ದಸರಾ ಮುಗಿದರೂ ಮೈಸೂರಿಗೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು
ಮೈಸೂರು

ದಸರಾ ಮುಗಿದರೂ ಮೈಸೂರಿಗೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು

October 9, 2022

ಎಲ್ಲಾ ಪ್ರವಾಸಿ ತಾಣಗಳಲ್ಲಿ ಜನವೋ ಜನ

ಅರಮನೆ ಸುತ್ತಮುತ್ತ ಕಾಲಿಡುವುದು ಕಷ್ಟ ಕಷ್ಟ
ದೀಪಾಲಂಕಾರಕ್ಕೆ ಮಾರು ಹೋದ ಪ್ರವಾಸಿಗರು

ಎಲ್ಲೆಡೆ ವಾಹನ ದಟ್ಟಣೆ; ಆದರೂ ಸಂಭ್ರಮಾಚರಣೆ

ವಸ್ತುಪ್ರದರ್ಶನ, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟದಲ್ಲಿ ಜನಜಾತ್ರೆ ದೀಪಾಲಂಕಾರಕ್ಕೆ ಮುಗಿಬಿದ್ದ ಜನ

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಲ್ಲೊಂದಾದ ಜಗಮಗಿ ಸುವ ದೀಪಾಲಂಕಾರ ಅವಧಿಯನ್ನು ಅ.೧೦ರವರೆಗೆ ವಿಸ್ತರಣೆ ಮಾಡಿದ್ದು, ಶನಿವಾರವೂ ಲಕ್ಷಾಂತರ ಜನ ದೀಪಾ ಲಂಕಾರ ಸವಿದರು. ವಾಹನಗಳÀ ಮೂಲಕ ರಸ್ತೆಗಳನ್ನು ಸುತ್ತುಹಾಕಿ ಪ್ರಮುಖ ವೃತ್ತ ಗಳು ಸೇರಿದಂತೆ ಅತ್ಯಾಕರ್ಷಕ ದೀಪಾ ಲಂಕಾರವಿರುವ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರ ಹಾಗೂ ವಾಹನ ನಿಲುಗಡೆಗೆ ನಿರ್ಬಂಧ ಇರು ವುದರಿಂದ ಸೂಕ್ತ ಸ್ಥಳದಲ್ಲಿ ವಾಹನ ವನ್ನು ನಿಲ್ಲಿಸಿ ನಡೆದೇ ದೀಪಾಲಂ ಕಾರವನ್ನು ಕಣ್ತುಂಬಿಕೊAಡರುಮೈಸೂರಿನ ಚಾಮರಾಜ ಒಡೆಯರ್ ವೃತ್ತದಲ್ಲಿ ದೀಪಾಲಂಕಾರ ಸವಿಯುತ್ತಿರುವ ಜನಸಮೂಹ.

ಮೈಸೂರು,ಅ.೮(ಎಸ್‌ಬಿಡಿ)- ದಸರಾ ಸಂಪನ್ನಗೊAಡರೂ ಮೈಸೂರಿಗೆ ಪ್ರವಾ ಸಿಗರ ದಂಡೇ ಹರಿದುಬರುತ್ತಿದ್ದು, ಶನಿ ವಾರ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಲ್ಲೂ ನೂಕುನುಗ್ಗಲು ಉಂಟಾಗಿತ್ತು.

ವಿಶ್ವದ ಪ್ರಮುಖ ಪ್ರವಾಸಿ ಕೇಂದ್ರಗಳ ಲ್ಲೊಂದಾದ ಮೈಸೂರು, ಕೋವಿಡ್ ಪರಿ ಣಾಮ ೨ ವರ್ಷಗಳಿಂದ ಮಂಕಾಗಿತ್ತು. ಸದ್ಯ ಅದ್ಧೂರಿ ದಸರಾ ಪರಿಣಾಮ ಪ್ರವಾ ಸೋದ್ಯಮದ ಚೇತರಿಕೆ ಜೊತೆಗೆ ಹೋಟೆಲ್ ಉದ್ಯಮ ಸೇರಿ ಎಲ್ಲಾ ಹಂತದ ವ್ಯಾಪಾರ ವಹಿವಾಟಿನಲ್ಲಿ ನವೋಲ್ಲಾಸ ಮೂಡಿಸಿದೆ. ಜಂಬೂಸವಾರಿ, ಪಂಜಿನ ಕವಾಯತು ಮೂಲಕ ದಸರೆಗೆ ತೆರೆಬಿದ್ದಿದ್ದರೂ ಪ್ರವಾ ಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡು ತ್ತಿರುವುದರಿಂದ ಮೈಸೂರು ಪ್ರವಾಸೋ ದ್ಯಮಕ್ಕೆ ಬೂಸ್ಟರ್ ನೀಡಿದಂತಾಗಿದೆ.

ಸದ್ಯ ಶಾಲಾ-ಕಾಲೇಜು ದಸರಾ ರಜೆ ಮುಗಿ ಯುವ ಹಂತದಲ್ಲಿರುವ ಕಾರಣ ಶನಿವಾರ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾ ಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳು, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾ ರಾಷ್ಟç ಸೇರಿದಂತೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಮೈಸೂ ರಿನ ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿ ಕೊಂಡರು. ದಸರಾ ದೀಪಾಲಂಕಾರ ವಿಸ್ತರಿ ಸಿರುವ ಹಿನ್ನೆಲೆಯಲ್ಲಿ ಅನೇಕ ಮಂದಿ ಮೈಸೂರಲ್ಲಿ ತಂಗಿರುವುದರಿAದ ಹೋಟೆಲ್ ಗಳೂ ಬಹುತೇಕ ಭರ್ತಿಯಾಗಿವೆ.

ಅರಮನೆಗೆ ಲಗ್ಗೆ: ಅಂಬಾವಿಲಾಸ ಅರ ಮನೆಗೆ ಶನಿವಾರ ವಿದೇಶಿಯರು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೨೫೬೫೮ ವೀಕ್ಷಕರು ಭೇಟಿ ನೀಡಿದ್ದರು. ವಾಹನ ಪಾರ್ಕಿಂಗ್ ಸ್ಥಳ ಸಂಪೂರ್ಣ ಭರ್ತಿ ಯಾಗಿ ಬನುಮಯ್ಯ ರಸ್ತೆ, ಪಾಠಶಾಲೆ ವೃತ್ತದ ಬಳಿ ಹೀಗೆ ಕಂಡ ಕಂಡಲ್ಲಿ ಪ್ರವಾಸಿ ವಾಹನಗಳನ್ನು ನಿಲ್ಲಿಸಿಕೊಂಡಿದ್ದು ಕಂಡುಬAದಿತು. ನವರಾತ್ರಿ ಸಂದರ್ಭದಲ್ಲಿ ೧ ಲಕ್ಷ ಮಂದಿ ಅರಮನೆ ಸೊಬಗನ್ನು ಆಸ್ವಾದಿಸಿರುವುದು ಗಮನಾರ್ಹ.

ಮೃಗಾಲಯದಲ್ಲೂ ರಶ್: ಪ್ರವಾಸಕ್ಕೆ ಬಂದವರು ಮೈಸೂರು ಮೃಗಾಲಯ ವೀಕ್ಷಿ ಸದೆ ವಾಪಸ್ಸಾಗುವುದು ಅತ್ಯಂತ ವಿರಳ. ಹಾಗೆಯೇ ಶನಿವಾರವೂ ಅಧಿಕ ಸಂಖ್ಯೆಯ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿ, ಪ್ರಾಣಿ-ಪಕ್ಷಿ, ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊAಡರು. ಇಂದು ೨೫ ಸಾವಿ ರಕ್ಕೂ ಹೆಚ್ಚು ಮಂದಿ ವೀಕ್ಷಕರು ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಈ ನಿಖರ ಅಂಕಿ ಅಂಶ ತಿಳಿಯಬೇಕಿದೆ. ಆಯುಧಪೂಜೆ ದಿನ ೨೩,೩೫೦ ಹಾಗೂ ವಿಜಯದಶಮಿ ಯಂದು ೩೬,೪೨೦ ಸೇರಿ ದಸರಾದ ೧೦ ದಿನಗಳಲ್ಲಿ ೧.೫೫ ಲಕ್ಷ ಮಂದಿ ಮೃಗಾ ಲಯ ವೀಕ್ಷಿಸಿದ್ದಾರೆ. ಪಕ್ಕದ ಕಾರಂಜಿ ಕೆರೆಗೂ ನಿತ್ಯ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. ದಸರಾ ವಸ್ತು ಪ್ರದರ್ಶನ ದಲ್ಲೂ ಜನದಟ್ಟಣೆ ಹೆಚ್ಚಾಗಿತ್ತು.

ಭಕ್ತರು ದೌಡು: ಮೈಸೂರಿನ ದೈವಿಕ್ಷೇತ್ರ ಚಾಮುಂಡಿಬೆಟ್ಟದ ತಾಯಿ ಚಾಮುಂಡೇ ಶ್ವರಿ ದರ್ಶನಕ್ಕೆ ಇಂದು ಹೆಚ್ಚಿನ ಭಕ್ತರು ಆಗಮಿಸಿದ್ದರು. ಸರತಿಯಲ್ಲಿ ಸಾಗಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ಕೃಪಾರ್ಥರಾದರು. ವ್ಯೂ ಪಾಯಿಂಟ್ ನಿಂದ ಮೈಸೂರು ನಗರದ ಸೌಂದರ್ಯ ಸವಿಯಲು, ಬೆಟ್ಟದ ಪ್ರಕೃತಿ ಸೊಬಗಲ್ಲಿ ಆನಂದಿಸುವ ಸಲುವಾಗಿಯೂ ನೂರಾರು ಮಂದಿ ಭೇಟಿ ನೀಡಿದ್ದರು. ನವರಾತ್ರಿ ದಿನಗಳಲ್ಲೂ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಮೂಹವೇ ಹರಿದುಬಂದಿತ್ತು.

ವ್ಯಾಪಾರಿಗಳಿಗೆ ಸಂತಸ: ದಸರಾ ಮಹೋತ್ಸವ ಹೋಟೆಲ್ ಉದ್ಯಮ ಸೇರಿ ದಂತೆ ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಎಲ್ಲಾ ಹಂತದ ವರ್ತಕರಿಗೂ ಹೊಸ ಚೈತನ್ಯ ನೀಡಿದೆ. `ವಸತಿ ಸೌಕರ್ಯ ವುಳ್ಳ ಮೈಸೂರಿನ ಎಲ್ಲಾ ಹೋಟೆಲ್‌ಗಳೂ ಶನಿವಾರ ಹಾಗೂ ಭಾನುವಾರ ಬಹು ತೇಕ ಭರ್ತಿಯಾಗಿವೆ. ದಸರಾ ದೀಪಾ ಲಂಕಾರ ಅವಧಿಯನ್ನು ವಿಸ್ತರಣೆ ಮಾಡಿ ರುವುದೂ ಇದಕ್ಕೆ ಕಾರಣ’ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ವಾಹನ ದಟ್ಟಣೆ: ಮಧ್ಯಾಹ್ನದ ನಂತರ ಅರಮನೆ ಸುತ್ತ ಶನಿವಾರ ವಾಹನ ದಟ್ಟಣೆ ನಿರ್ಮಾಣವಾಗಿತ್ತು. ಅದರಲ್ಲೂ ನ್ಯೂ ಸಯ್ಯಾಜಿರಾವ್ ರಸ್ತೆ ಮೈಸೂರು ನಗರ ಪಾಲಿಕೆ ಬಳಿ ವೃತ್ತದಲ್ಲಿ ನಾಲ್ಕು ಕಡೆ ಯಿಂದ ಬಂದ ವಾಹನಗಳು ತಿರುವು ಪಡೆಯಲಾಗದೆ ಕೆಲಹೊತ್ತು ನಿಂತಲ್ಲೇ ನಿಂತಿದ್ದವು. ಇಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಸಂಚಾರ ಅಸ್ತವ್ಯಸ್ತವಾ ಗಿತ್ತು. ಚಾಮರಾಜ ಜೋಡಿ ರಸ್ತೆಯ ಪಾಠಶಾಲೆ ಸಿಗ್ನಲ್, ನೀಲಗಿರಿ ರಸ್ತೆ ಕುಸ್ತಿ ಅಖಾಡ, ಇಟ್ಟಿಗೆ ಗೂಡು ರಸ್ತೆ ಜಂಕ್ಷನ್, ಹಾರ್ಡಿಂಜ್ ವೃತ್ತ, ಚಾಮರಾಜ ವೃತ್ತ ದಲ್ಲೂ ವಾಹನ ದಟ್ಟಣೆ ಉಂಟಾಗಿತ್ತು.

Translate »