ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಹೊಣೆಗಾರಿಕೆ ಅಗತ್ಯವಿಶ್ವ ಭೂ ದಿನಾಚರಣೆಯಲ್ಲಿ ನ್ಯಾ.ನಿರ್ಮಲ ಅಭಿಮತ
ಹಾಸನ

ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಹೊಣೆಗಾರಿಕೆ ಅಗತ್ಯವಿಶ್ವ ಭೂ ದಿನಾಚರಣೆಯಲ್ಲಿ ನ್ಯಾ.ನಿರ್ಮಲ ಅಭಿಮತ

April 24, 2019

ಅರಸೀಕೆರೆ: ಪರಿಸರ ಮತ್ತು ಅಂತರ್ಜಲ ಸಂರಕ್ಷಣೆಯಂತಹ ಮಹ ತ್ಕಾರ್ಯಗಳಿಗೆ ಮುಂದಾದರೇ ಸಮಾನ ಮನಸ್ಕರು ಸಹಕಾರ ನೀಡುತ್ತಾರೆ. ಇದ ರಿಂದ ನಮ್ಮ ಪ್ರಯತ್ನ ಯಶಸ್ವಿಯಾಗ ಲಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಹೊಣೆಗಾರಿಕೆ ಅಗತ್ಯವಾ ಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀ ಶರೂ ಆದ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಕೆ.ನಿರ್ಮಲಾ ಹೇಳಿದರು.

ತಾಲೂಕಿನ ಬಾಣಾವರ ಗ್ರಾಮದ ಅರ ಸನ ಭಾವಿ ಸಮೀಪವಿರುವ ಕಲ್ಯಾಣಿ ಬಳಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾ ಯಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಏಕಲವ್ಯ ಓಪನ್ ಗ್ರೂಪ್ ಮತ್ತು ಬಾಣಾವರ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಲ್ಯಾಣಿ ಸ್ವಚ್ಛತೆ ಮತ್ತು ವಿಶ್ವ ಭೂ ಸಂರ ಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.

ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂ ಡರೇ ಸಾಲದು, ಆ ಸಂಸ್ಥೆಗಳಿಂದ ಸಾರ್ವ ಜನಿಕ ವಲಯಗಳಿಗೆ ಯಾವ ಸೇವೆ ಲಭಿ ಸಿದೆ ಎಂಬುದು ಮುಖ್ಯ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಏಕಲವ್ಯ ಓಪನ್ ಗ್ರೂಪ್ ಪರಿಸರ ಸಂರಕ್ಷಣೆಯ ಕುರಿತು ಜಿಲ್ಲೆಯಲ್ಲಿ ಇಂದು ಪ್ರಮುಖ ಪಾತ್ರ ವಹಿಸಿದೆ. ಅಂತ ರ್ಜಲ ಹೆಚ್ಚಿಸಲು ನಮ್ಮ ಪೂರ್ವಿಕರು ನಿರ್ಮಾಣ ಮಾಡಿದ ನೀರು ಸಂಗ್ರಹ ಕಲ್ಯಾಣಿಗಳನ್ನು ದುರಸ್ತಿ ಮಾಡುತ್ತಿರುವುದು ಉತ್ತಮ ಸೇವೆಯಾಗಿದೆ ಎಂದರು.

ಪ್ರತಿಯೊಬ್ಬರ ಜೀವನದಲ್ಲಿ ಅವಕಾಶ ಗಳು ಅನುಷ್ಠಾನಕ್ಕೆ ಬರುವುದು ವಿರಳ. ಆದರೆ, ಇಂದು ಅನುಷ್ಠಾನಕ್ಕೆ ತರುತ್ತಿರುವ ಶ್ರಮದಾನ ಇತರರಿಗೆ ಮಾದರಿಯಾಗುವು ದರಲ್ಲಿ ಯಾವುದೇ ಸಂಶಯ ಬೇಡ. ಉದಾರ ಮನಸ್ಸುಗಳು ಒಂದಾಗುವುದರ ಮೂಲಕ ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿ ಕೊಳ್ಳಬೇಕು. ಆ ವೇದಿಕೆ ಇತರರಿಗೂ ಮಾದರಿ ಯಾಗಬೇಕು ಎಂದು ತಿಳಿಸಿದರು.

ಯಾವುದೇ ಸಂಘ, ಸಂಸ್ಥೆಗಳು ಪರಿಸರ ಸಂರಕ್ಷಣೆ, ಅಂತರ್ಜಲ ಸಂರಕ್ಷಣೆ ಇನ್ನಿ ತರೆ ಸಮಾಜಮುಖಿ ಕಾರ್ಯಗಳನ್ನು ಮಾಡಲು ಹೊರಟಾಗ ಸಾರ್ವಜನಿಕರು ಕೈ ಜೋಡಿಸಬೇಕು. ಕಳೆದ ಹತ್ತಾರು ವರ್ಷಗಳಿಂದ ನಾವುಗಳು ಮಾಡಿರುವ ಸಾಮೂಹಿಕ ತಪ್ಪುಗಳಿಂದ ಇಂದು ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ನಿರ್ಮಾಣವಾಗಿದೆ. ಇಂತಹ ಬೆಳವಣಿಗೆ ಗಳಿಂದ ಪಾರುಮಾಡಲು ಸಂಘ ಸಂಸ್ಥೆ ಗಳು ಮುಂದಾಗಬೇಕು. ಅದಕ್ಕೆ ಪೂರಕ ವಾದ ವಾತಾವರಣವನ್ನು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಇಓ ಕೃಷ್ಣಮೂರ್ತಿ ಮಾತನಾಡಿ, ತಾಲೂಕಿ ನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಒಂದು ಸಾವಿರ ಅಡಿಯಷ್ಟು ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ. ನಮಗೆ ವಿಜ್ಞಾನ ಹಾಗೂ ನಾಗರಿಕತೆಯ ಅರಿವಿದೆ. ಆದರೆ, ನಾವು ಶಿಲಾಯುಗದವರಂತೆ ವರ್ತಿಸುತ್ತಿದ್ದೇವೆ. ಭೂಮಿಯ ಸಂರಕ್ಷಣೆಯ ಹೊಣೆಯನ್ನು ಪ್ರತಿಯೊಬ್ಬರೂ ಕೈಗೆತ್ತಿಕೊಳ್ಳಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯವಂತ ಪರಿಸರವನ್ನು ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾಸ್ತವ್, ನ್ಯಾಯಾಧೀಶರಾದ ದೀಪ, ಅಮಿತ್ ಘಟ್ಟಿ, ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ತಹಸೀಲ್ದಾರ್ ಸಂತೋಷ್‍ಕುಮಾರ್, ಪೌರಾ ಯುಕ್ತ ಛÀಲಪತಿ, ಬಾಣಾವರ ಪೊಲೀಸ್ ಠಾಣೆ ಸಬ್‍ಇನ್‍ಸ್ಟೆಕ್ಟರ್ ಅರುಣ್‍ಕುಮಾರ್, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ.ನಾಗಪ್ಪ, ಗ್ರಾಪಂ ಲೆಕ್ಕಾಧಿಕಾರಿ ಕೆಂಚಪ್ಪ, ಸಹಾಯಕ ಸರ್ಕಾರಿ ಅಭಿಯೋಜಕಿ ಶಿವಮ್ಮ, ವಕೀಲರ ಸಂಘದ ಕಾರ್ಯ ದರ್ಶಿ ಗೀತಾ, ಏಕಲವ್ಯ ಓಪನ್ ಗ್ರೂಪ್ ಲೀಡರ್ ಗಿರೀಶ್, ಹಾಸನ ಜಿಲ್ಲಾ ಸಂಸ್ಥೆ ಜಂಟಿ ಕಾರ್ಯದರ್ಶಿ ಕಾಂಚನಮಾಲ, ಹೊಳೆನರಸೀಪುರ ಜಂಟಿ ಕಾರ್ಯದರ್ಶಿ ಕುಮುದ, ಕಾತ್ಯಾಯಿನಿ, ಜೈನ ಸಮುದಾ ಯದ ಅಧ್ಯಕ್ಷ ರೂಪೇಶ್, ರೋಟರಿ ಮಾಜಿ ಅಧ್ಯಕ್ಷ ಯೋಗೀಶ್‍ಚಾರ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಪರಿಸರ ಜಾಗೃತಿ ಕಾರ್ಯಕ್ರಮ ಅನುಕರಣೀಯ: ಡಿಸಿ
ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಸರ ಜಾಗೃತಿ, ಆಂದೋಲನಗಳು ಎಲ್ಲರಿಗೂ ಅನುಕರಣೀಯ. ಹಸಿರು ಭೂಮಿ ಪ್ರತಿಷ್ಠಾನ ಸೇರಿದಂತೆ ಪರಿಸರ ಕಾಳಜಿಯುಳ್ಳ ಅನೇಕ ಸಂಘ ಸಂಸ್ಥೆಗಳು ನಡೆಸುತ್ತಿರುವ ಒಳ್ಳೆಯ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ವಿಶ್ವ ಭೂ ದಿನದ ಪ್ರಯುಕ್ತ ನಗರದ ಜವೇನಹಳ್ಳಿ ಕೆರೆ ಆವರಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯಿಂದ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಿತಿಯು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು ಇದು ಇತರರಿಗೂ ಮಾರ್ಗದರ್ಶಕವಾಗಬೇಕು ಎಂದರು.
ಸಮಾಜಮುಖಿ ಕೆಲಸಗಳನ್ನು ಮಾಡುವ ಪ್ರಜ್ಞಾವಂತರಿರು ವುದರಿಂದ ದೇಶದ ಅಭಿವೃದ್ಧಿ ಸಾಧ್ಯ. ವಿಶ್ವ ಭೂ ದಿನಾಚರಣೆಗೆ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುತ್ತಿರು ವುದು ಶ್ಲಾಘನೀಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕೆ.ಎಸ್. ತಿಮ್ಮಣ್ಣಾಚಾರ್ ಮಾತನಾಡಿ, ಜನ ಜಾಗೃತಿ ಎಂಬುದು ನಿಂತ ನೀರಾಗಬಾರದು. ಇಂತಹ ಒಳ್ಳೆಯ ಕೆಲಸ ಕಾರ್ಯಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಕೆ.ಬಸವರಾಜು, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗ ರಾಜು, ವಕೀಲರ ಸಂಘದ ಅಧ್ಯಕ್ಷರಾದ ಜೆ.ಪಿ.ಶೇಖರ್, ಹಸಿರು ಭೂಮಿ ಪ್ರತಿಷ್ಠಾನದ ಪ್ರಮುಖರಾದ ಆರ್.ಪಿ.ವೆಂಕಟೇಶ್ ಮೂರ್ತಿ, ಸುಬ್ಬಸ್ವಾಮಿ, ಅಪ್ಪಾಜಿಗೌಡ, ಶಿವಶಂಕರಪ್ಪ, ಎಸ್.ಎಸ್.ಪಾಷ, ವೆಂಕ ಟೇಶ್, ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯ ಪುರುಷೋತ್ತಮ್, ನಾಗರಾಜು ಹಾಗೂ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

Translate »