಕಾರಗಳಿಗೆ ಇದ್ದ ಅಧಿಕಾರ ವನ್ನು ಜಿಎಸ್‌ಟಿ ಜಾರಿ ಮೂಲಕ ಕಸಿದು ಕೊಳ್ಳಲಾಗಿದೆ. ತಾನು ಸಂಗ್ರಹಿಸಿದ ತೆರಿಗೆ ಯನ್ನು ತನ್ನ ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳು ವ್ಯಯಿಸುತ್ತಿದ್ದವು. ಆದರೆ ಈಗ ತೆರಿಗೆ ಹಣ ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿದ್ದು, ರಾಜ್ಯ ಸರ್ಕಾರಗಳು ಕೇಂದ್ರದ ಮುಂದೆ ಬೇಡುವ ಪರಿಸ್ಥಿತಿ ಉದ್ಭವಿಸಿದೆ ಎಂದು ಹೆಚ್. ಮೋಹನ್‌ಕುಮಾರ್ ಹೇಳಿದರು.

ಆರ್‌ಬಿಐ ಎಂಬ ಸ್ವಾಯತ್ತ ಸಂಸ್ಥೆಯು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮ ದಿಂದ ಸ್ಥಾಪಿತವಾಯಿತು. ಈ ದೇಶದ ಅರ್ಥವ್ಯವಸ್ಥೆ ಹೇಗಿರಬೇಕು? ಎಂದು ನಿರ್ಧಾರಗಳನ್ನು ಕೈಗೊಳ್ಳುವ ಇದರ ಸ್ವಾಯ ತ್ತತೆಯೂ ಉಳಿದಿಲ್ಲ. ಕಪ್ಪುಹಣ ಹೊರ ತರುತ್ತೇವೆಂದು ಆರ್‌ಬಿಐಗೇ ಮಾಹಿತಿ ನೀಡದೇ ಅಧಿಕ ಮುಖ ಬೆಲೆ ನೋಟು ಅಪಮೌಲ್ಯೀಕರಣ ಮಾಡಲಾಯಿತು. ಆದರೆ ಒಂದು ರೂಪಾಯಿ ಕಪ್ಪು ಹಣ ಹೊರ ಬರಲಿಲ್ಲ. ಕಾರಣ ಕಪ್ಪುಹಣ ನೋಟಿನ ರೂಪದಲ್ಲಿ ಇಲ್ಲ. ಅದು ಚಿನ್ನ ಸೇರಿದಂತೆ ಬೇರೆ ಆಸ್ತಿಪಾಸ್ತಿ ರೂಪದಲ್ಲಿದೆ. ಇದೆಲ್ಲ ಕ್ಕಿಂತಲೂ ಅಧಿಕವಾದ ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿದೆ ಎಂದು ತಿಳಿಸಿದರು.

ಚಿಂತಕ ನಾ.ದಿವಾಕರ್ ವಿಷಯ ಮಂಡಿಸಿದರು. ಚಿಂತಕ ಡಾ.ಹರೀಶ್ ಕುಮಾರ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವ ರಾಜು, ದಸಂಸ ಸಂಚಾಲಕ ಚೋರನ ಹಳ್ಳಿ ಶಿವಣ್ಣ, ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ ಮತ್ತಿತರರು ಹಾಜರಿದ್ದರು.

Translate »