ಕೇಂದ್ರ ಸಚಿವರಿಂದ ಇಂದು ಇಎಸ್‍ಐ ಆಸ್ಪತ್ರೆ ಲೋಕಾರ್ಪಣೆ
ಮೈಸೂರು

ಕೇಂದ್ರ ಸಚಿವರಿಂದ ಇಂದು ಇಎಸ್‍ಐ ಆಸ್ಪತ್ರೆ ಲೋಕಾರ್ಪಣೆ

November 28, 2018
  • 2012ರಲ್ಲಿ ಆರಂಭವಾಗಿದ್ದ ಆಸ್ಪತ್ರೆಯ ಪುನರ್ ನಿರ್ಮಾಣ
  • 34.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

ಮೈಸೂರು: ಮೈಸೂರು-ಕೆಆರ್‍ಎಸ್ ಮುಖ್ಯ ರಸ್ತೆಯಲ್ಲಿರುವ ನವೀ ಕರಿಸಲ್ಪಟ್ಟ 100 ಹಾಸಿಗೆಗಳ ಇಎಸ್‍ಐ ಆಸ್ಪತ್ರೆಯನ್ನು ನಾಳೆ (ನ.28) ಬೆಳಿಗ್ಗೆ 10.30ಕ್ಕೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಉದ್ಘಾಟಿಸಲಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ಇಎಸ್‍ಐ ಆಸ್ಪತ್ರೆಯ ಹೊಸ ಕಟ್ಟಡ ವನ್ನು ಮಂಗಳವಾರ ಪರಿಶೀಲಿಸಿ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿರುವ ಇಎಸ್‍ಐ ಆಸ್ಪತ್ರೆ ಯನ್ನು ಮೇಲ್ದರ್ಜೆಗೇರಿಸುವುದ ರೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ 24.28 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆ ಸುವುದಕ್ಕೆ ಅಂದಿನ ಕೇಂದ್ರದ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದರು. 2011ರ ಫೆ.19ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 2012ರ ಜೂನ್‍ನಲ್ಲಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಳಪೆ ಕಾಮಗಾರಿ ಸೇರಿದಂತೆ ವಿವಿಧ ಕಾರಣಗಳಿಂದ ಕೆಲ ವರ್ಷ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. 2014ರಲ್ಲಿ ಕೇಂದ್ರ ದಲ್ಲಿ ನಮ್ಮ ಸರ್ಕಾರ ಬಂದ ನಂತರ ಇಎಸ್‍ಐ ಆಸ್ಪತ್ರೆಯ ಕಾಮಗಾರಿ ಯನ್ನು ಪೂರ್ಣಗೊಳಿಸುವುದಕ್ಕಾಗಿ ಹೆಚ್ಚುವರಿ ಯಾಗಿ 10 ಕೋಟಿ ರೂ. ನೀಡಲಾಯಿತು. ಇದೀಗ ಆಸ್ಪತ್ರೆಯ ಕಟ್ಟಡ ಪೂರ್ಣಗೊಂಡಿದೆ. ಇನ್ನಷ್ಟು ಉಪಕರಣ ಗಳ ಅಗತ್ಯವಿದೆ. ಅವುಗಳನ್ನು ಪೂರೈಸುವು ದಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನವೀಕರಿಸಲ್ಪಟ್ಟ 100 ಹಾಸಿ ಗೆಗಳ ಆಸ್ಪತ್ರೆಯನ್ನು ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ನಾಳೆ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಸಚಿವರುಗಳಾದ ಜಿ.ಟಿ.ದೇವೇಗೌಡ, ವೆಂಕಟರಮಣಪ್ಪ, ಸಾ.ರಾ.ಮಹೇಶ್, ಸಂಸದರು ಗಳಾದ ಪ್ರತಾಪ ಸಿಂಹ, ಆರ್.ಧ್ರುವನಾರಾಯಣ್, ಎಲ್.ಆರ್.ಶಿವರಾಮೇ ಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಶಾಸಕರುಗಳಾದ ಎ.ಹೆಚ್.ವಿಶ್ವನಾಥ್, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದ ರಾಮಯ್ಯ, ಅನಿಲ್ ಚಿಕ್ಕಮಾದು, ಕೆ.ಮಹದೇವ, ಅಶ್ವಿನ್‍ಕುಮಾರ್, ಹರ್ಷ ವರ್ಧನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಲ್. ನಾಗೇಂದ್ರ ವಹಿಸಲಿದ್ದಾರೆ ಎಂದರು.

1.27ಲಕ್ಷ ಕಾರ್ಮಿಕರಿಗೆ ಸೌಲಭ್ಯ: ಮೈಸೂರು ನಗರದಲ್ಲಿ ಕೂರ್ಗಳ್ಳಿ, ನಂಜನಗೂಡು ಸೇರಿದಂತೆ ಹತ್ತು ಕೈಗಾರಿಕಾ ಪ್ರದೇಶಗಳಿವೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 1.27 ಲಕ್ಷ ಕಾರ್ಮಿಕರು ಈ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಾಗಿದ್ದು, ತುರ್ತು ಸನ್ನಿವೇಶ ಇದ್ದರೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗು ತ್ತದೆ ಎಂದು ತಿಳಿಸಿದರು.
10 ಕೋಟಿ ಪ್ರಸ್ತಾವನೆ: ಅಲ್ಟ್ರಾಸೌಂಡ್, ಡಿಜಿಟಲ್ ಸ್ಕ್ಯಾನಿಂಗ್, ಡಯಾಲಿಸಿಸ್ ಘಟಕ ಸೇರಿದಂತೆ ಇನ್ನಿತರ ಉಪಕರಣ ಗಳಿಗಾಗಿ 10 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

100 ಹುದ್ದೆಗಳ ಕೊರತೆ: ಇದೇ ವೇಳೆ ಇಎಸ್‍ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವೀರೇಶ್‍ಕುಮಾರ್ ಮಾತನಾಡಿ, ಸದ್ಯ ಇರುವ ವ್ಯವಸ್ಥೆಯಲ್ಲೇ ನಿರ್ವಹಣೆ ಮಾಡುತ್ತಿದ್ದೇವೆ. ಆಸ್ಪತ್ರೆಯಲ್ಲಿ ಒಬ್ಬರೇ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಇದ್ದಾರೆ. ಕೆಲವು ವಿಭಾಗಗಳಲ್ಲಿ ವೈದ್ಯರೇ ಇಲ್ಲ. ಒತ್ತಡ ನಿರ್ವಹಿಸಲಾಗದೆ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗೆ ಕೆಲ ರೋಗಿ ಗಳನ್ನು ರವಾನಿಸುತ್ತೇವೆ. ಆಸ್ಪತ್ರೆಯಲ್ಲಿ 204 ಹುದ್ದೆಗಳಿದ್ದು, 88 ಹುದ್ದೆಗಳಷ್ಟೇ ಸಿಬ್ಬಂದಿ ಇದ್ದಾರೆ. ಉಳಿದ ಹುದ್ದೆಗಳು ಖಾಲಿ ಯಿರುವುದ ರಿಂದ ರೋಗಿಗಳಿಗೆ ಪರಿ ಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಹೊಸ ಕಟ್ಟಡದಲ್ಲಿ ಸರ್ಕಾರ ಆಯುಷ್, ಹೋಮಿಯೋ ಪತಿ, ಆಯುರ್ವೇದ ಚಿಕಿತ್ಸಾ ಕೇಂದ್ರ ಸ್ಥಾಪಿ ಸಲು ಅನುಮೋದನೆ ನೀಡಿದೆ. ಶಸ್ತ್ರ ಚಿಕಿತ್ಸೆಯ ಉಪಕರಣಕ್ಕೆ ಮಂಜೂರಾತಿ ಕೋರಿ ಮನವಿ ಮಾಡಲಾಗಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ಚಂದ್ರಕಲಾ, ಡಾ.ಎನ್.ಸಿ.ರವೀಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »