ಅಮೂಲ್ಯ ಹಸ್ತಪ್ರತಿಗಳ ಡಿಜಿಟಲೀಕರಣ ಹಾದಿ ಸುಗಮಗೊಳಿಸಲು ಓಆರ್‍ಐನಲ್ಲಿ ಸಜ್ಜಾಗಿದೆ ಫ್ಯೂಮಿಗೇಷನ್ ಚೇಂಬರ್
ಮೈಸೂರು

ಅಮೂಲ್ಯ ಹಸ್ತಪ್ರತಿಗಳ ಡಿಜಿಟಲೀಕರಣ ಹಾದಿ ಸುಗಮಗೊಳಿಸಲು ಓಆರ್‍ಐನಲ್ಲಿ ಸಜ್ಜಾಗಿದೆ ಫ್ಯೂಮಿಗೇಷನ್ ಚೇಂಬರ್

August 25, 2020

ಮೈಸೂರು, ಆ.24- ಭಾರತೀಯ ಪರಂಪರೆಯ ವೈವಿಧ್ಯಮಯ ಜ್ಞಾನ ಸಂಪತ್ತಾ ಗಿರುವ ತಾಳೆಗರಿ ಹಸ್ತಪ್ರತಿಗಳ ಸಂಗ್ರಹಣೆ ಯೊಂದಿಗೆ ಅವುಗಳ ಸಂರಕ್ಷಣೆಗೆ ಕಾಲಕ್ಕನು ಗುಣವಾಗಿ ಲಭ್ಯವಾಗುವ ಸಂರಕ್ಷಣೆ ವಿಧಾನ ಗಳನ್ನು ಅಳವಡಿಸಿಕೊಳ್ಳುವಲ್ಲಿ ಮುನ್ನಡೆಯುತ್ತಿ ರುವ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋ ಧನಾಲಯ (ಓಆರ್‍ಐ) ಇದೀಗ ಮತ್ತೊಂದು ಸರಳ ಹಾಗೂ ಪರಿಣಾಮಕಾರಿ ವಿಧಾನ ಅಳವಡಿಸಿಕೊಳ್ಳಲು ಸಿದ್ಧತೆ ಪೂರ್ಣಗೊಳಿಸಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ (ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ) ನಿವೃತ್ತ ಅಧೀಕ್ಷಕ ಪುರಾತತ್ವ ರಸಾಯನಶಾಸ್ತ್ರಜ್ಞ ಡಾ.ಸುಬ್ಬರಾಮನ್ ಅವರ ಮಾರ್ಗದರ್ಶನದಲ್ಲಿ ಈ ಸರಳ ಸಂರಕ್ಷಣಾ ವಿಧಾನ ಬಳಸಿಕೊಳ್ಳಲು ಓಆರ್‍ಐ ಮುಂದಾ ಗಿದೆ. ಅದಕ್ಕಾಗಿ `ಫ್ಯೂಮಿಗೇಷನ್ ಚೇಂಬರ್’ (ಧೂಮಕೋಷ್ಠ ಕೊಠಡಿ) ಸಜ್ಜುಗೊಳಿಸಿದ್ದು, ಆ.25ರಂದು ವಿಶ್ವ ಪರಿಸರ ದಿನಾಚರಣೆಯ ಜೊತೆಗೆ ಫ್ಯೂಮಿಗೇಷನ್ ಚೇಂಬರ್ ಅನಾವರಣ ಗೊಂಡು ಸಂರಕ್ಷಣಾ ಪ್ರಕ್ರಿಯೆ ಆರಂಭಿಸಲಿದೆ.

ಈ ಪ್ರಕ್ರಿಯೆ ಬಳಕೆಯಿಂದ ತಾಳೆಗರಿ ಹಸ್ತಪ್ರತಿ ಹಾಗೂ ಕಾಗದ ಹಸ್ತಪ್ರತಿಗಳಲ್ಲಿ ಹುದುಗಿರುವ ಸಾರಂಶವನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುವ ಮೂಲಕ ಡಿಜಿಟಲೀಕರಣಕ್ಕೆ (ಗಣಕೀಕರಣ) ಸಜ್ಜುಗೊಳಿಸಲಾಗುತ್ತಿದೆ. ಓಆರ್‍ಐನಲ್ಲಿ ಸಾವಿ ರಾರು ವರ್ಷಗಳಷ್ಟು ಪ್ರಾಚೀನವಾದ 22 ಸಾವಿರ ಕಟ್ಟುಗಳಿದ್ದು, ಸುಮಾರು 70 ಸಾವಿರ ಶೀರ್ಷಿಕೆ ಹೊಂದಿರುವ ಹಸ್ತಪ್ರತಿಗಳು (ತಾಳೆಗರಿ ಹಾಗೂ ಕಾಗದ ಹಸ್ತಪ್ರತಿ ಸೇರಿ) ಹಾಗೂ 42 ಸಾವಿರಕ್ಕೂ ಅಧಿಕ ಅಮೂಲ್ಯ ಗ್ರಂಥಗಳಿವೆ. ಇವುಗಳಿಗೆ ಡಿಜಿಟಲ್ ಸ್ಪರ್ಶ ನೀಡುವಲ್ಲಿ ಈ ವಿಧಾನ ಪ್ರಮುಖ ಎಂದು ಸಂಸ್ಥೆಯ ತಜ್ಞರು ಹೇಳುತ್ತಾರೆ. ಹೀಗೆ ಡಿಜಿಟಲೀ ಕರಣಕ್ಕೆ ಭದ್ರ ಬುನಾದಿ ಹಾಕಲು ಓಆರ್‍ಐ ಮುಂದಾಗಿದೆ. ಓಆರ್‍ಐ ಉದ್ದೇಶಿಸಿರುವಂತೆ ಡಿಜಿಟಲೀಕರಣವಾದರೆ ಅಂತರ್ಜಾಲ ಸಂಪರ್ಕಿತ ಗಣಕಯಂತ್ರದಲ್ಲಿ ತಾಳೆಗರಿ ಹಾಗೂ ಕಾಗದ ಹಸ್ತಪ್ರತಿ ಜ್ಞಾನದ ಸಾರಂಶ ಸೇರಿದಂತೆ ಅದರ ಅನೇಕ ಆಯಾಮಗಳು ಬೆರಳ ತುದಿಯಲ್ಲಿ ಸಾರ್ವ ಜನಿಕರಿಗೆ ಲಭ್ಯವಾಗಲಿದೆ. ರಾಜನೀತಿ, ಅರ್ಥ ಶಾಸ್ತ್ರ, ಯುದ್ಧ ವಿಜ್ಞಾನ, ವ್ಯಾಪಾರ ನಿರ್ವಹಣೆ, ಆಡಳಿತ, ನಾಗರಿಕ ಕಾನೂನು ಕುರಿತ ಒಂದು ಕೃತಿಯಾದ `ಕೌಟಿಲ್ಯನ ಅರ್ಥಶಾಸ್ತ್ರ’ ಗ್ರಂಥದ ಮೂಲ ತಾಳೆಗರಿ ಹಸ್ತಪ್ರತಿ ಇಲ್ಲಿರುವುದು ವಿಶೇಷ.

`ಭಾರತೀಯ ಸಂಪ್ರದಾಯಕ ವಿಧಾನದೊಂದಿಗೆ ಆಧುನಿಕ ಪ್ರಯೋಗಾಲಯದಲ್ಲಿ ವೈಜ್ಞಾನಿಕವಾಗಿ ಸಾಬೀತುಗೊಂಡಿರುವ ವಿಧಾನಗಳ ಸಂಮಿಶ್ರಣ ದೊಂದಿಗೆ ಈ ವಿಧಾನ ಚಾಲ್ತಿಗೆ ಬಂದಿದೆ. ಈ ವಿಧಾನದಲ್ಲಿ ಪ್ರಮುಖವಾಗಿ ರಸಾಯನಿಕ ಬಳಕೆ ಇದೆ. ಇದು ಹಸ್ತಪ್ರತಿ ಸಂರಕ್ಷಣೆಯಲ್ಲಿ ಪ್ರಮುಖ ವಿಧಾನವಾಗಿದ್ದು, ಬಹುತೇಕ ಎಲ್ಲಾ ಕಡೆಗಳಲ್ಲಿ ಹಸ್ತಪ್ರತಿ ಸಂರಕ್ಷಣೆಗೆ ಇದೇ ವಿಧಾನ ಬಳಸು ವುದು ಹೆಚ್ಚು. ಮೊದಲ ಹಂತದಲ್ಲಿ ಧೂಳು ಶುಚಿ ಗೊಳಿಸಬೇಕು. ಆ ಬಳಿಕ ಹಲವು ಹಂತದಲ್ಲಿ ಪ್ರಕ್ರಿಯೆ ನಡೆಯಲಿದೆ. ಈ ವಿಧಾನ ಡಿಜಿಟಲೀ ಕರಣದ ಪ್ರಾಥಮಿಕ ಪ್ರಕ್ರಿಯೆ ಎನ್ನಬಹುದು’ ಎನ್ನುತ್ತಾರೆ ಓಆರ್‍ಐನಲ್ಲಿ ಸಂರಕ್ಷಣಾ ವಿಧಾನ ದಲ್ಲಿ ತೊಡಗಿಸಿಕೊಂಡಿರುವ ಡಾ.ರೋಹಿತ್ ಈಶ್ವರ್. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಓಆರ್‍ಐನ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ, ಪ್ರತಿ ಮೂರು ವರ್ಷಕ್ಕೊಮ್ಮೆ ಸೂಕ್ತ ಉಪಚಾರ ನೀಡಿದರೆ ಸಾವಿರ ವರ್ಷದವರೆಗೆ ಹಸ್ತಪ್ರತಿಗಳ ಸಂರಕ್ಷಣೆ ಸಾಧ್ಯ. ಇವುಗಳನ್ನು ಸಂರಕ್ಷಣೆ ಮಾಡದಿದ್ದರೆ ಅವುಗಳಲ್ಲಿನ ಜ್ಞಾನ ನಾಶವಾಗಲಿದೆ.

ಸಂರಕ್ಷಣೆ ಕುರಿತಂತೆ ಪರಿಣಿತಿ ಹೊಂದಿರುವ ತಜ್ಞರ ಮಾರ್ಗದರ್ಶನದೊಂದಿಗೆ üವಿಧಾನ ಗಳನ್ನು ಅಳವಡಿಸಿಕೊಳ್ಳುವ ನಿರಂತರ ಪ್ರತಿಕ್ರಿಯೆಯಲ್ಲಿ ಸಂಸ್ಥೆ ತೊಡಗಿದೆ. ಈಗಿನ ವಿಧಾನ ಸರಳ ಹಾಗೂ ಪರಿಣಾಮ ಕಾರಿ. ಬೇವಿನ ಎಲೆಗಳ ಮೂಲಕ ತಾಳೆಗರಿ ಗಳಿಗೆ ಉಪಚಾರ ನೀಡುವ ವಿಧಾನವೂ ಸಂಸ್ಥೆಯಲ್ಲಿ ಬಳಕೆಯಲ್ಲಿದೆ. ಬೇವಿನ ಎಲೆ ವಾಸನೆಗೆ ಕೀಟ ಗಳು ನಾಶವಾಗುತ್ತವೆ. ಬಳಿಕ ಹಸ್ತಪ್ರತಿ ಶುಚಿಗೊಳಿಸುತ್ತೇವೆ. ನಂತರ ಫ್ಯೂಮಿ ಗೇಷನ್ ಮಾಡುತ್ತೇವೆ ಎಂದು ತಿಳಿಸಿದರು.

ಎಂ.ಬಿ.ಪವನ್‍ಮೂರ್ತಿ

Translate »